ಪ್ರಮುಖ ಮುಖ್ಯಾಂಶಗಳು
- * ಕಾರ್ಡ್ ಶಿಫ್ಟ್: 14 ಲಕ್ಷ ಅನರ್ಹ ಬಿಪಿಎಲ್ ಕಾರ್ಡ್ಗಳು ಎಪಿಎಲ್ ಗೆ ವರ್ಗಾವಣೆ.
- * ಅರ್ಹರಿಗೆ ಅಭಯ: ನಿಜವಾದ ಬಡವರಿಗೆ ಬಿಪಿಎಲ್ ಕಾರ್ಡ್ ತಪ್ಪದೆ ಸಿಗಲಿದೆ.
- * ಮೇಲ್ಮನವಿ ಅವಕಾಶ: ತಪ್ಪಾಗಿ ರದ್ದಾದರೆ ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ.
ರಾಜ್ಯದ ರೇಷನ್ ಕಾರ್ಡ್ದಾರರಿಗೆ (Ration Card Holders) ರಾಜ್ಯ ಸರ್ಕಾರವು ಬಿಗ್ ಶಾಕ್ ಕೊಟ್ಟಿದೆ. ಉಚಿತ ಅಕ್ಕಿ, ಗೃಹಲಕ್ಷ್ಮಿ ಸೇರಿದಂತೆ ಸರ್ಕಾರದ ಹಲವು ಯೋಜನೆಗಳ ಲಾಭ ಪಡೆಯಲು ಬಿಪಿಎಲ್ (BPL) ಕಾರ್ಡ್ ಅತ್ಯಗತ್ಯ. ಆದರೆ, ಅರ್ಹತೆ ಇಲ್ಲದಿದ್ದರೂ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿರುವವರ ವಿರುದ್ಧ ಸರ್ಕಾರ ಈಗ ಸಮರ ಸಾರಿದ್ದು, ಬರೋಬ್ಬರಿ 14 ಲಕ್ಷ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡಿ, ಎಪಿಎಲ್ (APL) ಗೆ ವರ್ಗಾಯಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ.
ಈ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರು ಅಧಿಕೃತವಾಗಿ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ನಡೆಯುತ್ತಿರುವ ರೇಷನ್ ಕಾರ್ಡ್ ಪರಿಶೀಲನೆಯ ಸಂಪೂರ್ಣ ವಿವರ ಇಲ್ಲಿದೆ.
14 ಲಕ್ಷ ಕಾರ್ಡ್ಗಳು ದಿಢೀರ್ APL ಗೆ ಶಿಫ್ಟ್ ಯಾಕೆ?
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಎಚ್. ಮುನಿಯಪ್ಪ, ರಾಜ್ಯದಲ್ಲಿ ನಿಯಮ ಮೀರಿ ಸುಮಾರು 7 ಲಕ್ಷಕ್ಕೂ ಅಧಿಕ ಮಂದಿ ಎಪಿಎಲ್ ಕಾರ್ಡ್ದಾರರು ಅಕ್ರಮವಾಗಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ ಎಂದು ಸ್ವತಃ ಕೇಂದ್ರ ಸರ್ಕಾರವೇ ಮಾಹಿತಿ ನೀಡಿದೆ.
ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಪಿಎಲ್ ಕಾರ್ಡ್ಗಳ ಕಟ್ಟುನಿಟ್ಟಿನ ಪರಿಶೀಲನೆ ನಡೆಯುತ್ತಿದ್ದು, ಅನರ್ಹರಾಗಿರುವ ಸುಮಾರು 14 ಲಕ್ಷ ಕಾರ್ಡ್ದಾರರನ್ನು ಹಂತ ಹಂತವಾಗಿ ಎಪಿಎಲ್ (APL) ಪಟ್ಟಿಗೆ ವರ್ಗಾಯಿಸುವ ಪ್ರಕ್ರಿಯೆ ಭರದಿಂದ ಸಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಕಾರು, ಟ್ರ್ಯಾಕ್ಟರ್ ಹೊಂದಿರುವವರು, ಸರ್ಕಾರಿ ನೌಕರಿ ಇರುವವರು ಮತ್ತು ಆದಾಯ ತೆರಿಗೆ ಪಾವತಿಸುವವರು ಕೂಡ ಬಿಪಿಎಲ್ ಕಾರ್ಡ್ ಪಡೆದು ಸರ್ಕಾರದ ಯೋಜನೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರದ ಮಾಹಿತಿಯಂತೆ ಇಂತಹ ಸುಮಾರು 7 ಲಕ್ಷಕ್ಕೂ ಹೆಚ್ಚು ಜನರನ್ನು ಗುರುತಿಸಲಾಗಿದೆ. ಒಟ್ಟಾರೆ 14 ಲಕ್ಷ ಅನರ್ಹ ಕಾರ್ಡ್ದಾರರನ್ನು ಹಂತ ಹಂತವಾಗಿ ಬಿಪಿಎಲ್ ಪಟ್ಟಿಯಿಂದ ತೆಗೆದು ಎಪಿಎಲ್ ಪಟ್ಟಿಗೆ ಸೇರಿಸಲು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಖಡಕ್ ಸೂಚನೆ ನೀಡಿದ್ದಾರೆ.
