ಗುಡ್ ನ್ಯೂಸ್ : ಈ ವರ್ಗದ ಮಹಿಳೆಯರಿಗೆ, ಉಚಿತ ಹೊಲಿಗೆ ಯಂತ್ರ ತರಬೇತಿಗೆ ಅರ್ಜಿ ಅವ್ಹಾನ!

free sewing machine Training

ಉಚಿತ ಹೊಲಿಗೆ ತರಬೇತಿ: ಸ್ವಾವಲಂಬನೆಯ ಹಾದಿಯತ್ತ ಒಂದು ಖಚಿತ ಹೆಜ್ಜೆ

ಮಹಿಳೆಯರೇ, ಗಮನಿಸಿ!

ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ(Canara Bank Rural Self Employment Training Institute) ನಿಮಗಾಗಿ ಒಂದು ಅದ್ಭುತ ಅವಕಾಶವನ್ನು ತಂದಿದೆ. 30 ದಿನಗಳ ಉಚಿತ ಹೊಲಿಗೆ ತರಬೇತಿಯ(30 days of free sewing training) ಮೂಲಕ ಸ್ವಾವಲಂಬನೆಯ ಹಾದಿಯತ್ತ ಖಚಿತವಾಗಿ ನಡೆಯಲು ಈ ತರಬೇತಿ ನಿಮಗೆ ಸಹಾಯ ಮಾಡುತ್ತದೆ. ತರಬೇತಿ ಯಾವಾಗ ಪ್ರಾರಂಭವಾಗುತ್ತದೆ ಮತ್ತು ಅದರ ಅವಧಿ ಎಷ್ಟು? ತರಬೇತಿಗೆ ಅರ್ಹತೆ ಏನು? ಸ್ವಉದ್ಯೋಗಕ್ಕೆ ಬ್ಯಾಂಕ್ ಯಾವ ರೀತಿಯ ಸಾಲ(loan)ಗಳನ್ನು ಒದಗಿಸುತ್ತದೆ ಮತ್ತು ಅವುಗಳ ಬಡ್ಡಿ(interest)ದರ ಎಷ್ಟು?, ಎಂದು ತಿಳಿಯಲು ನಮ್ಮ ಈ ವರದಿಯನ್ನು ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯಿಂದ ಉಚಿತ ಹೊಲಿಗೆ ತರಬೇತಿ ಮಹಿಳೆಯರಿಗೆ ಸ್ವಾವಲಂಬನೆಯ ಹಾದಿ ತೋರಿಸುವ ಉತ್ತಮ ಅವಕಾಶ. ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ನೀಡಲು ಉದ್ದೇಶಿಸಿದೆ. ಈ ತರಬೇತಿಯು ಮಹಿಳೆಯರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವುದರ ಜೊತೆಗೆ ಸ್ವಾವಲಂಬಿಗಳಾಗಲು ಸಹಾಯ ಮಾಡುತ್ತದೆ.

ಹೊಲಿಗೆ ತರಬೇತಿಯ ಪ್ರಯೋಜನಗಳು( Benefits of sewing Training):

ಉಚಿತ ತರಬೇತಿ: ಈ ತರಬೇತಿಯಲ್ಲಿ ಭಾಗವಹಿಸಲು ಯಾವುದೇ ಶುಲ್ಕವಿಲ್ಲ.

ಅನುಭವಿ ತರಬೇತುದಾರರು: ಈ ತರಬೇತಿಯನ್ನು ನುರಿತ ಮತ್ತು ಅನುಭವಿ ತರಬೇತುದಾರರು ನೀಡುತ್ತಾರೆ.

ಆಧುನಿಕ ಉಪಕರಣಗಳು: ತರಬೇತಿಗೆ ಅಗತ್ಯವಿರುವ ಎಲ್ಲಾ ಆಧುನಿಕ ಉಪಕರಣಗಳನ್ನು ಸಂಸ್ಥೆಯು ಒದಗಿಸುತ್ತದೆ.

