Picsart 25 11 08 22 45 02 012 scaled

ಈ ತಾಲ್ಲೂಕಿನ 68 ಗ್ರಾಮಗಳು ನೆಲಮಂಗಲಕ್ಕೆ ಸೇರಿಕೆ: ಬೆಂಗಳೂರು ವಿಸ್ತರಣೆ ಮತ್ತಷ್ಟು ಚುರುಕು

Categories:
WhatsApp Group Telegram Group

ಬೆಂಗಳೂರು ದೇಶದ ಅತ್ಯಂತ ವೇಗವಾಗಿ ವಿಸ್ತರಿಸುತ್ತಿರುವ ನಗರಗಳಲ್ಲಿ ಒಂದು. ಐಟಿ, ಉದ್ಯಮ, ಮೂಲಸೌಕರ್ಯ ಹೂಡಿಕೆ, ಹೊಸ ವಿಮಾನ ನಿಲ್ದಾಣ ಯೋಜನೆ ಹಾಗೂ ಆಡಳಿತಾತ್ಮಕ ಸುಧಾರಣೆಗಳಿಂದಾಗಿ ನಗರದ ವಿಸ್ತರಣೆ ಸುತ್ತಮುತ್ತಲಿನ ತಾಲ್ಲೂಕುಗಳವರೆಗೂ ತಲುಪಿದೆ. ನಗರಾಭಿವೃದ್ಧಿಯಲ್ಲಿ ಈಗ ಮಾಗಡಿ ತಾಲ್ಲೂಕಿನ 68 ಗ್ರಾಮಗಳು ನೇರವಾಗಿ ನೆಲಮಂಗಲ ತಾಲ್ಲೂಕಿನೊಂದಿಗೆ ಸೇರ್ಪಡೆಗೊಂಡಿದ್ದು, ಇದು ಸ್ಥಳೀಯ ಆಡಳಿತ, ಮೂಲಸೌಕರ್ಯ ಮತ್ತು ಭೂಮಿ ಮೌಲ್ಯದ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುವ ನಿರೀಕ್ಷೆ ಇದೆ.

ಬೆಂಗಳೂರು ನಂತರ ಬೆಂಗಳೂರು ಸಮೀಪದ ಜಿಲ್ಲೆಗಳಲ್ಲೂ ಆಯಾ ಜಿಲ್ಲೆಗಳ ಬ್ರಾಂಡ್ ವ್ಯಾಲ್ಯೂ ಬಳಸಿಕೊಂಡು ಭೂಮಿ ಬೆಲೆ ಹೆಚ್ಚಳವಾಗುವುದಕ್ಕೆ ಸರ್ಕಾರವು ಪರೋಕ್ಷ ವೇದಿಕೆ ಕಲ್ಪಿಸಲು ಚಿಂತನೆ ನಡೆಸುತ್ತಿದೆ. ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಪರಿವರ್ತಿಸಿರುವ ಸರ್ಕಾರ ಈಗ ಬೆಂಗಳೂರು ಗ್ರಾಮಾಂತರವನ್ನು ಬೆಂಗಳೂರು ಉತ್ತರ ಎಂದು ಪರಿವರ್ತಿಸುವ ಸಾಧ್ಯತೆಗಳು ಇವೆ. ಇಂಥ ಪರಿವರ್ತನೆಗಳು ಕೇವಲ ಆಡಳಿತಾತ್ಮಕ ಬದಲಾವಣೆಗಳಲ್ಲ, ರಿಯಲ್ ಎಸ್ಟೇಟ್ ಮೌಲ್ಯವನ್ನು ನೇರವಾಗಿ ಹೆಚ್ಚಿಸುವ ಪ್ರಮುಖ ಕಾರಣಗಳಾಗುತ್ತವೆ.
ಈ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಪ್ರಾಧಿಕಾರ ರಚನೆ, ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಯೋಜನೆ, ಮತ್ತು ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿಯ 68 ಗ್ರಾಮಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿಗೆ ಸೇರಿಸುವುದಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಈ ಎಲ್ಲಾ ಬದಲಾವಣೆಗಳು ಬೆಂಗಳೂರಿನ ನಗರ ವಿಸ್ತರಣೆಯನ್ನು ಮತ್ತಷ್ಟು ವೇಗಗೊಳಿಸುತ್ತಿವೆ.

