Picsart 25 11 08 22 14 02 433 scaled

ಬ್ಯಾಂಕ್ ಲೋನ್ ಕ್ಲೋಸ್ ಮಾಡುವಾಗ ತಪ್ಪದೇ ಪಡೆಯಬೇಕಾದ 5 ಮುಖ್ಯ ದಾಖಲೆಗಳು!

Categories:
WhatsApp Group Telegram Group

ಇಂದು ಬ್ಯಾಂಕಿಂಗ್ ವ್ಯವಸ್ಥೆ ನಮ್ಮ ದಿನನಿತ್ಯದ ಜೀವನದ ಪ್ರಮುಖ ಭಾಗವಾಗಿದೆ. ಮನೆ, ಕಾರು, ಶಿಕ್ಷಣ, ವ್ಯವಹಾರ ಯಾವ ಅಗತ್ಯವಾಗಿದ್ದರೂ ಕೂಡಾ, ಹಲವಾರು ಜನರು ಬ್ಯಾಂಕುಗಳಿಂದ ಸಾಲ ಪಡೆದುಕೊಳ್ಳುತ್ತಾರೆ. ತಿಂಗಳಿಗೆ ಇಎಂಐ ಪಾವತಿಸುವುದು ಕೂಡಾ ಸಾಮಾನ್ಯವಾಗಿದೆ. ಆದರೆ ಒಂದು ದಿನ ಸಾಲ ಪೂರ್ಣವಾಗಿ ಪಾವತಿಸಿ ಮುಗಿದಾಗ, ಅದು ಗ್ರಾಹಕರಿಗೆ ದೊಡ್ಡ ನೆಮ್ಮದಿಯ ಕ್ಷಣ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕರು ಒಂದು ದೊಡ್ಡ ತಪ್ಪು ಮಾಡುತ್ತಿದ್ದಾರೆ. ಅದು ಏನೆಂದರೆ ಸಾಲ ಮುಗಿದ ನಂತರ ಬ್ಯಾಂಕಿನಿಂದ ತೆಗೆದುಕೊಳ್ಳಬೇಕಾದ ಪ್ರಮುಖ ದಾಖಲೆಗಳನ್ನು ತೆಗೆದುಕೊಳ್ಳದೆ ಬರುವುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ..
ಸರಿಯಾದ ದಾಖಲೆಗಳು ಕೈಯಲ್ಲಿ ಇರದಿದ್ದರೆ, ಆ ಸಾಲ ಭವಿಷ್ಯದಲ್ಲಿ ಮತ್ತೆ ನಿಮಗೆ ತೊಂದರೆ ಕೊಡಬಹುದು. ಕೆಲವು ಜನರು ದಾಖಲೆಗಳನ್ನು ಪಡೆಯದೆ ಬಿಟ್ಟ ಪರಿಣಾಮವಾಗಿ, ವರ್ಷಗಳ ನಂತರ ಬ್ಯಾಂಕ್‌ಗಳಿಂದ ಬಾಕಿ ಇರುವ ಬೇಡಿಕೆಗಳು, ಕ್ರೆಡಿಟ್ ಸ್ಕೋರ್ ಕಡಿಮೆಯಾಗುವುದು, ಮನೆ ದಾಖಲೆಗಳು ಸಿಗದೆ ಇರುವುದು ಈ ರೀತಿಯ ಗಂಭೀರ ಸಮಸ್ಯೆಗಳು ಎದುರಾಗುತ್ತವೆ.  ಆದ್ದರಿಂದ ಸಾಲವನ್ನು ಕ್ಲೋಸ್ ಮಾಡುವಾಗ ಯಾವ ದಾಖಲೆಗಳನ್ನು ತಪ್ಪದೇ ತೆಗೆದುಕೊಳ್ಳಬೇಕು? ಏಕೆ ಅವು ಇಷ್ಟು ಮುಖ್ಯ ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ನಿರಾಕ್ಷೇಪಣಾ ಪ್ರಮಾಣಪತ್ರ (NOC – No Objection Certificate):

ಸಾಲ ಸಂಪೂರ್ಣವಾಗಿ ಪಾವತಿಸಿ ಮುಗಿಸಿದ ನಂತರ, ಬ್ಯಾಂಕ್ ನೀಡುವ ಅತ್ಯಂತ ಮುಖ್ಯ ದಾಖಲೆ ಇದು.
ಇದರಲ್ಲಿ ಸ್ಪಷ್ಟವಾಗಿ ನೀವು ಸಾಲದ ಎಲ್ಲಾ ಇಎಂಐಗಳನ್ನು ಪಾವತಿಸಿದ್ದೀರಿ. ಬ್ಯಾಂಕಿಗೆ ನಿಮ್ಮ ಮೇಲಿನ ಯಾವುದೇ ಬಾಕಿ ಇಲ್ಲ. ಸಾಲವನ್ನು ಅಧಿಕೃತವಾಗಿ ಮುಕ್ತಾಯಗೊಳಿಸಲಾಗಿದೆ ಎಂದು ದೃಢೀಕರಿಸುತ್ತದೆ. ಈ ದಾಖಲೆಯನ್ನು ನೀವು ತೆಗದುಕೊಳ್ಳಲಿಲ್ಲವೆಂದರೆ, ಭವಿಷ್ಯದಲ್ಲಿ ಬ್ಯಾಂಕ್ ನೀವು ಸಾಲ ತೀರಿಸಿಲ್ಲ ಎಂದು ಹೇಳುವ ಸಾಧ್ಯತೆಗಳು ಇರುತ್ತವೆ.

ಸಾಲ ಮುಕ್ತಾಯ ಪತ್ರ (Loan Closure Letter):

ಸಾಲ ಕ್ಲೋಸ್ ಆಗಿದ್ದನ್ನು ಬ್ಯಾಂಕ್ ಅಧಿಕೃತವಾಗಿ ಪತ್ರದ ಮೂಲಕ ದೃಢಪಡಿಸುತ್ತದೆ. ಈ ಪತ್ರದಲ್ಲಿ ಸಾಮಾನ್ಯವಾಗಿ ಕಾಣಿಸುವ ಮಾಹಿತಿ ಸಾಲ ಖಾತೆ ಸಂಖ್ಯೆ, ಸಾಲ ಪಡೆದ ಮೊತ್ತ, ಪಾವತಿಸಿದ ಒಟ್ಟು ಮೊತ್ತ, ಕ್ಲೋಸ್ ಮಾಡಿದ ದಿನಾಂಕ. ಈ ಪತ್ರ ನಿಮ್ಮ ಸಾಲದ ಪೂರ್ಣ ಪಾವತಿಗೆ ಸಾಕ್ಷಿ ಆಗಿ ಕೆಲಸ ಮಾಡುತ್ತದೆ.

ಅಂತಿಮ ಮರುಪಾವತಿ ಹೇಳಿಕೆ (Final Repayment Statement):

ಸಾಲ ಮುಚ್ಚುವ ಮುನ್ನ ನೀವು ಮಾಡಿದ ಕೊನೆಯ ಪಾವತಿಯ ಸಂಪೂರ್ಣ ವಿವರ ಈ ಹೇಳಿಕೆಯಲ್ಲಿ ಸಿಗುತ್ತದೆ.
ಇದರಿಂದ ಸಿಗುವ ಲಾಭ ಎಂದರೆ,  ಬ್ಯಾಂಕ್ ಲೆಕ್ಕಾಚಾರದಲ್ಲಿ ತಪ್ಪುಗಳಿದ್ದರೆ ಪತ್ತೆಯಾಗುತ್ತದೆ. ನೀವು ನಿಜವಾಗಿಯೂ ಶೇ.100 ಪಾವತಿಸಿದ್ದು ದೃಢವಾಗುತ್ತದೆ. ಭವಿಷ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದರೆ ಈ ಹೇಳಿಕೆ ಸಾಕ್ಷಿಯಾಗುತ್ತದೆ.

ಮೇಲಾಧಾರ/ಆಸ್ತಿ ದಾಖಲೆಗಳ ಬಿಡುಗಡೆ (Discharge / File Return):

ಹೌಸ್ ಲೋನ್ ಅಥವಾ ಇತರ ಸುರಕ್ಷಿತ ಸಾಲಗಳಲ್ಲಿ ನೀವು ನೀಡಿರುವ ಮೂಲ ದಾಖಲೆಗಳನ್ನು ಬ್ಯಾಂಕ್ ತಮ್ಮ ಬಳಿ ಇಟ್ಟುಕೊಳ್ಳುತ್ತದೆ. ಸಾಲ ಮುಗಿದ ನಂತರ ನೀವು ತಪ್ಪದೇ ಪಡೆಯಬೇಕಾದ ದಾಖಲೆಗಳು ಎಂದರೆ ಮೂಲ ಆಸ್ತಿ ದಾಖಲೆಗಳು, ನೋಂದಣಿ ಪತ್ರ, ಒಪ್ಪಂದ ಪತ್ರ, ಡೀಡ್ ಬ್ಯಾಂಕ್ ಕೊಟ್ಟಿದ್ದ ಮಾರ್ಟ್ಗೇಜ್ ರಿಲೀಸ್ ಪತ್ರ. ಈ ದಾಖಲೆಗಳು ಹಿಂತಿರುಗಿಸದೇ ಬ್ಯಾಂಕ್ ಖಾತೆ ಕ್ಲೋಸ್ ಆಗುವುದಿಲ್ಲ. ದಾಖಲೆಗಳನ್ನು ಕಳೆದುಕೊಂಡರೆ ಭವಿಷ್ಯದಲ್ಲಿ ಆಸ್ತಿ ಮಾರಾಟ, ತಪಾಸಣೆ, ಸಾಲಕ್ಕೆ ಜಾಮೀನು ಕೊಡಲು ದೊಡ್ಡ ತೊಂದರೆಯಾಗುತ್ತದೆ.

ಕ್ರೆಡಿಟ್ ಸ್ಕೋರ್ (CIBIL) ನವೀಕರಣ:

ಬಹಳ ಜನರು ಗಮನಿಸದ ಒಂದು ಪ್ರಮುಖ ವಿಷಯ ಇದು.
ಸಾಲ ಮುಗಿದ ನಂತರ ಬ್ಯಾಂಕ್ CIBIL ಗೆ ಮಾಹಿತಿ ಕಳುಹಿಸುತ್ತದೆ. ಆದರೆ ಕೆಲವು ಸಲ ನವೀಕರಣ ವಿಳಂಬವಾಗುತ್ತದೆ, ತಪ್ಪು ವಿವರ ಸೇರಿಸಲಾಗುತ್ತದೆ, ಸಾಲ active ಆಗಿ ಉಳಿಯಬಹುದು. ಇದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಹಾಳಾಗುತ್ತದೆ ಮತ್ತು ಮುಂದಿನ ಸಾಲಗಳನ್ನು ನಿರಾಕರಿಸಲಾಗಬಹುದು. ಆದ್ದರಿಂದ 20–30 ದಿನಗಳ ನಂತರ CIBIL ಅಥವಾ ಇತರ ಬ್ಯೂರೋಗಳಲ್ಲಿ ಪರಿಶೀಲನೆ ಮಾಡುವುದು ಅನಿವಾರ್ಯ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories