WhatsApp Image 2025 08 22 at 9.25.22 AM

ಬರೋಬ್ಬರಿ 2 ಲಕ್ಷ ರೂ. ರಿಲಯನ್ಸ್ ಫೌಂಡೇಷನ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ.! Reliance Foundation Scholarship

WhatsApp Group Telegram Group

ಭಾರತದ ಅಗ್ರಗಣ್ಯ ಉದ್ಯಮ ಸಮೂಹವಾದ ರಿಲಯನ್ಸ್ ಇಂಡಸ್ಟ್ರೀಸ್ ನ ಧರ್ಮಾರ್ಥ ಸಂಸ್ಥೆಯಾದ ರಿಲಯನ್ಸ್ ಫೌಂಡೇಷನ್ ತನ್ನ ವಾರ್ಷಿಕ ವಿದ್ಯಾರ್ಥಿ ವೇತನ ಯೋಜನೆಗಾಗಿ 2025-26 ಶೈಕ್ಷಣಿಕ ವರ್ಷದ ಅರ್ಜಿಗಳನ್ನು ಆಹ್ವಾನಿಸಿದೆ. ದೇಶದ ಭವಿಷ್ಯದ ನಾಯಕರು ಮತ್ತು ವಿಜ್ಞಾನಿಗಳನ್ನು ರೂಪಿಸುವ ದಿಶೆಯಲ್ಲಿ ನಡೆಸುವ ಈ ಮಹತ್ವಾಕಾಂಕ್ಷಿ ಯೋಜನೆಯಡಿಯಲ್ಲಿ ಈ ಬಾರಿ 5,100 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳು ಲಾಭ ಪಡೆಯಲಿದ್ದಾರೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಯಾರು ಅರ್ಜಿ ಸಲ್ಲಿಸಬಹುದು?

ಈ ವಿದ್ಯಾರ್ಥಿವೇತನವು ಪ್ರಥಮ ವರ್ಷದ ಪೂರ್ಣಾವಧಿ ಪದವಿ (ಅಂಡರ್ ಗ್ರಾಜುಯೇಟ್) ಮತ್ತು ಸ್ನಾತಕೋತ್ತರ (ಪೋಸ್ಟ್ ಗ್ರಾಜುಯೇಟ್) ಪದವಿ ಶಿಕ್ಷಣ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮೀಸಲಾಗಿದೆ. ಅರ್ಜಿದಾರರು ಭಾರತದ ನಾಗರಿಕರಾಗಿರಬೇಕು ಮತ್ತು ಭಾರತದಲ್ಲಿಯೇ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿರಬೇಕು.

ಹಣಕಾಸು ಸಹಾಯ ಮತ್ತು ಆಯ್ಕೆ ಪ್ರಕ್ರಿಯೆ:

ರಿಲಯನ್ಸ್ ಫೌಂಡೇಷನ್ ವಿದ್ಯಾರ್ಥಿವೇತನವು ಕೇವಲ ಶೈಕ್ಷಣಿಕ ಶ್ರೇಷ್ಠತೆಯನ್ನು ಮಾತ್ರವಲ್ಲದೆ, ಆರ್ಥಿಕ ಬೆಂಬಲದ ಅಗತ್ಯವಿರುವ ವಿದ್ಯಾರ್ಥಿಗಳನ್ನು ಗುರಿಯಾಗಿಟ್ಟುಕೊಂಡಿದೆ.

ಪದವಿ ವಿದ್ಯಾರ್ಥಿಗಳಿಗೆ: ಪ್ರತಿ ವಿದ್ಯಾರ್ಥಿಗೆ ಶಿಕ್ಷಣದ ಸಂಪೂರ್ಣ ಅವಧಿಗೆ ₹2 ಲಕ್ಷ ರೂಪಾಯಿಗಳವರೆಗಿನ ಹಣಕಾಸು ಸಹಾಯವನ್ನು ಒದಗಿಸಲಾಗುವುದು.

ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ: ಎಂಜಿನಿಯರಿಂಗ್, ತಂತ್ರಜ್ಞಾನ, ಇಂಧನ ಮತ್ತು ಜೀವ ವಿಜ್ಞಾನದಂತಹ ಆಯ್ದ ಕ್ಷೇತ್ರಗಳಲ್ಲಿ ಅಧ್ಯಯನ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ₹6 ಲಕ್ಷ ರೂಪಾಯಿಗಳವರೆಗಿನ ಗಣನೀಯ ಅನುದಾನವನ್ನು ನೀಡಲಾಗುವುದು. ಇದು ರಾಷ್ಟ್ರೀಯ ಅಭಿವೃದ್ಧಿ ಮತ್ತು ಜಾಗತಿಕ ಪ್ರಗತಿಗೆ ನಿರ್ಣಾಯಕವೆನಿಸಿದ ಕ್ಷೇತ್ರಗಳಲ್ಲಿ ಮುಂದುವರಿದ ಅಧ್ಯಯನ ಮತ್ತು ಸಂಶೋಧನೆಗೆ ಉತ್ತೇಜನ ನೀಡುವ ಉದ್ದೇಶವನ್ನು ಹೊಂದಿದೆ.

ವಿದ್ಯಾರ್ಥಿಗಳ ಆಯ್ಕೆಯ ಪ್ರಕ್ರಿಯೆಯು ಅವರ ಶೈಕ್ಷಣಿಕ ಸಾಧನೆ, ಪ್ರಮಾಣಪತ್ರಗಳು ಮತ್ತು ಕುಟುಂಬದ ಆರ್ಥಿಕ ಹಿನ್ನೆಲೆ—ಈ ಎರಡು ಅಂಶಗಳನ್ನು ಆಧಾರವಾಗಿಟ್ಟುಕೊಂಡು ನಡೆಯುತ್ತದೆ.

ಯೋಜನೆಯ ಹಿನ್ನೆಲೆ ಮತ್ತು ಗುರಿ:

ರಿಲಯನ್ಸ್ ಫೌಂಡೇಷನ್ ಅಧ್ಯಕ್ಷೆ ಶ್ರೀಮತಿ ನೀತಾ ಅಂಬಾನಿ ಅವರು 2022ರಲ್ಲಿ, ರಿಲಯನ್ಸ್ ಸಂಸ್ಥಾಪಕ ಧೀರೂಭಾಯಿ ಅಂಬಾನಿ ಅವರ 90ನೇ ಜನ್ಮದಿನದ ಸಂದರ್ಭದಲ್ಲಿ, ಮುಂದಿನ 10 ವರ್ಷಗಳಲ್ಲಿ 50,000 ವಿದ್ಯಾರ್ಥಿವೇತನಗಳನ್ನು ನೀಡುವ ಪ್ರತಿಜ್ಞೆ ಮಾಡಿದ್ದರು. ಈ ವರ್ಷದ 5,100 ವಿದ್ಯಾರ್ಥಿವೇತನಗಳು ಅದೇ ದೀರ್ಘಕಾಲೀನ(ಕಮಿಟ್ಮೆಂಟ್)ನ ಭಾಗವಾಗಿದೆ.

29 ವರ್ಷಗಳಿಗೂ ಮೀರಿ ಕಾಲ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಬೆಂಬಲಿಸುತ್ತಿರುವ ರಿಲಯನ್ಸ್, ಇದುವರೆಗೆ 28,000ಕ್ಕೂ ಅಧಿಕ ವಿದ್ಯಾರ್ಥಿವೇತನಗಳನ್ನು ವಿವಿಧ ಮಾರ್ಗಗಳ ಮೂಲಕ ನೀಡಿದೆ. ಈ ವಿದ್ಯಾರ್ಥಿವೇತನದ ಮೂಲಕ ಸಾಮಾಜಿಕ ದೃಷ್ಟಿ, ಪರಿಸರ ಸಂವೇದನೆ, ಡಿಜಿಟಲ್ ಚಿಂತನೆ ಹೊಂದಿರುವ ಮತ್ತು ಭಾರತದ ಭವಿಷ್ಯವನ್ನು ರೂಪಿಸಬಲ್ಲ ಯುವ ನಾಯಕರನ್ನು ರೂಪಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಅರ್ಜಿ ಸಲ್ಲಿಸುವ ವಿಧಾನ:

ಈ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಅಕ್ಟೋಬರ್ 4, 2025 ಕೊನೆಯ ದಿನಾಂಕವಾಗಿದೆ. ಆಸಕ್ತರಾದ ಮತ್ತು ಅರ್ಹತೆ ಹೊಂದಿರುವ ವಿದ್ಯಾರ್ಥಿಗಳು scholarships.reliancefoundation.org ಈ ಅಧಿಕೃತ ವೆಬ್ ಸೈಟ್ ವಿಳಾಸಕ್ಕೆ ಭೇಟಿ ನೀಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ವೆಬ್ ಸೈಟ್ ನಲ್ಲಿ ಯೋಜನೆಯ ವಿವರಗಳು, ಅರ್ಹತೆಯ ಮಾನದಂಡಗಳು ಮತ್ತು ಅರ್ಜಿ ಪ್ರಕ್ರಿಯೆಯ ಪೂರ್ಣ ಮಾಹಿತಿ ಲಭ್ಯವಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories