ಅತೀ ಕಡಿಮೆ ಬೆಲೆಗೆ ಬಜಾಜ್ ಕಾರ್, ಬರೋಬ್ಬರಿ 35 ಕಿ.ಮೀ ಮೈಲೇಜ್

new bajaj car

ಫ್ಯಾಮಿಲಿ ಕಾರ್ ತಗೆದುಕೊಳ್ಳ ಬೇಕು ಎಂದುಕೊಂಡಿರುವವರಿಗೆ ಇಲ್ಲಿದೆ ಕ್ಯೂಟ್ (Qute) ಕಾರ್ ಆಯ್ಕೆ. ಕೇವಲ 3 ಲಕ್ಷ ರೂಪಾಯಿಗಳಿಗೆ ಸಿಗುತ್ತಿದೆ Bajaj Qute.

ಇಂದು ಸರ್ವೇಸಾಮಾನ್ಯವಾಗಿ ಎಲ್ಲರೂ ಕೂಡ ಕಾರ್ ಗಳನ್ನು ಉಪಯೋಗಿಸುತ್ತಿದ್ದಾರೆ. ಆದರೆ ಕೆಲ ಬಡ ಜನರಿಗೆ ಕಾರ್ ಎನ್ನುವುದು ಕನಸಿನ ವಾಹನ ವಾಗಿರುತ್ತದೆ. ಬಡವರಿಗೂ ಕೂಡ ನಾವು ಕಾರು ಖರೀದಿಸಬೇಕು ಫ್ಯಾಮಿಲಿ (family) ಜೊತೆಯಲ್ಲಿ ಕಾರ್ ನಲ್ಲಿ ಓಡಾಡ ಬೇಕೆಂಬ ಆಸೆ ಇರುತ್ತದೆ. ಆದರೆ ನಿಮಗೆ ತಿಳಿದಿರುವ ಹಾಗೆ ಕಾರ್ ನ ಬೆಲೆ ದುಬಾರಿಯಾಗಿರುತ್ತದೆ ಎಲ್ಲರಿಗೂ ಕೂಡ ಕೈಗೆಟಕುವುದಿಲ್ಲ. ಇನ್ನೂ ಕಡಿಮೆ ಬೆಲೆಯಲ್ಲಿ ನಗರದ ಪ್ರದೇಶಗಳಲ್ಲಿ ಕಾರಿನಲ್ಲಿ ಸುತ್ತಾಡಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಒಂದು ಸಣ್ಣ ಕುಟುಂಬಕ್ಕೆ ಹೇಳಿ ಮಾಡಿಸಿದ ಕಾರೊಂದು ಇದೀಗ ಮಾರುಕಟ್ಟೆಗೆ ಬರಲಿದೆ.ಈ ಕಾರ್ ಯಾವುದು? ಇದರ ಬೆಲೆ ಎಷ್ಟು?ಹಾಗೂ ಇದರ ಫೀಚರ್ಸ್ ಹೇಗಿದೆ? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.

Bajaj Qute ಕಾರ್(car):
bajaj qute

ಶೀಘ್ರದಲ್ಲಿಯೇ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ ನಾಲ್ಕು ಮಂದಿ ಕುಳಿತುಕೊಳ್ಳಬಹುದಾದ ಸೀಟಿಂಗ್ ಕೆಪ್ಯಾಸಿಟಿ (seating capacity) ಹೊಂದಿರುವ Bajaj Qute ಕಾರ್. ಈ ಒಂದು ಕಾರು ಈಗಾಗಲೇ ಜನರ ಕಣ್ಣಿಗೆ ಆಕರ್ಷಿತವಾಗಿ ಕಂಡು ಫೇವರೆಟ್ ಆಗಿ ಕಾಣಿಸಿಕೊಂಡಿದೆ. ಇನ್ನು ಈ ಕಾರ್ ನೋಡುವುದಕ್ಕೆ ತುಂಬಾ ಚೆನ್ನಾಗಿದೆ. ನಾಲ್ಕು ಮಂದಿ ಕುಳಿತುಕೊಳ್ಳುವ ಈ  ಕಾರ್ ತುಂಬಾ ಕ್ಯೂಟ್ ಆಗಿ ಕಾಣಿಸುತ್ತಿರುವುದಲ್ಲದೆ Bajaj Qute ಎಂಬ ಹೆಸರಿಗೆ ಹೇಳಿ ಮಾಡಿಸಿದಾಗಿದೆ.

Qute Bajaj ಕಾರ್ ನ ಇಂಜಿನ್ (engine) ಹೇಗೆ ಕೆಲಸಮಾಡುತ್ತದೆ:

ಈ ಕಾರ್ ಉತ್ತಮ ಪರ್ಫಾರ್ಮೆನ್ಸ್ ನೊಂದಿಗೆ ಈಗಾಗಲೇ ಜನರ ಮನಸ್ಸಿನಲ್ಲಿ ಉಳಿದಿದೆ. ಇದಕ್ಕೆ ಬಹಳ ಮುಖ್ಯ ಕಾರಣ ಈ ಕಾರಿನಲ್ಲಿ ಅಳವಡಿಸಿರುವಂತಹ ಇಂಜಿನ್. ಹೌದು, 216.6 ಸಿಸಿ ನ ನಾಲ್ಕು ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಎಂಜಿನ್ (4 stroke single silindar engine) ಅನ್ನು ಈ ಕಾರಿನಲ್ಲಿ ಅಳವಡಿಸಿಲಾಗಿದೆ. ಇನ್ನು ಈ ಇಂಜಿನ್ ನ ಸಾಮರ್ಥ್ಯ 13HP ಪವರ್ ಹಾಗೂ 18NM ಟಾರ್ಕ್ ಜನರೇಟ್ ಮಾಡಬಹುದು.

Qute Bajaj ಕಾರ್ ನ ಮೈಲೇಜ್ ಎಷ್ಟು :

ಇನ್ನು ಸೂಪರ್ ಪರ್ಫಾರ್ಮೆನ್ಸ್ (super performance) ನೀಡುವ ಈ ಒಂದು ಕಾರ್ ಎಷ್ಟು ಮೈಲೇಜ್ ನೀಡಬಹುದು ಎಂಬ ಕುತೂಹಲ ನಿಮಗೆ ಇದ್ದೇ ಇರುತ್ತದೆ. ಇನ್ನು ಈ ಒಂದು ಕಾರ್ 35 ಕಿಲೋಮೀಟರ್  ಗಳ ಮೈಲೇಜ್ ನೀಡುತ್ತದೆ. ಇದಕ್ಕಾಗಿ ನೀವು ಕಾರಿನಲ್ಲಿ ಸಿಎಂಜಿ ಅಳವಡಿಸಬೇಕು ಅಥವಾ ಸಿ ಏನ್ ಜಿ ವೆರಿಯಂಟ್ ಅನ್ನು ಖರೀದಿ ಮಾಡಬೇಕಾಗುತ್ತದೆ. Bajaj Qute ಕಾರಿನಲ್ಲಿ ನೀವು 5 ಸ್ಪೀಡ್ ಮ್ಯಾನುವಲ್ ಗೇರ್ ಟ್ರಾನ್ಸ್ ಮಿಷನ್ ಇರುವುದನ್ನು ಕೂಡ ಗಮನಿಸಬಹುದು.

Bajaj Qute ಕಾರಿನ ಬೆಲೆ ಎಷ್ಟು:

ಈ ಕಾರಿನ ಅಂದಾಜು ಬೆಲೆ 3 ಲಕ್ಷ ರೂಪಾಯಿ ಎಂಬುದಾಗಿ ತಿಳಿದು ಬಂದಿದೆ.
ಗ್ರಾಹಕರಿಗೆ ಇಷ್ಟ ಆಗುವ ರೀತಿಯಲ್ಲಿ ಡಿಸೈನ್ ಮಾಡಲಾಗಿರುವ Bajaj Qute  ಇದುವರೆಗೂ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿಲ್ಲ. ಶೀಘ್ರದಲ್ಲಿ ಭಾರತದ ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಯ ಹಾಗೂ ಎಲ್ಲರೂ ಕೊಂಡುಕೊಳ್ಳಬಹುದಾದಂತಹ Bajaj Qute ಬಿಡುಗಡೆಗೊಳ್ಳಲಿದೆ.

ಈ ಮಾಹಿತಿಗಳನ್ನು ಓದಿ

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!