Picsart 25 09 03 08 02 21 955 scaled

ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿಸುದ್ದಿ: ಅಕ್ಟೋಬರ್-ನವೆಂಬರ್‌ನಲ್ಲಿ 8ನೇ ವೇತನ ಆಯೋಗ ಸಮಿತಿ ರಚನೆ

Categories:
WhatsApp Group Telegram Group

ಭಾರತದಲ್ಲಿ ಸರ್ಕಾರೀ ನೌಕರರು (Government employees) ಮತ್ತು ಪಿಂಚಣಿದಾರರ (of pensioners) ಜೀವನಮಟ್ಟವನ್ನು ಸುಧಾರಿಸಲು ಪ್ರತೀ ಹತ್ತು ವರ್ಷಕ್ಕೊಮ್ಮೆ ವೇತನ ಆಯೋಗ ರಚಿಸಲಾಗುತ್ತದೆ. ಇವು ಕೇವಲ ವೇತನ ಹೆಚ್ಚಳಕ್ಕೆ ಮಾತ್ರ ಸೀಮಿತವಲ್ಲ, ಬದಲಿಗೆ ದೈನಂದಿನ ಜೀವನಕ್ಕೆ ಅಗತ್ಯವಾದ ಭತ್ಯೆಗಳು, ಪಿಂಚಣಿ ಪರಿಷ್ಕರಣೆ, ಹಣದುಬ್ಬರ ನಿಯಂತ್ರಣಕ್ಕೆ ಅನುಗುಣವಾಗಿ ಸಂಬಳವನ್ನು ಹೊಂದಿಸುವ ಮಹತ್ವದ ಪ್ರಕ್ರಿಯೆಯಾಗಿರುತ್ತದೆ. 2016ರಲ್ಲಿ ಜಾರಿಯಾದ 7ನೇ ವೇತನ ಆಯೋಗದ ನಂತರ, ಇದೀಗ ಕೇಂದ್ರ ಸರ್ಕಾರಿ ನೌಕರರು (Central government employees) ಬಹುನಿರೀಕ್ಷಿತ 8ನೇ ವೇತನ ಆಯೋಗಕ್ಕಾಗಿ ಕಾದು ಕುಳಿತಿದ್ದಾರೆ. ಕಳೆದ ಕೆಲ ತಿಂಗಳುಗಳಿಂದ ಈ ಕುರಿತು ಅನೇಕ ವದಂತಿಗಳು ಹರಿದಾಡುತ್ತಿದ್ದರೂ, ಇದೀಗ ಸ್ಪಷ್ಟ ಮಾಹಿತಿ ಹೊರಬಿದ್ದಿದ್ದು, ನೌಕರರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

8ನೇ ವೇತನ ಆಯೋಗ ಯಾವಾಗ ಜಾರಿಗೆ ಬರಬಹುದು?:

ಮೂಲಗಳ ಪ್ರಕಾರ, ಜನವರಿ 1, 2026ರಿಂದಲೇ 8ನೇ ವೇತನ ಆಯೋಗ ಜಾರಿಯಾಗುವ ಸಾಧ್ಯತೆ ಇದೆ. ಅಂದರೆ, ಏಳನೇ ವೇತನ ಆಯೋಗ (7th Pay Commission) ಜಾರಿಯಾದ ಹತ್ತು ವರ್ಷಗಳ ನಂತರ, ಮತ್ತೆ ಹೊಸ ಪರಿಷ್ಕರಣೆ ಜಾರಿಗೆ ಬರುವಂತಾಗಿದೆ. ನೌಕರರ ಸಂಘಟನೆಗಳು ಕೂಡ ಇದೇ ದಿನಾಂಕದಿಂದಲೇ ಜಾರಿಯಾಗುವಂತೆ ಒತ್ತಾಯಿಸಿವೆ.

ಈ ಆಯೋಗ ರಚನೆಯಾದ ನಂತರ:
ವೇತನ ಹೆಚ್ಚಳ,
ಫಿಟ್‌ಮೆಂಟ್ ಅಂಶ,
ತುಟ್ಟಿ ಭತ್ಯೆ (DA) ಲಿಂಕ್,
ಹೊಸ ವೇತನ ಮ್ಯಾಟ್ರಿಕ್ಸ್,
ಪಿಂಚಣಿ ಪರಿಷ್ಕರಣೆ
ಇವುಗಳ ಕುರಿತು ಚರ್ಚೆ ಪ್ರಾರಂಭವಾಗಲಿದೆ.

