ಭಾರತದಲ್ಲಿ NB.1.8.1 ಮತ್ತು LF.7 ಹೊಸ ಓಮಿಕ್ರಾನ್(Omicron) ಉಪರೂಪ ಪತ್ತೆ: ಆತಂಕಕ್ಕಿಂತ ಜಾಗರೂಕತೆ ಅವಶ್ಯ
ಇದೀಗ ಭಾರತದಲ್ಲಿಯೂ 2 ಹೊಸ ಕೋವಿಡ್ ರೂಪಾಂತರಗಳು ಪತ್ತೆಯಾಗಿರುವ ಸುದ್ದಿಯು ಮತ್ತೆ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸುತ್ತಿದೆ. NB.1.8.1 ಮತ್ತು LF.7 ಎಂದು ಕರೆಯಲ್ಪಡುವ ಈ ರೂಪಾಂತರಗಳು ಓಮಿಕ್ರಾನ್ನ ಉಪ ರೂಪಾಂತರಗಳಾಗಿದ್ದು, ವಿಶ್ವದ ಹಲವೆಡೆ ಹಾಗೆ ಭಾರತದಲ್ಲಿಯೂ ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ, ಈ ರೂಪಾಂತರದ ಸ್ವಭಾವ, ಪರಿಣಾಮಗಳು, ಭಾರತದಲ್ಲಿನ ಪರಿಸ್ಥಿತಿ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ವಿಸ್ತೃತವಾಗಿ ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೊಸ ರೂಪಾಂತರಗಳ ಪರಿಚಯ: NB.1.8.1 ಮತ್ತು LF.7
NB.1.8.1 ಮತ್ತು LF.7 ಎಂಬ ಹೊಸ ರೂಪಾಂತರಗಳು ಓಮಿಕ್ರಾನ್ ರೂಪಾಂತರದ ಉಪ ಶಾಖೆಗಳಾಗಿವೆ. NB.1.8.1 ರೂಪಾಂತರವು JN.1ನ ವಂಶಾವಳಿಗೆ ಸೇರಿದ್ದು, LF.7 ಅದಕ್ಕೆ ಸಂಬಂಧಿಸಿದ ಇನ್ನೊಂದು ಉಪರೂಪ. ಈ ವೈರಸ್ ರೂಪಾಂತರಗಳು ವಿಶೇಷವಾಗಿ ಸ್ಟೈಕ್ ಪ್ರೋಟೀನ್ನಲ್ಲಿ(Styc protein) ಅನೇಕರೂಪಾಂತರಗಳನ್ನು ಹೊಂದಿವೆ, ಇದರಿಂದ ವೈರಸ್ ಹೆಚ್ಚು ವೇಗವಾಗಿ ಹರಡುವ ಸಾಧ್ಯತೆ ಇದೆ. ಉದಾಹರಣೆಗೆ, NB.1.8.1 ರೂಪಾಂತರದಲ್ಲಿ A435S, V445H ಮತ್ತು T478I ರೂಪಾಂತರಗಳು ಕಂಡುಬಂದಿವೆ, ಇವು ವೈರಸ್ನ್ನು ಮಾನವನಿಂದ ಮಾನವನಿಗೆ ಸುಲಭವಾಗಿ ವರ್ಗಾಯಿಸಲು ಕಾರಣವಾಗಬಹುದು.
ಭಾರತದಲ್ಲಿ ಪತ್ತೆಯಾದ ಪ್ರಕರಣಗಳು ಎಷ್ಟು?:
INSACOG (Indian SARS-CoV-2 Genomics Consortium) ನೀಡಿದ ಇತ್ತೀಚಿನ ವರದಿಯ ಪ್ರಕಾರ, ಏಪ್ರಿಲ್ 2025ರಲ್ಲಿ ತಮಿಳುನಾಡಿನಲ್ಲಿ NB.1.8.1 ರೂಪಾಂತರದ ಒಂದು ಪ್ರಕರಣ ಮತ್ತು ಮೇ 2025ರಲ್ಲಿ ಗುಜರಾತ್ನಲ್ಲಿ LF.7 ರೂಪಾಂತರದ ನಾಲ್ಕು ಪ್ರಕರಣಗಳು ವರದಿಯಾಗಿವೆ. ಇವುಗಳನ್ನು ಹೊರತುಪಡಿಸಿ, NB.1.8.1 ಈಗಾಗಲೇ ಯುಎಸ್, ಜಪಾನ್, ದಕ್ಷಿಣ ಕೊರಿಯಾ ಸೇರಿದಂತೆ 20 ಕ್ಕೂ ಹೆಚ್ಚು ದೇಶಗಳಲ್ಲಿ ಪತ್ತೆಯಾಗಿದೆ.
ಈ ರೂಪಾಂತರಗಳು ಅಪಾಯಕಾರಿಯಾಗಬಹುದೇ?:
ವಿಶ್ವ ಆರೋಗ್ಯ ಸಂಸ್ಥೆ (WHO) NB.1.8.1 ಮತ್ತು LF.7 ರೂಪಾಂತರಗಳನ್ನು “Variants Under Monitoring (VUM)” ಎಂದು ವರ್ಗೀಕರಿಸಿದೆ, ಅಂದರೆ ಅವುಗಳು ಹೆಚ್ಚಿನ ಗಮನದೊಂದಿಗೆ ಮೇಲ್ವಿಚಾರಣೆಯಲ್ಲಿವೆ. WHO ಪ್ರಕಾರ, NB.1.8.1 ನಿಂದ ಉಂಟಾಗುವ ಸಾರ್ವಜನಿಕ ಆರೋಗ್ಯದ ಅಪಾಯವನ್ನು ಪ್ರಸ್ತುತ “ಕಡಿಮೆ” ಎಂದು ಅಂದಾಜಿಸಲಾಗಿದೆ.
ಹಿನ್ನೆಲೆಯ ರೂಪಾಂತರಗಳಿಗಿಂತ ಹೊಸ ರೂಪಾಂತರಗಳು ಹೆಚ್ಚು ತೀವ್ರ ರೋಗವನ್ನು ಉಂಟುಮಾಡುತ್ತವೆ ಎಂಬುದು ಇದುವರೆಗೆ ಪುರಾವೆಗಳಿಲ್ಲದ ದಾವೆಯಾಗಿದೆ. ಈ ರೂಪಾಂತರಗಳಿಂದ ಉಂಟಾಗುವ ಲಕ್ಷಣಗಳು ಸಾಮಾನ್ಯವಾಗಿ ಸೌಮ್ಯವಾಗಿದ್ದು, ಸೀತ, ಜ್ವರ ಅಥವಾ ಗಂಟಲು ನೋವು ಬರುತ್ತವೆ.
ಲಸಿಕೆ ಮತ್ತು ಮುನ್ನೆಚ್ಚರಿಕೆ(Vaccination and prevention) ಕ್ರಮಗಳ ಅವಶ್ಯಕತೆ:
ಲಸಿಕೆ ಇನ್ನೂ ಕೋವಿಡ್-19 ವಿರುದ್ಧ ಅತ್ಯುತ್ತಮ ರಕ್ಷಣಾ ಆಯುದವಾಗಿಯೇ ಉಳಿದಿದೆ. ಹೊಸ ರೂಪಾಂತರಗಳ ಪ್ರಭಾವವನ್ನು ಲಸಿಕೆಗಳು ಬಹುಪಾಲು ತಡೆಗಟ್ಟಲು ಸಹಾಯಕವಾಗಿವೆ. ಆದ್ದರಿಂದ ಲಸಿಕೆ ತೆಗೆದುಕೊಳ್ಳದವರು ತಕ್ಷಣವೇ ಲಸಿಕೆ ಹಾಕಿಸಿಕೊಳ್ಳುವುದು ಶ್ರೇಯಸ್ಕರ.
ಮುಖ್ಯ ಮುನ್ನೆಚ್ಚರಿಕೆ ಕ್ರಮಗಳು:
ಜನಸಂಚಾರವಿರುವ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು.
ನಿತ್ಯ ಕೈ ನೈರ್ಮಲ್ಯ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು.
ಆರೋಗ್ಯ ಸಮಸ್ಯೆ ಇರುವವರು (ಕ್ಯಾನ್ಸರ್, ಹೃದಯ, ಮಧುಮೇಹ ಮುಂತಾದವರು) ಹೆಚ್ಚು ಜಾಗರೂಕರಾಗಿರುವುದು.
ತೀವ್ರ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರ ಸಲಹೆ ಪಡೆಯುವುದು.
ಲಸಿಕೆ ಮತ್ತು ಬೂಸ್ಟರ್ ಡೋಸ್ ಪಡೆಯುವುದು.
ಭಾರತದಲ್ಲಿನ ಪ್ರಸಕ್ತ ಪರಿಸ್ಥಿತಿ ಯಾವರೀತಿಯಿದೆ:
ಮೇ 2025ರ ವೇಳೆಗೆ ಭಾರತದಲ್ಲಿ 257 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಈ ಪೈಕಿ ಹೆಚ್ಚಿನವು ಕೇರಳ, ತಮಿಳುನಾಡು, ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಪತ್ತೆಯಾಗಿವೆ. ಸೋಂಕಿತರ ಬಹುಪಾಲು ಸೌಮ್ಯ ಲಕ್ಷಣಗಳನ್ನು ಹೊಂದಿದ್ದು, ಮನೆಯಲ್ಲಿಯೇ ಪ್ರತ್ಯೇಕತೆಯ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ.
ಹೊಸ ರೂಪಾಂತರಗಳು ಪತ್ತೆಯಾಗಿರುವುದರಿಂದ ಆತಂಕವಲ್ಲ, ಆದರೆ ಜಾಗರೂಕತೆ ಅವಶ್ಯ. NB.1.8.1 ಮತ್ತು LF.7 ರೂಪಾಂತರಗಳು ಓಮಿಕ್ರಾನ್ನಂತೆಯೇ ತೀವ್ರ ರೋಗ ಉಂಟುಮಾಡದಿರುವ ಸಾಧ್ಯತೆಯಿರುವುದರಿಂದ ಭಯಪಡಬೇಡಿ. ಆದರೆ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿ, ಲಸಿಕೆ ಹಾಕಿಸಿ, ಮಾಸ್ಕ್ ಧರಿಸಿ, ಮತ್ತು ಕೈ ನೈರ್ಮಲ್ಯ ಪಾಲಿಸಿ.
ಸೂಚನೆ: ಯಾವುದೇ ಹೊಸ ರೋಗಲಕ್ಷಣಗಳು ಕಂಡುಬಂದರೆ ತಕ್ಷಣ ಪರೀಕ್ಷೆ ಮಾಡಿಸಿ ಮತ್ತು ಪ್ರತ್ಯೇಕವಾಗಿರಿ. ಸರ್ಕಾರದಿಂದ ಹೊರಡುವ ನವೀನ ಮಾರ್ಗಸೂಚಿಗಳಿಗೆ ಗಮನಹರಿಸಿ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

Sagari leads the ‘Government Schemes’ vertical at NeedsOfPublic.in, where she decodes the latest Central and State government policies for the common citizen. She has over 3 years of experience tracking welfare programs like PM Kisan, Ayushman Bharat, and State Ration updates. Her goal is to ensure every reader understands their eligibility and benefits without confusion. Sagari strictly verifies all updates from official government portals before publishing. Outside of work, she is an advocate for digital literacy in rural India.”
Connect with Sagari:


WhatsApp Group




