Mutual Fund Vs FD: ಫಿಕ್ಸೆಡ್ ಡೆಪಾಸಿಟ್ ಮತ್ತು ಮ್ಯೂಚುವಲ್ ಫಂಡ್ ನಲ್ಲಿ ಯಾವುದು ಬೆಸ್ಟ್ ಗೊತ್ತಾ?

FD vs mutual fund

ಹಣ ಉಳಿಸಲು ಬ್ಯಾಂಕ್‌ನಲ್ಲಿ ಫಿಕ್ಸೆಡ್ ಡೆಪಾಸಿಟ್ (Fixed deposit) ಮಾಡುವುದು ಸಾಮಾನ್ಯ. ಉತ್ತಮ ಆದಾಯಕ್ಕಾಗಿ ಮ್ಯೂಚುಯಲ್ ಫಂಡ್‌ಗಳಲ್ಲಿ (Mutual fund) ಹೂಡಿಕೆ ಮಾಡಲು ಬಯಸುತ್ತಾರೆ. ಯಾವುದು ಉತ್ತಮವಾಗಿರುತ್ತೆ ಹೂಡಿಕೆಗೆ ಕುರಿತು ಗೊಂದಲ ಸಾಕಷ್ಟು ಜನ ಸಾಮಾನ್ಯರಲ್ಲಿ ಬಂದೆ ಬಂದಿರುತ್ತೆ ಅಲ್ಲವೇ? ಹೌದು, ಹೂಡಿಕೆದಾರರಿಗೆ ತಮ್ಮ ಹಣಕಾಸಿನ ಸ್ಥಿತಿಯನ್ನು(financially status) ಸುಧಾರಿಸಲು ಮತ್ತು ಅವರ ವಿವಿಧ ಗುರಿಗಳನ್ನು ಸಾಧಿಸಲು ಅನುವು ಮಾಡಿಕೊಡುವ ಹಲವಾರು ಹೂಡಿಕೆ ಆಯ್ಕೆಗಳು ಇದೀಗ ಬ್ಯಾಂಕ್ ಗಳಲ್ಲಿ ಲಭ್ಯವಿವೆ. ಮ್ಯೂಚುವಲ್ ಫಂಡ್‌ಗಳು(Mutual fund) ಮತ್ತು ಫಿಕ್ಸೆಡ್ ಡೆಪಾಸಿಟ್‌ಗಳು(Fixed deposit) ಎರಡು ಜನಪ್ರಿಯ ಹೂಡಿಕೆ ಆಯ್ಕೆಗಳಾಗಿವೆ, ಪ್ರತಿಯೊಂದೂ ಹೂಡಿಕೆದಾರರಿಗೆ ಬೇರೆ ಬೇರೆ ರೀತಿಯ ಪ್ರಯೋಜನಗಳನ್ನು ನೀಡುತ್ತದೆ. ಫಿಕ್ಸೆಡ್ ಡಿಪಾಸಿಟ್(FD) ಸಾಂಪ್ರದಾಯಿಕ, ಸುರಕ್ಷಿತ ಹೂಡಿಕೆಯ ಆಯ್ಕೆ ಎಂದು ಪರಿಗಣಿಸಿದರೆ, ಮ್ಯೂಚುವಲ್ ಫಂಡ್‌ಗಳು (MF) ಮಾರುಕಟ್ಟೆಯ ಮಾನ್ಯತೆಯ ಮೂಲಕ ಹೆಚ್ಚಿನ ಆದಾಯದ ಸಾಮರ್ಥ್ಯವನ್ನು ನೀಡುತ್ತವೆ ಎಂದು ಪರಿಗಣಿಸಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

FD & MF ಹೆಚ್ಚಿನ ಆದಾಯದ ಸಾಮರ್ಥ್ಯವನ್ನು ನೀಡುತ್ತವೆ:

ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಹೂಡಿಕೆದಾರರು ಫಿಕ್ಸೆಡ್ ಡಿಪಾಸಿಟ್ (FD)ಮತ್ತು ಮ್ಯೂಚುವಲ್ ಫಂಡ್(Mutual fund) ನಡುವಿನ ವ್ಯತ್ಯಾಸವನ್ನು (Difference) ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಬನ್ನಿ ಹಾಗಾದರೆ ಅವುಗಳ ಗುಣಲಕ್ಷಣಗಳು ಮತ್ತು ಸೂಕ್ಷ್ಮ ವ್ಯತ್ಯಾಸಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ.

ಫಿಕ್ಸೆಡ್ ಡೆಪಾಸಿಟ್‌:

ಮೊದಲಿಗೆ ಫಿಕ್ಸೆಡ್ ಡೆಪಾಸಿಟ್‌ಗಳು (FD) ಬಗ್ಗೆ ಮಾಹಿತಿಯನ್ನು ನೋಡುವುದಾದರೆ,
ಫಿಕ್ಸೆಡ್ ಡೆಪಾಸಿಟ್‌ಗಳು (FD) ಸರಳ ಮತ್ತು ಸಾಂಪ್ರದಾಯಿಕ ಹೂಡಿಕೆ ಆಯ್ಕೆಗಳಲ್ಲಿ ಒಂದಾಗಿದೆ. ನೀವು ಗಮನಾರ್ಹವಾದ ಒಂದು-ಬಾರಿ, ಒಟ್ಟು ಮೊತ್ತದ ಹೂಡಿಕೆಯನ್ನು (one time investment) ಮಾಡುತ್ತೀರಿ. ಎಫ್‌ಡಿಗಳು ನಿಮಗೆ ಪೂರ್ವನಿರ್ಧರಿತ ಬಡ್ಡಿ ದರದಲ್ಲಿ ನಿಯಮಿತ ಆದಾಯವನ್ನು ಗಳಿಸುತ್ತವೆ. ನಿಮ್ಮ ಎಫ್‌ಡಿ ಹೂಡಿಕೆಯನ್ನು ನೀವು ಸ್ಥಿರ ಅವಧಿಗೆ(Fixed duration) ಹಿಡಿದಿಟ್ಟುಕೊಳ್ಳುತ್ತೀರಿ. ಈ ಹೂಡಿಕೆಯು ಮಾರುಕಟ್ಟೆಯ ಚಂಚಲತೆಗೆ ಎಲ್ಲಿಯೂ ಸಂಬಂಧ ಹೊಂದಿರುವುದಿಲ್ಲ, ಆದ್ದರಿಂದ ಈ ಫಿಕ್ಸೆಡ್ ಡೆಪಾಸಿಟ್‌ ಸುರಕ್ಷಿತ ಹೂಡಿಕೆ (Secure deposit) ಆಯ್ಕೆಯಾಗಿದೆ. ಫಿಕ್ಸೆಡ್ ಡಿಪಾಸಿಟ್ ನಿವೃತ್ತ ವ್ಯಕ್ತಿಗಳು ಮತ್ತು ಹಿರಿಯ ನಾಗರಿಕರಿಗೆ ಹೂಡಿಕೆಯ ಜನಪ್ರಿಯ ಆಯ್ಕೆಯಾಗಿದೆ. ಸ್ಥಿರ ಠೇವಣಿ ಹೂಡಿಕೆದಾರರ ಮತ್ತೊಂದು ವರ್ಗವೆಂದರೆ ಆಸ್ತಿ ಅಥವಾ ಪಿತ್ರಾರ್ಜಿತ ಮಾರಾಟದಿಂದ ಬರುವ ದೊಡ್ಡ ಮೊತ್ತವನ್ನು ಹೊಂದಿರುವವರು.

ಸ್ಥಿರ ಠೇವಣಿಗಳು ಎರಡು ವಿಧಗಳಾಗಿವೆ – ಸಂಚಿತ ಮತ್ತು ಸಂಚಿತವಲ್ಲದ ಠೇವಣಿಗಳು. ಸಂಚಿತ ಠೇವಣಿಗಳೊಂದಿಗೆ ನಿಮ್ಮ ಬಡ್ಡಿ ಗಳಿಕೆಯನ್ನು ನಿಮ್ಮ ಮೂಲ ಮೊತ್ತಕ್ಕೆ ಸೇರಿಸಲಾಗುತ್ತದೆ, ಇದು ನಿಮಗೆ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸಂಚಿತವಲ್ಲದ ಠೇವಣಿಗಳೊಂದಿಗೆ, ನಿಮ್ಮ ಬಡ್ಡಿ ಗಳಿಕೆಗಳನ್ನು ನಿಯತಕಾಲಿಕವಾಗಿ ಸ್ವೀಕರಿಸಲು ನೀವು ಆರಿಸಿಕೊಳ್ಳುತ್ತೀರಿ.

ಮ್ಯೂಚುವಲ್ ಫಂಡ್‌:

ಇನ್ನೂ ಮ್ಯೂಚುವಲ್ ಫಂಡ್‌ಗಳ (Mutual fund) ಬಗ್ಗೆ ಮಾಹಿತಿಯನ್ನು ನೋಡುವುದಾದರೆ, ಮ್ಯೂಚುವಲ್ ಫಂಡ್ ಎನ್ನುವುದು ಮಾರುಕಟ್ಟೆ-ಸಂಯೋಜಿತ ಹೂಡಿಕೆಯ ಸಾಧನವಾಗಿದ್ದು, ಹೂಡಿಕೆದಾರರಿಂದ ಒಂದೇ ರೀತಿಯ ಗುರಿಗಳನ್ನು ಹೊಂದಿರುವ ಹಣವನ್ನು ಸಂಗ್ರಹಿಸುತ್ತದೆ ಮತ್ತು ಅವುಗಳನ್ನು ವಿವಿಧ ಸ್ವತ್ತುಗಳಲ್ಲಿ ಹೂಡಿಕೆ ಮಾಡುತ್ತದೆ. ಸ್ವತ್ತುಗಳ ಆಧಾರದ ಮೇಲೆ ನಿಧಿಯು ಹೂಡಿಕೆ ಮಾಡುವುದನ್ನು ಮೂರು ಮುಖ್ಯ ವಿಧಗಳಾಗಿ ವಿಂಗಡಿಸಬಹುದು – ಇಕ್ವಿಟಿ ಫಂಡ್‌ಗಳು(equity fund), ಸಾಲ ನಿಧಿಗಳು(loan schems) ಮತ್ತು ಹೈಬ್ರಿಡ್ ಫಂಡ್‌ಗಳು(hybrid funds).

ಮ್ಯೂಚುವಲ್ ಫಂಡ್‌ಗಳು (Mutual funds) ಮಾರುಕಟ್ಟೆ-ಸಂಯೋಜಿತ ಹೂಡಿಕೆಯಾಗಿರುವುದರಿಂದ, ಆದಾಯವು ಖಾತರಿಯಿಲ್ಲ. ಆದ್ದರಿಂದ ನೀವು ಯಾವಾಗಲೂ ನಿಮ್ಮ ಅಪಾಯದ ಹಸಿವಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು.

whatss

ಫಿಕ್ಸೆಡ್ ಡೆಪಾಸಿಟ್‌ಗಳು(FD) ಮತ್ತು ಮ್ಯೂಚುಯಲ್ ಫಂಡ್‌ಗಳ (Mutual funds) ನಡುವಿನ ವ್ಯತ್ಯಾಸದ ಪ್ರಮುಖ ವ್ಯತ್ಯಾಸಗಳು ಈ ಕೆಳಗಿನಂತಿವೆ :

ಬನ್ನಿ ಮೊದಲಿಗೆ ಮ್ಯೂಚುಯಲ್ ಫಂಡ್ ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿದುಕೊಳ್ಳೋಣ,
ಒಬ್ಬ ಮನುಷ್ಯ ಪ್ರತಿ ತಿಂಗಳು ಮ್ಯೂಚುಯಲ್ ಫಂಡ್ (Mutual Fund) ನಲ್ಲಿ 500 ರೂಪಾಯಿ ಹೂಡಿಕೆ ಮಾಡುತ್ತಿದ್ದಾನೆ ಎಂದಾದರೆ ಆತನಿಗೆ ವಾರ್ಷಿಕವಾಗಿ 12% ಲಾಭ ಸಿಗುತ್ತದೆ ಅಂದರೆ 20 ವರ್ಷಗಳ ಕಾಲ ಹೂಡಿಕೆ ಮಾಡಿದರು ನಿಮ್ಮ ಬಳಿ 4.99 ಲಕ್ಷದಷ್ಟು ಹಣ ಉಳಿಯುತ್ತದೆ. ಇಲ್ಲಿ ಸ್ವಲ್ಪ ಮೋತ್ತದ ಹಣವನ್ನು ಹೂಡಿಕೆ ಮಾಡಿ 5 ಲಕ್ಷ ಹಣ ಪಡೆಯುವುದು ಹೇಗೆ ಎಂಬುದು ಪ್ರಶ್ನೆಯಾದರೆ, ಇದ್ದಕೆ ಉತ್ತರ ಕೂಡಾ ಇಲ್ಲಿ ತಿಳಿಯಬಹುದು. ಈ ಮ್ಯೂಚುಯಲ್ ಫಂಡ್ ಅಲ್ಲಿ 10,000 ಹೂಡಿಕೆ ಮಾಡುವಾತ ವಾರ್ಷಿಕವಾಗಿ 13% ಬಡ್ಡಿ ಸಿಕ್ಕಾಗ ಆತನಿಗೆ 20 ವರ್ಷಕ್ಕೆ ಬರೋಬ್ಬರಿ 1,14,55,191 ಮೊತ್ತವನ್ನು ಪಡೆಯುತ್ತಾನೆ.

ಇನ್ನೂ ಹಾಗಾದರೆ ಫಿಕ್ಸೆಡ್ ಡೆಪಾಸಿಟ್‌ ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿದುಕೊಳ್ಳೋಣ, ಬನ್ನಿ
ಫಿಕ್ಸೆಡ್ ಡೆಪಾಸಿಟ್ ನಲ್ಲಿ ಒಬ್ಬ ಮನುಷ್ಯ 1 ಲಕ್ಷ ಹಣ ಹೂಡಿಕೆ ಮಾಡುತ್ತಾನೆ, 10 ವರ್ಷದ ಅವಧಿಗೆ, ಶೇಕಡ 6% ಬಡ್ಡಿ ಮೊತ್ತದಲ್ಲಿ ಹೂಡಿಕೆ ಮಾಡುತ್ತಾನೆ ಎಂದಾದರೆ, ಆತನಿಗೆ 10 ವರ್ಷದ ನಂತರ ಸಿಗುವಂತಹ ಹಣದ ಮೊತ್ತ 1.81 ಲಕ್ಷ ಆಗಿರುತ್ತದೆ.ಇದು ಆತನಿಗೆ ಫಿಕ್ಸೆಡ್ ಡೆಪಾಸಿಟ್ ನಿಂದ ಸಿಗುವಂತಹ ಲಾಭಂಶ ಆಗಿರುತ್ತದೆ. ಮತ್ತು ಇನ್ನೂ ಮುಂದುವರೆಯುತ್ತಾ ನೋಡುವುದಾದರೆ ಅದೇ ಮನುಷ್ಯ 1 ಲಕ್ಷ ಹಣವನ್ನು ಅದೇ 10 ವರ್ಷ ಅವಧಿಗೆ, ಶೇಕಡ 15% ಬಡ್ಡಿ ಮೊತ್ತದಲ್ಲಿ ಹೂಡಿಕೆ ಮಾಡುತ್ತಾನೆ ಎಂದಾದರೆ, ಆತನಿಗೆ 10 ವರ್ಷದ ನಂತರ ಸಿಗುವಂತಹ ಹಣದ ಮೊತ್ತ 4.04 ಲಕ್ಷ ಇದು ಆತನಿಗೆ ಮ್ಯೂಚುಯಲ್ ಫಂಡ್ ನಿಂದ ಸಿಗುವಂತಹ ಲಾಭಾಂಶ ಆಗಿದೆ. ಇಲ್ಲಿ ಗಮನಿಸಬೇಕಾದಂತಹ ವಿಚಾರ ಏನೆಂದರೆ, ಬ್ಯಾಂಕಿನಲ್ಲಿ ಬ್ಯಾಂಕ್ ನ ನಿರ್ಧರಿತ ಬಡ್ಡಿಯ ಆಧಾರದ ಮೇಲೆ ಆತ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.

ಆದರೆ, ಮ್ಯೂಚುಯಲ್ ಫಂಡ್ (Mutual Fund)ನಲ್ಲಿ ಆತ ಮಾರುಕಟ್ಟೆ ಬೆಲೆಯನ್ನು ಮತ್ತು ಅದಕ್ಕೆ ಸಿಗುವಂತಹ ಬಡ್ಡಿಯ ಆಧಾರದ ಮೇಲೆ ಹೂಡಿಕೆ ಮಾಡಬೇಕಾಗುತ್ತದೆ. ಮತ್ತು ಫಿಕ್ಸೆಡ್ ಡೆಪಾಸಿಟ್ ಅಲ್ಲಿ ಗ್ಯಾರಂಟಿ ಆದ ರಿಟರ್ನ್ ಸಿಗುತ್ತದೆ. ಆದರೆ ಮ್ಯೂಚುಯಲ್ ಫಂಡ್ ನಲ್ಲಿ ಸ್ವಲ್ಪ ರಿಸ್ಕ್ ಇರುತ್ತದೆ. ಆದ್ದರಿಂದ ಮ್ಯೂಚುಯಲ್ ಫಂಡ್ ನಲ್ಲಿ ಹಣ ಹೂಡಿಕೆ ಮಾಡಲು ಹಲವರು ಹಿಂಜರಿಯುತ್ತಾರೆ. ಆದರೆ, ಪ್ರಸ್ತುತ ಕಾಲಮಾನದಲ್ಲಿ ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡುವುದು, ಬಹಳ ಉತ್ತಮವಾದಂತಹ ಹೂಡಿಕೆ ಎಂದು ಹೇಳಿದರೆ ತಪ್ಪಾಗಲಾರದು ಗೊತ್ತೇ.

ಇನ್ನು ಕೊನೆಯದಾಗಿ ಫಿಕ್ಸೆಡ್ ಡಿಪಾಸಿಟ್ (FD)ಅಥವಾ ಮ್ಯೂಚುವಲ್ ಫಂಡ್‌ಗಳು(Mutual fund) , ಹೂಡಿಕೆದಾರರು (depositers) ಯಾವುದನ್ನು ಆಯ್ಕೆ ಮಾಡಿದರೆ ಬೆಸ್ಟ್ ಆಗಿರುತ್ತದೆ ಎನ್ನುವುದಾದರೆ, ಎರಡೂ ಹೂಡಿಕೆಗಳು ಕೂಡಾ ವಿಶಿಷ್ಟ ಅನುಕೂಲಗಳು ಮತ್ತು ಅನಾನುಕೂಲಗಳನ್ನು ನೀಡುತ್ತವೆ. ಹೂಡಿಕೆದಾರರು ತಮ್ಮ ಹಣಕಾಸಿನ ಗುರಿಗಳು, ಅಪಾಯ ಸಹಿಷ್ಣುತೆ ಮತ್ತು ಹೂಡಿಕೆಯ ದಿಗಂತವನ್ನು ಅವಲಂಬಿಸಿ ತಿಳುವಳಿಕೆಯುಳ್ಳ ಹೂಡಿಕೆ ನಿರ್ಧಾರಗಳನ್ನು ಮಾಡಬೇಕು ಎಂದು ಹೇಳಬಹುದು.
ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಮಾಹಿತಿಯನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ..

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!