ಯಾವ ಗ್ರಾಮಗಳು ಸೇರ್ಪಡೆಯಾಗಿವೆ?:

ಕಂದಾಯ ಇಲಾಖೆ ಅಕ್ಟೋಬರ್ 27 ರಂದು ಹೊರಡಿಸಿದ ಅಂತಿಮ ಅಧಿಸೂಚನೆ ಮೂಲಕ ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿಯ 68 ಗ್ರಾಮಗಳನ್ನು ನೆಲಮಂಗಲ ತಾಲ್ಲೂಕಿಗೆ ಸೇರಿಸಲಾಗಿದೆ. ಈ ಸೇರ್ಪಡೆಗಾಗಿ ಸೆಪ್ಟೆಂಬರ್ 9ರಂದು ಕರಡು ಅಧಿಸೂಚನೆ ಬಿಡುಗಡೆ ಮಾಡಿ ನಾಗರಿಕರಿಂದ ಆಕ್ಷೇಪಣೆಗಳನ್ನು ಕೇಳಲಾಗಿತ್ತು. ಎಲ್ಲ ಪ್ರಕ್ರಿಯೆಗಳ ನಂತರ ಈಗ ಜಾರಿಯಾಗಿದೆ.

ಸೇರ್ಪಡೆಯಾದ ಪ್ರಮುಖ ಗ್ರಾಮಗಳ ಪಟ್ಟಿ ಹೀಗಿದೆ:

ನಾಗನಹಳ್ಳಿ, ಮುಮ್ಮೇನಹಳ್ಳಿ, ಬೊಮ್ಮನಹಳ್ಳಿ, ತೊರೆಚನ್ನೋಹಳ್ಳಿ, ವೋಟಗೊಂಡನಹಳ್ಳಿ, ಗೊಲ್ಲಹಳ್ಳಿ, ಕೊತ್ತಗೊಂಡನಹಳ್ಳಿ, ಮರೇನಹಳ್ಳಿ, ಗರ್ಗೇಶ್ವರಪುರ, ಕೋಡಿಹಳ್ಳಿ, ಪೆಮ್ಮನಹಳ್ಳಿ, ಹಕ್ಕಿನಾಳು, ಮರಿಕುಪ್ಪೆ, ಬಸವನೇನಹಳ್ಳಿ, ಹೊಸಹಳ್ಳಿ, ಬಾಣವಾಡಿ, ಹಾಲೂರು, ಶಿರಗನಹಳ್ಳಿ, ಮಲ್ಲಾಪುರ, ಮೂಗನಹಳ್ಳಿ, ಬಿಟ್ಟಸಂದ್ರ, ಹೇಮಾಪುರ, ರಂಗೇನಹಳ್ಳಿ ಕೆಂಪಾಪುರ, ತಟ್ಟೆಕೆರೆ, ಲಿಂಗೇನಹಳ್ಳಿ, ತಿಮ್ಮಸಂದ್ರ, ರಾಮನಹಳ್ಳಿ, ಗೊರೂರು, ರಂಗನಬೆಟ್ಟ, ಮುಪ್ಪೇನಹಳ್ಳಿ, ಸೋಲೂರು, ಕಲ್ಯಾಣಪುರ, ತೂಬರಪಾಳ್ಯ, ಎಣ್ಣಿಗೆರೆ, ಚಿಕ್ಕನಹಳ್ಳಿ, ವಡ್ಡರಹಳ್ಳಿ, ಗಂಗೇನಪುರ, ಕನಕೇನಹಳ್ಳಿ, ಭೈರಾಪುರ, ಮಲ್ಲಿಕಾರ್ಜುನ ಪಾಳ್ಯ, ಲಕ್ಕೇನಹಳ್ಳಿ, ಬೀರವಾರ, ಕೋರಮಂಗಲ, ಕನ್ನಸಂದ್ರ, ಪರ್ವತಪಾಳ್ಯ, ಗುಡೇಮಾರನಹಳ್ಳಿ, ಉಡುಕುಂಟೆ, ಮೈಲನಹಳ್ಳಿ, ಪಾಲನಹಳ್ಳಿ, ಶಾಂತಪುರ, ಕಲ್ಲಹಟ್ಟಿಪಾಳ್ಯ, ಭೈರಸಂದ್ರ, ಮಲ್ಲೂರು, ಭಂಟರಕುಪ್ಪೆ, ಚನ್ನೋಹಳ್ಳಿ, ಅರಿಶಿನ ಕುಂಟೆ, ಊद्दಂಡಳ್ಳಿ, ಚಿಕ್ಕಸೋಲೂರು, ಹ್ಯಾಗನಹಳ್ಳಿ, ಬ್ಯಾಡರಹಳ್ಳಿ, ಕೂಡ್ಲುರು, ಸೋಮೇದೇವನಹಳ್ಳಿ, ಒಂಭತ್ತನಕುಂಟೆ, ಕುಪ್ಪೇಮಾಳ, ತಿರುಮಲಾಪುರ ಹಾಗೂ ಹೊಸೂರು.