ವೃತ್ತಿಪರ ಮಾರ್ಗದರ್ಶನ: ತರಬೇತಿಯ ನಂತರ, ಉದ್ಯೋಗಾವಕಾಶಗಳನ್ನು ಪಡೆಯಲು ವೃತ್ತಿಪರ ಮಾರ್ಗದರ್ಶನ ನೀಡಲಾಗುವುದು.

ಸ್ವಉದ್ಯೋಗಕ್ಕೆ ಪ್ರೋತ್ಸಾಹ: ಸ್ವಂತ ಉದ್ಯೋಗ ಪ್ರಾರಂಭಿಸಲು ಬಯಸುವವರಿಗೆ ಸಾಲ ಸೌಲಭ್ಯಗಳನ್ನು ಪಡೆಯಲು ಸಹಾಯ ಮಾಡಲಾಗುವುದು.

ಉಚಿತ 30 ದಿನಗಳ ಉಚಿತ ಹೊಲಿಗೆ ತರಬೇತಿ ಅರ್ಹತೆಗಳು ಯಾವುವು?

ಈ ಕೆಳಗಿನವರು 30 ದಿನಗಳ ಉಚಿತ ಹೊಲಿಗೆ ತರಬೇತಿಯಲ್ಲಿ ಭಾಗವಹಿಸಲು ಅರ್ಹರು(Eligible to participate in the 30 days free sewing training):

18 ರಿಂದ 45 ವರ್ಷದೊಳಗಿನವರು

ಕನ್ನಡ ಓದು ಬರಹ ಬಲ್ಲವರು

ಸ್ವಯಂ ಉದ್ಯೋಗ ಪ್ರಾರಂಭಿಸಲು ಆಸಕ್ತಿ ಹೊಂದಿರುವವರು

ಗಮನಿಸಿ:

ಗ್ರಾಮೀಣ ಭಾಗದ ಬಿಪಿಎಲ್ ಕಾರ್ಡ್(BPL card) ಹೊಂದಿರುವ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.

ತರಬೇತಿ ಉಚಿತವಾಗಿದ್ದು, ಊಟ ಮತ್ತು ವಸತಿ ವ್ಯವಸ್ಥೆ ಒದಗಿಸಲಾಗುವುದು(Free and food and accommodation).

ತರಬೇತಿಯಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವವರು ಅಗತ್ಯ ದಾಖಲಾತಿಗಳೊಂದಿಗೆ ಸಂಬಂಧಿತ ಸಂಸ್ಥೆಯನ್ನು ಸಂಪರ್ಕಿಸಬೇಕು.

whatss

ತರಬೇತಿ ಪ್ರಾರಂಭವಾಗುವ ದಿನ (Training date):

ಹೊಲಿಗೆ ಯಂತ್ರ ತರಬೇತಿಯು ಮಾರ್ಚ್ 18, 2024 ರಂದು ಪ್ರಾರಂಭವಾಗಿ ಏಪ್ರಿಲ್ 18, 2024 ರಂದು ಕೊನೆಗೊಳ್ಳುತ್ತದೆ. ತರಬೇತಿಯು ಒಟ್ಟು 30 ದಿನಗಳವರೆಗೆ ಇರುತ್ತದೆ.

ತರಬೇತಿ ನಡೆಸುವ ಸ್ಥಳದ ವಿವರ(Training Place) :

ಕೆನರಾ ಬ್ಯಾಂಕ್ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆ, ಇಂಡಸ್ಟ್ರಿಯಲ್ ಏರಿಯಾ, ಹೆಗಡೆ ರಸ್ತೆ, ಕುಮಟಾ, ಉತ್ತರಕನ್ನಡ ಜಿಲ್ಲೆ-581343

ಅರ್ಜಿ ಸಲ್ಲಿಸುವ ವಿಧಾನ(Training application):

ಕೆನರಾ ಬ್ಯಾಂಕ್, ಗ್ರಾಮೀಣ ಸ್ವಯ ಉದ್ಯೋಗ ತರಬೇತಿ ಸಂಸ್ಥೆ ಕುಮಟಾ ಕೇಂದ್ರದ ಈ 944 986 0007, 953 828 1989, 9916 783 825, 8880 444612 ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ಅಗತ್ಯ ವಿವರಗಳನ್ನು ಒದಗಿಸಿ ನಿಮ್ಮ ಹೆಸರು ಹೆಸರನ್ನು ನಂದಾಯಿಸಿಕೊಳ್ಳಬಹುದು.

ಬೇಕಾದ ದಾಖಲೆಗಳು(Required Documents):

ಆಧಾರ್ ಕಾರ್ಡ್ ಪ್ರತಿ,
ಬ್ಯಾಂಕ್ ಪಾಸ್ ಬುಕ್,
ರೇಷನ್ ಕಾರ್ಡ್,
ಫೋಟೋ

ತರಬೇತಿ ಆರಂಭವಾಗುವ ದಿನ ಈ ದಾಖಲೆಗಳನ್ನು ತೆಗೆದುಕೊಂಡು ನೇರವಾಗಿ ತರಬೇತಿಯಲ್ಲಿ ಭಾಗವಹಿಸಬಹುದು.

Sewing Machine Subsidy Yojana – 2024:

ಸ್ವಉದ್ಯೋಗಕ್ಕೆ ಸಾಲ(loan) ಪಡೆಯುವ ಅವಕಾಶಗಳು ಕೇಂದ್ರದಲ್ಲಿ ತರಬೇತಿ ಪಡೆಯುವ ಅವಧಿಯಲ್ಲಿ ಸ್ವಉದ್ಯೋಗ ಆರಂಭಿಸಲು ಬ್ಯಾಂಕ್ ಮೂಲಕ ಸಬ್ಸಿಡಿಯಲ್ಲಿ ಸಾಲ ಪಡೆಯುವ ಅವಕಾಶ ಲಭ್ಯವಿದೆ. ಈ ಲೇಖನದಲ್ಲಿ, ಕೆಲವು ಪ್ರಮುಖ ಯೋಜನೆಗಳ ಕುರಿತು ಮಾಹಿತಿ ನೀಡಲಾಗಿದೆ.

ಯೋಜನೆಗಳು:

Vishwakarma Yojana – ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ:

ಈ ವರ್ಷದಿಂದ ಜಾರಿಗೆ ಬಂದಿರುವ ಈ ಯೋಜನೆಯಡಿ ಸ್ವಉದ್ಯೋಗ ಆರಂಭಿಸಲು ಶೇಕಡ 5 ರಷ್ಟು ಸಬ್ಸಿಡಿಯಲ್ಲಿ ಒಂದು ಲಕ್ಷದವರೆಗೆ ಸಾಲ ಪಡೆಯಬಹುದು.

PMEGP – ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ:

ಈ ಯೋಜನೆಯ ಮೂಲಕ ಸ್ವಉದ್ಯೋಗ ಆರಂಭಿಸಲು ಶೇಕಡ 35 ರಷ್ಟು ಸಬ್ಸಿಡಿ(subsidy)ಯಲ್ಲಿ ಬ್ಯಾಂಕ್ ಮೂಲಕ ಸಾಲ ಪಡೆಯಬಹುದು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

One thought on “ಗುಡ್ ನ್ಯೂಸ್ : ಈ ವರ್ಗದ ಮಹಿಳೆಯರಿಗೆ, ಉಚಿತ ಹೊಲಿಗೆ ಯಂತ್ರ ತರಬೇತಿಗೆ ಅರ್ಜಿ ಅವ್ಹಾನ!

  1. SIR/MADAM, MY MOTHER’S GRUHALAKSHMI SCHEME 1 ST INSTALLMENT MONEY CAME BUT 2 ND, 3 RD, 4 TH, 5 TH, 6 TH & 7 TH INSTALLMENT MONEY NOT CAME, SO PLEASE GIVE SOLUTION, MY MOTHER NAME-Shalinibai B Zingade, NAVANAGAR BAGALKOT, RC NUMBER-510200176325, REGISTERED MOBILE NUMBER-8431468091

Leave a Reply

Your email address will not be published. Required fields are marked *

error: Content is protected !!