WhatsApp Image 2025 08 21 at 23.09.41 3ba5262b

ವಾಹನ ಮಾಲೀಕರೇ ಗಮನಿಸಿ ; ಟ್ರಾಫಿಕ್ ದಂಡ ಪಾವತಿಗೆ ಶೇ.50ರಷ್ಟು ರಿಯಾಯಿತಿ ನೀಡಿದ ಸರ್ಕಾರ, ಅಧಿಕೃತ ಆದೇಶ

Categories:
WhatsApp Group Telegram Group

ಬೆಂಗಳೂರು: ರಾಜ್ಯ ಸರ್ಕಾರವು ದಂಡದ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರಿಗೆ ಒಂದು ಒಳ್ಳೆಯ ಸುದ್ದಿ ನೀಡಿದೆ. ಸಾರಿಗೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬರುವ ದಂಡವನ್ನು ಮತ್ತೊಮ್ಮೆ 50 ಶೇಕಡಾ ರಿಯಾಯಿತಿಯಲ್ಲಿ ಪಾವತಿಸಲು ಅವಕಾಶ ನೀಡುವಂತೆ ಸರ್ಕಾರವು ಆದೇಶಿಸಿದೆ.

ಇದಕ್ಕೂ ಮುಂಚೆಯೂ ಸರ್ಕಾರವು 50% ರಿಯಾಯಿತಿ ನೀಡಿ ದೊಡ್ಡ ಮೊತ್ತದ ದಂಡವನ್ನು ಸಂಗ್ರಹಿಸಿತ್ತು. ಈಗ ಮತ್ತೆ ಅಂತಹ ರಿಯಾಯಿತಿ ಘೋಷಿಸಲಾಗಿದೆ. ಆಗಸ್ಟ್ 23 ರಿಂದ ಸೆಪ್ಟೆಂಬರ್ 9ರ ವರೆಗೆ ದಂಡದ ಅರ್ಧದಷ್ಟು ಹಣವನ್ನು ಮಾತ್ರ ಪಾವತಿಸುವ ಮೂಲಕ ವಾಹನ ಮಾಲೀಕರು ತಮ್ಮ ಬಾಕಿಯನ್ನು ತೀರಿಸಿಕೊಳ್ಳಲು ಸಾಧ್ಯವಿದೆ.

ಈ ವಿಚಾರದ ಮೇಲೆ ರಾಜ್ಯ ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್. ಅವರು ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶದ ಪ್ರಕಾರ, ಆಗಸ್ಟ್ 23 ರಿಂದ ಸೆಪ್ಟೆಂಬರ್ 12ರ ವರೆಗೆ 50% ರಿಯಾಯಿತಿಯಲ್ಲಿ ದಂಡ ಪಾವತಿ ಮಾಡಲು ಅವಕಾಶವಿರುವುದಾಗಿ ತಿಳಿಸಲಾಗಿದೆ.

ಈ ರಿಯಾಯಿತಿ ಯೋಜನೆಯು ಪೊಲೀಸ್ ಇಲಾಖೆಯ ಸಂಚಾರಿ ಇ-ಚಲನ್‌ನಲ್ಲಿ 2023ರ ಫೆಬ್ರವರಿ 11ರೊಳಗೆ ದಾಖಲಾದ ಪ್ರಕರಣಗಳಿಗೆ ಮಾತ್ರ ಅನ್ವಯಿಸುತ್ತದೆ. ಹಲವು ವರ್ಷಗಳಿಂದ ದಂಡವನ್ನು ಪಾವತಿಸದೆ ಬಾಕಿ ಉಳಿಸಿಕೊಂಡಿರುವವರಿಗೆ ಈ ಅವಕಾಶ ನೀಡಲಾಗಿದೆ. 2023ರ ಫೆಬ್ರವರಿ 12ರ ನಂತರ ದಾಖಲಾದ ಪ್ರಕರಣಗಳಿಗೆ ಮುಂದಿನ ವರ್ಷ ಇಂತಹ ರಿಯಾಯಿತಿ ಅವಕಾಶಗಳು ಲಭ್ಯವಿರಬಹುದು.

n677756997175579768881715a138e8c959a221dcce01f48b159bedd715c4a5dbce18e33ead8f4541a64198
n6777569971755797694215004de5dd03bf2352dacd66304ba35cbb78d141d05c2fc62fcc768a6446f9b7f5

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Popular Categories