ಸೇರ್ಪಡೆಯಾದ ಪ್ರಮುಖ ಗ್ರಾಮಗಳ ಪಟ್ಟಿ ಹೀಗಿದೆ:

ಭೂಮಿ ಬೆಲೆ ಗಗನಕ್ಕೇರುವ ಸಾಧ್ಯತೆ:
ನೆಲಮಂಗಲ ತಾಲ್ಲೂಕು ಈಗಾಗಲೇ ಬೆಂಗಳೂರು–ತುಮಕೂರು ಹಾಗೂ ಬೆಂಗಳೂರು–ಹೈವೇ ಮಾರ್ಗಗಳಿಂದ ವೇಗವಾಗಿ ಅಭಿವೃದ್ಧಿಯಾಗುತ್ತಿರುವುದು ಕಾರಣ. ಹೊಸ ಸೇರ್ಪಡೆಯಿಂದ ಈ ಭಾಗಗಳ ಭೂಮಿ ಮೌಲ್ಯದಲ್ಲಿ 20–40% ವರೆಗೆ ಏರಿಕೆ ಸಂಭವಿಸಬಹುದು ಎಂದು ರಿಯಲ್ ಎಸ್ಟೇಟ್ ತಜ್ಞರು ಅಂದಾಜಿಸಿದ್ದಾರೆ.

ನಗರ ಸೌಲಭ್ಯಗಳ ವಿಸ್ತರಣೆ:

ಈ ಗ್ರಾಮಗಳಿಗೆ ಮುಂದಿನ ಕೆಲವು ವರ್ಷಗಳಲ್ಲಿ ಪಡೆಯಬಹುದಾದ ಸೌಲಭ್ಯಗಳು ಹೀಗಿವೆ,
ರಸ್ತೆಗಳ ವಿಸ್ತರಣೆ
ಡ್ರೆನೆಜ್, ಜಲಮಂಡಳಿ ಜಾಲ
ಭೂಮಿಯ ನಿರ್ಧಿಷ್ಟ ಬಳಕೆ (Zoning) ಸುಧಾರಣೆ
BMTC/ಮೆಟ್ರೋ ಸಂಪರ್ಕದ ಸಾಧ್ಯತೆ

ಹೂಡಿಕೆದಾರರಿಗೆ ದೊಡ್ಡ ಅವಕಾಶ:

ಬೆಂಗಳೂರು ಉತ್ತರಕ್ಕೆ (ಹೆಸರು ಬದಲಾವಣೆಯ ಚರ್ಚೆ ಚಾಲ್ತಿಯಲ್ಲಿದೆ) ಒಳಪಡುವ ಭಾಗವಾಗುವ ಕಾರಣ ಕೈಗಾರಿಕಾ ಹೂಡಿಕೆ, ಗೋದಾಮು / ಲಾಜಿಸ್ಟಿಕ್ ಹಬ್ಬುಗಳು, ಅಪಾರ್ಟ್‌ಮೆಂಟ್ ಪ್ರಾಜೆಕ್ಟ್‌ಗಳು ಈ ಪ್ರದೇಶಗಳಲ್ಲಿ ಹೆಚ್ಚುವ ನಿರೀಕ್ಷೆ ಇದೆ.

ಒಟ್ಟಾರೆಯಾಗಿ, ಮಾಗಡಿ ತಾಲ್ಲೂಕಿನ 68 ಗ್ರಾಮಗಳ ನೆಲಮಂಗಲ ಸೇರಿಕೆ ಕೇವಲ ಕಾಗದದ ಬದಲಾವಣೆಯಲ್ಲ. ಇದು ಅಭಿವೃದ್ಧಿ, ಹೂಡಿಕೆ ಮತ್ತು ಭೂಮಿಯ ಮೌಲ್ಯವರ್ಧನೆಗೆ ಹೆಚ್ಚಿಸುವ ಮಹತ್ವದ ನಿರ್ಧಾರವಾಗಿದೆ. ಮುಂಬರುವ ವರ್ಷಗಳಲ್ಲಿ ಈ ಪ್ರದೇಶಗಳು ಮಿನಿ-ಬೆಂಗಳೂರಿನಂತೆ ಪರಿವರ್ತನೆಗೊಂಡರೂ ಅಚ್ಚರಿಯಿಲ್ಲ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories