ಶೀಘ್ರದಲ್ಲೇ ಓಡಲಿವೆ KSRTC ಲಾರಿಗಳು, ಇಲ್ಲಿದೆ ಸಂಪೂರ್ಣ ಮಾಹಿತಿ

WhatsApp Image 2023 08 21 at 20.43.14

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಶೀಘ್ರದಲ್ಲೇ  ಕೆಎಸ್‌ಆರ್‌ಟಿಸಿ(KSRTC) ಲಾರಿಗಳು ಓಡಾಡುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಹೌದು, ಇನ್ನು ಮುಂದೆ ಲಾರಿಗಳೊಂದಿಗೆ ಸರಕು ಸಾಗಣೆ ಸೇವೆ ಆರಂಭವಾಗಲಿದೆ. ಪ್ರಯಾಣಿಕರಿಗೆ ಅತ್ಯುತ್ತಮ ಸಾರಿಗೆ ಸೇವೆ ಒದಗಿಸುತ್ತಿರುವ ಕೆಎಸ್‌ಆರ್‌ಟಿಸಿ, ಸರಕುಗಳನ್ನು ಸಾಗಿಸಲು ಟ್ರಕ್‌ಗಳನ್ನು ಓಡಿಸಲು ಯೋಜಿಸುತ್ತಿದೆ. ಇದರ ಕುರಿತು ಇನ್ನಷ್ಟು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಸಿಕೊಡಲಾಗುವುದು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ಕೆಎಸ್‌ಆರ್‌ಟಿಸಿ ಲಾರಿಗಳನ್ನು ಪ್ರಾರಂಭ ಮಾಡಲು ಟೆಂಡರ್ ಕರೆಯಲಾಗಿದೆ :

ಪ್ರಯಾಣಿಕರನ್ನು ಸಾಗಿಸುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಸರಕು ಸಾಗಣೆಗೆ ಪ್ರತ್ಯೇಕ ವಾಹನಗಳನ್ನು ಓಡಿಸಲು ನಿರ್ಧರಿಸಿದೆ. ಇದರ ಮೂಲಕ, ಲಾಜಿಸ್ಟಿಕ್ಸ್ ಸೇವೆಯನ್ನು ಸಂಪೂರ್ಣವಾಗಿ ಬೆಂಬಲಿಸಲಾಗುತ್ತದೆ.

whatss

ಇತ್ತೀಚಿಗೆ ಕೆಎಸ್‌ಆರ್‌ಟಿಸಿ ಪ್ಯಾಸೆಂಜರ್ ಬಸ್‌ಗಳಲ್ಲಿ ಮಾತ್ರ ಪಾರ್ಸೆಲ್ ಸೇವೆ ನೀಡುತ್ತಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ, ಇದನ್ನು ಗಮನದಲ್ಲಿಟ್ಟು ಒಂದು ಹೆಜ್ಜೆ ಮುಂದೆ ಇಟ್ಟು ಸರಕು ಸಾಗಣೆಗೆ ಮೊದಲ ಹಂತದಲ್ಲಿ ಹತ್ತು ಲಾರಿಗಳನ್ನು ರಸ್ತೆಗಿಳಿಸಲು ಯೋಜನೆ ಯನ್ನು ರೂಪಿಸಿದೆ. ಒಟ್ಟು 20 ಲಾರಿ ಖರೀದಿಗೆ ಟೆಂಡರ್ ಕರೆಯಲಾಗಿದ್ದು, ಕಡಿಮೆ ದರದಲ್ಲಿ ಲಾರಿ ಪೂರೈಸುವ ತಯಾರಿಕಾ ಕಂಪನಿಗೆ ಟೆಂಡರ್ ನೀಡಲಾಗುವುದು. ಎಲ್ಲವೂ ಅಂದುಕೊಂಡ ಹಾಗೆ ನಡೆದರೆ ಇನ್ನೆರಡು ತಿಂಗಳಲ್ಲಿ KSRTCಯ ಸರಕು ಸಾಗಣೆ ಟ್ರಕ್ ಗಳು ಕಾರ್ಯಾರಂಭ ಮಾಡಲಿವೆ.
ಸರಕು ಸಾಗಣೆ ಟ್ರಕ್‌ಗಳು ಆರಂಭವಾದರೆ ಇದರಿಂದ KSRTC ಯ ಹೆಚ್ಚು ಆದಾಯ ಬರುತ್ತದೆ, ಆರ್ಥಿಕತೆಯು ಸುಧಾರಿಸುತ್ತದೆ ಮತ್ತು ಇನ್ನು ಹೆಚ್ಚು ಸೇವೆಗಳನ್ನು ನೀಡಲು ಸಾಧ್ಯವಾಗುತ್ತದೆ.

ಪ್ರಸ್ತುತ, ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪರಿಚಯಿಸಲಾದ ಪಾರ್ಸೆಲ್ ವ್ಯವಸ್ಥೆಯು ಕನಿಷ್ಠ 100 KG ಯಿಂದ ಗರಿಷ್ಠ 500 KG ವರೆಗೆ ಯಾವದೇ ತರಹದ ಬೇರೆ ಬೇರೆ ಸರಕುಗಳನ್ನು ಸಾಗಿಸಲು ಅನುವು ಮಾಡಿಕೊಡುತ್ತದೆ.
ವಿವಿಧ ವಿಭಾಗಗಳಿಗೆ ಬರುವ ಪಾರ್ಸೆಲ್‌ಗಳನ್ನು ವಿವಿಧ ಮಾರ್ಗಗಳಿಗೆ ಹೋಗುವ ಬಸ್‌ಗಳಲ್ಲಿ ಕಳುಹಿಸಲಾಗುತ್ತದೆ. ಅವುಗಳನ್ನು ಡಿಪೋ ಅಥವಾ ನಿಲ್ದಾಣಗಳಲ್ಲಿ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗಿದೆ. ಆಯಾ ಪಾರ್ಸೆಲ್ ಗೆ ಸಂಬಂಧಪಟ್ಟವರು ಬಂದು ತಮ್ಮ ಪಾರ್ಸೆಲ್ ತೆಗೆದುಕೊಂಡು ಹೋಗಬೇಕಾಗುತ್ತದೆ. ಇದರಿಂದ ಪ್ರತಿನಿತ್ಯ ನಿಗಮಕ್ಕೆ ಸುಮಾರು 4 ಲಕ್ಷ ರೂ. ಆದಾಯ ಬರುತ್ತದೆ. KSRTC ಯ ಚಾಲಕರನ್ನೇ ಸರಕು ಸಾಗಣೆ ಲಾರಿಗಳಿಗೂ ಚಾಲಕರನ್ನಾಗಿ ನಿಯೋಜಿಸಲಾಗಿದೆ. ಹೀಗಾಗಿ ಯಾವುದೇ ಹೊಸ ಚಾಲಕರನ್ನು ನೇಮಿಸಿಕೊಳ್ಳುವ ಅಗತ್ಯವಿಲ್ಲ.

ಈ ಲಾರಿಗಳು 5-6 ಟನ್ ಗಳ ವರೆಗೂ ಒಂದೇ ಬಾರಿಗೆ ಸರಕುಗಳನ್ನು ಸಾಗಿಸಲು ಸಾಧ್ಯವಾಗುತ್ತದೆ. ಈ ಸೇವೆಯ ಬೇಡಿಕೆಗಳು ಯಾವ ಯಾವ ಪ್ರದೇಶದಲ್ಲಿ ಇದೆ ಎಂಬುದರ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ. ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಭಾಗಗಳಲ್ಲಿ ಹೆಚ್ಚು ಅವಕಾಶಗಳಿವೇ ಎಂದು ಪರಿಶೀಲಿಸಲಾಗಿದೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಇದಲ್ಲದೆ KSRTC ಯು  ಸರಕುಗಳನ್ನು ಸಾಗಿಸುವುದರ ಜೊತೆಗೆ ಜನರ ಮನೆ ಬಾಗಿಲಿಗೆ, ಅಂದರೆ Home delivery ಸೇವೆಯನ್ನು ನೀಡಲು ಸಹ ಯೋಚಿಸುತ್ತಿದೆ. ನಿಗಮಗಳಿಂದ ನಿಲ್ದಾಣ ಅಥವಾ ಡಿಪೋ ಗೆ ಬಂದಿರುವ ಪಾರ್ಸೆಲ್ ಗಳನ್ನು ಸಿಬ್ಬಂದಿಯ ಮೂಲಕ ಪೋರ್ಟರ ಮಾದರಿಯಲ್ಲಿ ಆಯಾ ಮನೆ ವಿಳಾಸಕ್ಕೆ ಡೆಲಿವೆರಿ ಮಾಡಲಾಗುವುದು. ಇದಕ್ಕೆ ಶುಲ್ಕ ವಿಧಿಸಲಾಗುವುದು. ಈ ಕುರಿತಾಗಿ ಇನ್ನು ಚಿಂತನೆಗಳು ನಡೆಯುತ್ತಿವೆ ಎಂದು ಅಧಿಕಾರಗಳು ತಿಳಿಸಿದ್ದಾರೆ.

ಇಂತಹ ಉತ್ತಮ ಮಾಹಿತಿಯನ್ನು ನಿಮ್ಮ ಎಲ್ಲಾ ಸ್ನೇಹತರೊಂದಿಗೆ ಹಾಗೂ ನಿಮ್ಮ ಕುಟುಂಬ, ಬಂಧು-ಭಾಂದವರಲ್ಲಿ ಹಂಚಿಕೊಳ್ಳಿ ಮತ್ತು ಈ ಸೇವಯ ಲಾಭವನ್ನು ಪಡೆದುಕೊಂಡು ಆನಂದಿಸಿರಿ, ಧನ್ಯವಾದಗಳು.

ಇದನ್ನೂ ಓದಿ: 5 ನಿಮಿಷದಲ್ಲಿ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಿ : How to link Aadhaar with Pan card

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!