ನಿಮ್ಮ ಕಾರ್ಡ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ನಿಮ್ಮ ರೇಷನ್ ಕಾರ್ಡ್ ‘Active’ (ಚಾಲ್ತಿ) ಇದೆಯಾ ಅಥವಾ ‘Cancelled’ (ರದ್ದು) ಆಗಿದೆಯಾ ಎಂದು ‘ಮಾಹಿತಿ ಕಣಜ’ದಲ್ಲಿ ಸುಲಭವಾಗಿ ತಿಳಿಯಬಹುದು.
- ಕರ್ನಾಟಕ ಸರ್ಕಾರದ ಅಧಿಕೃತ “ಮಾಹಿತಿ ಕಣಜ” (Mahiti Kanaja) ವೆಬ್ಸೈಟ್ಗೆ ಭೇಟಿ ನೀಡಿ. ಲಿಂಕ್: https://mahitikanaja.karnataka.gov.in/FCS/MyRationCard?ServiceId=1036&Type=TABLE&DepartmentId=1010

- ನಂತರ ನಿಮ್ಮ ಜಿಲ್ಲೆ ಮತ್ತು ನಿಮ್ಮ ration card ಅಲ್ಲಿ ಇರುವ 12 ಸಂಖ್ಯೆಯ ನಂಬರ್ ಅನ್ನು ನಮೂದಿಸಿ. ನಂತರ ಸಲ್ಲಿಸು/submit ಇದಲ್ಲಿ ಕ್ಲಿಕ್ ಮಾಡಿ. ಅದು ಆದ ಬಳಿಕ my Ration shop details/ನನ್ನ ಪಡಿತರ ಅಂಗಡಿ ವಿವರದ ಪುಟ ತೆರೆಯುತ್ತದೆ. ನಂತರ card status/ಕಾರ್ಡ್ ಸ್ಥಿತಿ ಸಕ್ರಿಯ/active ಎಂದು ತೋರಿಸಿದರೆ ನಮ್ಮ Ration card ಚಾಲ್ತಿ ಇದೆ ಎಂದು ತಿಳಿಯಬಹುದಾಗಿದೆ.

- ಫಲಿತಾಂಶ: ನಿಮ್ಮ ಕಾರ್ಡ್ ವಿವರ ಓಪನ್ ಆದರೆ ನಿಮ್ಮ ಕಾರ್ಡ್ ಸೇಫ್! “No Data” ಅಥವಾ “Cancelled” ಎಂದು ಬಂದರೆ ನಿಮ್ಮ ಕಾರ್ಡ್ ರದ್ದಾಗಿದೆ ಎಂದರ್ಥ.
Note:
ಇಲ್ಲಿ ನಮ್ಮ ಕಾರ್ಡ್ ಬಿಪಿಎಲ್ ಇಂದ ಎಪಿಎಲ್ ಗೆ ವರ್ಗಾವಣೆ ಆಗಿರುವುದನ್ನ ಹೇಗೆ ನಾವು ನೋಡಬಹುದು ತಿಳಿದುಕೊಳ್ಳಿ
PHH (Priority Household – ಆದ್ಯತಾ ಕುಟುಂಬ) – ಬಡತನ ರೇಖೆಗಿಂತ ಕೆಳಗಿರುವ (BPL) ಅರ್ಹ ಕುಟುಂಬಗಳಿಗೆನೀಡಲಾದ ಕಾರ್ಡುಗಳು
ಮತ್ತು NPHH (Non-Priority Household) – (APL) ಆದ್ಯತಾ ಪಟ್ಟಿಗೆ ಬಾರದ, ಆದರೆ ಪಡಿತರ ಕಾರ್ಡ್ ಅಗತ್ಯವಿರುವ ಕುಟುಂಬಗಳಿಗೆ ನೀಡಲಾಗುತ್ತದೆ
ಒಂದು ವೇಳೆ ರದ್ದಾಗಿದ್ದರೆ ಏನು ಮಾಡಬೇಕು? ನಿಮ್ಮದು ನಿಜವಾಗಿಯೂ ಬಡ ಕುಟುಂಬವಾಗಿದ್ದು, ತಪ್ಪಾಗಿ ಕಾರ್ಡ್ ರದ್ದಾಗಿದ್ದರೆ, ಕೂಡಲೇ ತಾಲೂಕು ಕಚೇರಿಯ ಆಹಾರ ನಿರೀಕ್ಷಕರಿಗೆ (Food Inspector) ಆದಾಯ ದೃಢೀಕರಣ ಪತ್ರದೊಂದಿಗೆ ಅರ್ಜಿ ಸಲ್ಲಿಸಿ ಸರಿಪಡಿಸಿಕೊಳ್ಳಬಹುದು.
| ವಿವರ | ಮಾಹಿತಿ |
| ಒಟ್ಟು ವರ್ಗಾವಣೆಯಾಗುವ ಕಾರ್ಡ್ಗಳು | 14 ಲಕ್ಷ |
| ಯಾವ ಪಟ್ಟಿಗೆ ವರ್ಗಾವಣೆ? | ಬಿಪಿಎಲ್ (BPL) ನಿಂದ ಎಪಿಎಲ್ (APL) ಗೆ |
| ತಪ್ಪಾಗಿ ರದ್ದಾದರೆ ದೂರು ನೀಡುವ ಸ್ಥಳ | ಆಯಾ ತಾಲೂಕಿನ ತಹಶೀಲ್ದಾರ್ ಕಚೇರಿ |
| ಅಗತ್ಯ ದಾಖಲೆ | ಚಾಲ್ತಿಯಲ್ಲಿರುವ ಆದಾಯ ಪ್ರಮಾಣಪತ್ರ ಮತ್ತು ಆಧಾರ್ |
ನಿಜವಾದ ಬಡವರಿಗೆ (ಅರ್ಹರಿಗೆ) ತೊಂದರೆಯಾಗುತ್ತಾ?
ಸರ್ಕಾರದ ಈ ದಿಢೀರ್ ನಿರ್ಧಾರದಿಂದ ನಿಜವಾದ ಬಡವರು ಮತ್ತು ಅರ್ಹ ಬಿಪಿಎಲ್ ಕಾರ್ಡ್ದಾರರು ಆತಂಕಪಡುವ ಅಗತ್ಯವಿಲ್ಲ. ಈ ಬಗ್ಗೆ ಅಭಯ ನೀಡಿರುವ ಸಚಿವರು, “ಯಾವುದೇ ಕಾರಣಕ್ಕೂ ಅರ್ಹ ಬಿಪಿಎಲ್ ಕಾರ್ಡ್ದಾರರನ್ನು ಪಟ್ಟಿಯಿಂದ ಕೈಬಿಡುವುದಿಲ್ಲ. ನಮ್ಮ ಗುರಿ ಕೇವಲ ಅನರ್ಹರನ್ನು ತೆಗೆಯುವುದಷ್ಟೇ” ಎಂದಿದ್ದಾರೆ.
ತಪ್ಪಾಗಿ ರದ್ದಾಗಿದ್ದರೆ ಏನು ಮಾಡಬೇಕು? ಒಂದು ವೇಳೆ ನೀವು ನಿಜಕ್ಕೂ ಬಡವರಾಗಿದ್ದು, ತಾಂತ್ರಿಕ ದೋಷಗಳಿಂದ ಅಥವಾ ತಪ್ಪಾಗಿ ನಿಮ್ಮ ಬಿಪಿಎಲ್ ಕಾರ್ಡ್ ರದ್ದಾಗಿ ಎಪಿಎಲ್ ಪಟ್ಟಿಗೆ ಸೇರಿದ್ದರೆ ಚಿಂತೆ ಬೇಡ. ಅಂತಹವರು ನೇರವಾಗಿ ನಿಮ್ಮ ತಾಲೂಕಿನ ತಹಶೀಲ್ದಾರ್ (Tahsildar) ಅವರಿಗೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ನಿಮ್ಮ ಅರ್ಜಿಯನ್ನು ಮರು ಪರಿಶೀಲಿಸಿ ಮತ್ತೆ ಬಿಪಿಎಲ್ ಕಾರ್ಡ್ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ.
ಆಟೋ ಚಾಲಕರಿಗೂ ಸರ್ಕಾರದ ಸ್ಪಂದನೆ
ಇದೇ ವೇಳೆ ಆಟೋ ಚಾಲಕರ ಸಮಸ್ಯೆಗಳ ಬಗ್ಗೆಯೂ ಮಾತನಾಡಿದ ಮುನಿಯಪ್ಪ ಅವರು, ಆಟೋ ಓಡಿಸಿಕೊಂಡು ಜೀವನ ನಡೆಸುವವರ ಸಂಕಷ್ಟವನ್ನು ಅರಿತು, ಅವರಿಗೆ ‘ಆಟೋ ಗ್ಯಾಸ್’ (Auto Gas) ಅನ್ನು ಆದ್ಯತೆ ಮೇರೆಗೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ.
ಸಂಪಾದಕರ ವಿಶೇಷ ಸಲಹೆ: ವಾಟ್ಸಾಪ್ ಅಥವಾ ಫೇಸ್ಬುಕ್ನಲ್ಲಿ “500 ರೂಪಾಯಿ ಕೊಡಿ, ನಿಮ್ಮ ಬಿಪಿಎಲ್ ಕಾರ್ಡ್ ರದ್ದಾಗದಂತೆ ತಡೆಯುತ್ತೇವೆ” ಎಂಬಂತಹ ಸುಳ್ಳು ಮೆಸೇಜ್ಗಳು ಮತ್ತು ನಕಲಿ ಲಿಂಕ್ಗಳು ಹರಿದಾಡುವ ಸಾಧ್ಯತೆ ಇದೆ. ದಯವಿಟ್ಟು ಯಾವುದೇ ಅಪರಿಚಿತ ಲಿಂಕ್ಗಳ ಮೇಲೆ ಕ್ಲಿಕ್ ಮಾಡಬೇಡಿ, ಯಾರಿಗೂ ಹಣ ಕೊಡಬೇಡಿ. ರೇಷನ್ ಕಾರ್ಡ್ ತಿದ್ದುಪಡಿ ಅಧಿಕಾರ ಕೇವಲ ಆಹಾರ ಇಲಾಖೆ ಮತ್ತು ತಹಶೀಲ್ದಾರ್ ಕಚೇರಿಗೆ ಮಾತ್ರ ಇರುತ್ತದೆ. ಎಚ್ಚರದಿಂದಿರಿ!
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿ ಬಿತ್ತರಿಸುವುದಿಲ್ಲ.

“ಶಿವರಾಜ್ ಅವರು NeedsOfPublic.in ನಲ್ಲಿ ಸಾರ್ವಜನಿಕ, ಶೈಕ್ಷಣಿಕ ಮತ್ತು ಸ್ಥಳೀಯ ಸುದ್ದಿಗಳ ವಿಭಾಗದ ಹಿರಿಯ ಸಂಪಾದಕರಾಗಿದ್ದಾರೆ. ಪತ್ರಿಕೋದ್ಯಮದಲ್ಲಿ 6 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಇವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಂಕೀರ್ಣ ಯೋಜನೆಗಳನ್ನು ಹಾಗೂ ವಿದ್ಯಾರ್ಥಿವೇತನಗಳನ್ನು (Scholarships) ವಿಶ್ಲೇಷಿಸಿ, ಜನಸಾಮಾನ್ಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಅದರ ಪ್ರಯೋಜನಗಳನ್ನು ಸುಲಭವಾಗಿ ಅರ್ಥೈಸುವಲ್ಲಿ ಎಕ್ಸ್ಪರ್ಟ್ ಆಗಿದ್ದಾರೆ. ಇದರ ಜೊತೆಗೆ ಪ್ರಮುಖ ಶೈಕ್ಷಣಿಕ ಅಪ್ಡೇಟ್ಗಳು, ಪರೀಕ್ಷಾ ಫಲಿತಾಂಶಗಳು ಮತ್ತು ವಿಶ್ವಾಸಾರ್ಹ ದೈನಂದಿನ ಹವಾಮಾನ ವರದಿಯನ್ನು ಒದಗಿಸುತ್ತಾರೆ. ವಿದ್ಯಾರ್ಥಿಗಳ ಭವಿಷ್ಯ ಮತ್ತು ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಅರಿವು ಮೂಡಿಸುವುದು ಇವರ ಮುಖ್ಯ ಗುರಿಯಾಗಿದೆ.”


WhatsApp Group