ಸಮಿತಿ ರಚನೆ ಮತ್ತು ಪ್ರಕ್ರಿಯೆ(Committee composition and process) :

ಮೂಲಗಳ ಪ್ರಕಾರ, ಅಕ್ಟೋಬರ್ 2025 ಅಂತ್ಯ ಅಥವಾ ನವೆಂಬರ್ 2025 ಆರಂಭದಲ್ಲಿ 8ನೇ ವೇತನ ಆಯೋಗ ಸಮಿತಿ ರಚನೆಯಾಗುವ ನಿರೀಕ್ಷೆಯಿದೆ. ಸಮಿತಿ ರಚನೆಯಾದ ನಂತರ ಸಚಿವಾಲಯಗಳು, ಕಾರ್ಮಿಕ ಸಂಘಟನೆಗಳೊಂದಿಗೆ ಸಭೆಗಳು ನಡೆಯುತ್ತವೆ. ಬಳಿಕ ಶಿಫಾರಸುಗಳನ್ನು ಒಳಗೊಂಡ ವರದಿ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ.

ನೌಕರರಿಗೆ ಖುಷಿ ಕೊಡುವ ಅಂಶಗಳು ಹೀಗಿವೆ:

8ನೇ ಆಯೋಗದಡಿ ಹಣದುಬ್ಬರದ ಪ್ರಮಾಣವನ್ನು ಶೇ. 6-7ರಷ್ಟು ನಿಗದಿ ಪಡಿಸುವ ಸಾಧ್ಯತೆ ಇದೆ.
ವೇತನದಲ್ಲಿ ಸಾವಿರಾರು ಮತ್ತು ಪಿಂಚಣಿಯಲ್ಲಿ ಲಕ್ಷಾಂತರ ರೂಪಾಯಿಗಳ ಹೆಚ್ಚಳವಾಗುವ ನಿರೀಕ್ಷೆ ಇದೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಡಿಎ (Dearness Allowance) ಹೆಚ್ಚಳದ ಸಿಹಿಸುದ್ದಿ ನೀಡಲು ತಯಾರಿ ನಡೆಸುತ್ತಿದೆ.

ಈ ಕುರಿತಾಗಿ ಯಾವ ರೀತಿಯ ನಿರೀಕ್ಷೆಗಳು ಇವೆ:

7ನೇ ವೇತನ ಆಯೋಗ ಜನವರಿ 1, 2016 ರಂದು ಜಾರಿಯಾಗಿತ್ತು.
ಹೀಗಾಗಿ, ಈಗ ನೌಕರರ ನಿರೀಕ್ಷೆ ಜನವರಿ 1, 2026ರಿಂದಲೇ ಎಂಟನೇ ಆಯೋಗ ಜಾರಿಯಾಗಬೇಕು ಎಂಬುದಾಗಿದೆ.
ನೌಕರರ ಸಂಘಟನೆಯ ಶಿವಗೋಪಾಲ್ ಮಿಶ್ರಾ (Shivgopal Mishra of the employees’ organization) ಅವರ ಅಭಿಪ್ರಾಯದಂತೆ, ವೇತನ ಆಯೋಗ ಶಿಫಾರಸು ಜಾರಿಗೆ ತರಲು ಹತ್ತು ವರ್ಷಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಳ್ಳಬಾರದು.

ಒಟ್ಟಾರೆಯಾಗಿ, ಭಾರತದಾದ್ಯಂತ 1 ಕೋಟಿಗೂ ಹೆಚ್ಚು ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಈ ವೇತನ ಪರಿಷ್ಕರಣೆಗೆ ಕಾಯುತ್ತಿದ್ದಾರೆ. 8ನೇ ವೇತನ ಆಯೋಗ (8th pay commission) ಜಾರಿಯಾದರೆ, ಅವರ ಜೀವನಮಟ್ಟ ಸುಧಾರಿಸುವುದರ ಜೊತೆಗೆ ಆರ್ಥಿಕ ಸ್ಥಿತಿಗತಿಗಳಲ್ಲೂ ದೊಡ್ಡ ಬದಲಾವಣೆಯನ್ನು ತರುವುದು ಖಚಿತ. ಇದೀಗ ಕೇಂದ್ರ ಸರ್ಕಾರದ ಅಧಿಕೃತ ಘೋಷಣೆಯತ್ತ ಎಲ್ಲಾ ಕಣ್ಣುಗಳು ಬಿದ್ದಿವೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories