Gruhalakshmi – 5ನೇ ಕಂತಿನ ₹2,000/- ಹಣ ಪಡೆಯೋಕೆ ಈ ಹೊಸ ರೂಲ್ಸ್ ಕಡ್ಡಾಯ! ತಪ್ಪದೇ ತಿಳಿದುಕೊಳ್ಳಿ

Gruhalkshmi ekyc rule

WhatsApp Group Telegram Group

ಗೃಹಲಕ್ಷ್ಮೀ ಯೋಜನೆಯ(Gruha laxmi yojane ) 5ನೇ ಕಂತಿನ ಹಣಕ್ಕಾಗಿ ಇದು ಕಡ್ಡಾಯ! ಗೃಹಲಕ್ಷ್ಮೀ ಯೋಜನೆಯ ಮೂಲಕ ಈಗಾಗಲೇ ನಾಲ್ಕು ಕಂತುಗಳ ಹಣವನ್ನು ಫಲಾನುಭವಿಗಳಿಗೆ ಜಮಾ ಮಾಡಲಾಗಿದೆ. ಈಗ ಐದನೇ ಕಂತಿನ ಹಣವನ್ನು ಸಹ ಶೀಘ್ರದಲ್ಲೇ ಜಮಾ ಮಾಡಲಾಗುವುದು. ಆದರೆ, ಐದನೇ ಕಂತಿನ ಹಣವನ್ನು ಪಡೆಯಲು ಒಂದು ಪ್ರಮುಖ ಕಾರ್ಯವನ್ನು ಮಾಡುವುದು ಕಡ್ಡಾಯವಾಗಿದೆ. ಅದು ಏನು ಎಂದು ತಿಳಿಯಬೇಕೇ? ಹಾಗಿದ್ದರೆ, ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ಸರ್ಕಾರ(Karnataka Government ) ವು ರಾಜ್ಯದ ಮಹಿಳೆಯರ ಸಬಲೀಕರಣ(women empowerment)ಕ್ಕಾಗಿ ಜಾರಿಗೆ ತಂದಿರುವ ಅತಿದೊಡ್ಡ ಯೋಜನೆ ಗೃಹಲಕ್ಷ್ಮಿ ಯೋಜನೆ. ಈ ಯೋಜನೆಯಡಿ, ಕುಟುಂಬದ ಯಜಮಾನಿಯಾಗಿರುವ ಮಹಿಳೆಯರಿಗೆ ಪ್ರತಿ ತಿಂಗಳು ₹2,000ಗಳ ನಗದು ನೆರವು ನೀಡಲಾಗುತ್ತದೆ. ಈ ನೆರವಿನಿಂದಾಗಿ, ಮಹಿಳೆಯರು ತಮ್ಮ ಕುಟುಂಬದ ನಿರ್ವಹಣೆ, ಮಕ್ಕಳ ಶಿಕ್ಷಣ, ಆರೋಗ್ಯ ಸೇವೆಗಳು ಸೇರಿದಂತೆ ವಿವಿಧ ಖರ್ಚುಗಳನ್ನು ಭರಿಸಲು ಸಾಧ್ಯವಾಗುತ್ತದೆ. ಇದು ಮಹಿಳೆಯರಿಗೆ ಆರ್ಥಿಕವಾಗಿ ಸ್ವಾವಲಂಬನೆಯನ್ನು ಸಾಧಿಸಲು ಸಹಾಯ ಮಾಡುತ್ತದೆ.

ಕರ್ನಾಟಕದ ಲಕ್ಷಾಂತರ ಮಹಿಳೆಯರ ಆರ್ಥಿಕ ಸ್ವಾತಂತ್ರ್ಯಕ್ಕೆ ಹೊಸ ಭರವಸೆಯನ್ನು ನೀಡುವ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದಾಗಿನಿಂದಲೂ, ಇದರ ಸುತ್ತಲೂ ಸಾಕಷ್ಟು ಗೊಂದಲಗಳು ಮತ್ತು ಅನಿಶ್ಚಿತತೆಗಳು ಉಂಟಾಗಿವೆ. ಈ ಗೊಂದಲಗಳಿಂದಾಗಿ, ಇಂದಿಗೂ ಲಕ್ಷಾಂತರ ಮಹಿಳೆಯರಿಗೆ ಒಂದೇ ಒಂದು ಕಂತಿನ ಹಣವೂ ವರ್ಗಾವಣೆಯಾಗಿಲ್ಲ.

whatss

ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿ ಸಲ್ಲಿಸಿದ ಎಲ್ಲಾ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಮಾಡುವಲ್ಲಿ ಸರ್ಕಾರ ಶ್ರಮಿಸುತ್ತಿದೆ. ಆದರೆ, ಕೆಲವು ಕಾರಣಗಳಿಂದ ಎಲ್ಲಾ ಮಹಿಳೆಯರಿಗೆ ಹಣ ವರ್ಗಾವಣೆ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಈ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ತೆಗೆದುಕೊಳ್ಳುತ್ತಿದೆ. ಆದರೆ ಗಮನಿಸಬೇಕಾದ ವಿಷಯವೆಂದರೆ, ಇದುವರೆಗೆ ಸ್ಥಗಿತಗೊಂಡಿದ್ದ ಗೃಹಲಕ್ಷ್ಮಿ ಯೋಜನೆಗೆ ಹೊಸ ಅರ್ಜಿ ಸ್ವೀಕಾರವನ್ನು ಮತ್ತೆ ಆರಂಭಿಸಲಾಗಿದೆ. ಮಹಿಳಾ ಫಲಾನುಭೂವಿಗಳು ಹತ್ತಿರದ ಸೇವಾ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದು.

ಗೃಹಲಕ್ಷ್ಮಿ ಹಣ ಪಡೆಯಲು E -KYC ಕಡ್ಡಾಯ?

ಇತ್ತೀಚಿನ ನವೀಕರಣದಲ್ಲಿ, ತಿಂಗಳಾಂತ್ಯದೊಳಗೆ ಗೃಹ ಲಕ್ಷ್ಮಿ ಯೋಜನೆಯ ಯಶಸ್ಸನ್ನು ಖಚಿತಪಡಿಸಲು ಸರ್ಕಾರವು ನವೀನ ನಿಯಮಗಳನ್ನು ಜಾರಿಗೆ ತರುತ್ತಿದೆ. 5ನೇ ಕಂತು ಬಿಡುಗಡೆ ಮಾಡುವ ಮುನ್ನ ಅರ್ಹ ಫಲಾನುಭವಿಗಳು ಸರಕಾರ ಹೊರಡಿಸಿರುವ ಮಹತ್ವದ ಆದೇಶವನ್ನು ಕಡ್ಡಾಯವಾಗಿ ಪಾಲಿಸಬೇಕು.

ಹೊಸದಾಗಿ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಅರ್ಜಿ ಸಲ್ಲಿಸಲು, ಮಹಿಳೆಯ ಹೆಸರಿನಲ್ಲಿರುವ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಪ್ರತಿ ಮತ್ತು ಈ ಕೆ ವೈ ಸಿ(E- KYC) ಆಗಿರುವ ಬ್ಯಾಂಕ್ ಖಾತೆಯ ವಿವರಗಳನ್ನು ನಿಮ್ಮ ಹತ್ತಿರದ ಸೇವಾಕೇಂದ್ರಕ್ಕೆ ಸಲ್ಲಿಸಿ. ಸರ್ಕಾರಿ ಉದ್ಯೋಗದಲ್ಲಿರುವ ಮಹಿಳೆ ಅಥವಾ ಆ ಕುಟುಂಬದ ಸದಸ್ಯರು ಅಥವಾ ತೆರಿಗೆ ಪಾವತಿ ಮಾಡುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ.

ಕರ್ನಾಟಕ ಸರ್ಕಾರ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಗಳ ಮೂಲಕ ರಾಜ್ಯದ ಬಡ ಮತ್ತು ಅಸಹಾಯಕ ಕುಟುಂಬಗಳಿಗೆ ಆಹಾರ ಮತ್ತು ಆರ್ಥಿಕ ಸಹಾಯವನ್ನು ನೀಡುತ್ತಿದೆ. ಹೇಗೆ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಯಜಮಾನನ ಬ್ಯಾಂಕ್ ಖಾತೆಗೆ (Bank Account) ಈಕೆ ವೈ ಸಿ(E- KYC ) ಆಗಿರುವುದು ಕಡ್ಡಾಯವಾಗಿದೆ. ಅದೇ ರೀತಿ ಗೃಹಲಕ್ಷ್ಮಿ ಯೋಜನೆಗೂ ಈ ನಿಯಮವನ್ನು ತರಲಾಗಿದೆ. ಕೇವಲ ಮಹಿಳೆ ಮಾತ್ರವಲ್ಲ, ಆಯಾ ಕುಟುಂಬದ ಸದಸ್ಯರು ಸಹ ಈಕೆ ವೈ ಸಿ ಮಾಡಿಸಿಕೊಳ್ಳಬೇಕು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Editor in Chief

Editor in Chief

Lingaraj Ramapur BCA, MCA, MA ( Journalism );as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.

Leave a Reply

Your email address will not be published. Required fields are marked *

error: Content is protected !!