ರೈಲ್ವೆ ಕಾಮಗಾರಿ ನಿಮಿತ್ಯ ಈ ಮಾರ್ಗದ ಹಲವು ರೈಲುಗಳ ಸಂಚಾರ ರದ್ದು, ಇಲ್ಲಿದೆ ರೈಲುಗಳ ಪಟ್ಟಿ

changes in railway timing

ರೈಲು ಪ್ರಯಾಣಿಕರ ಗಮನಕ್ಕೆ! ಕೆಲವು ರೈಲುಗಳ ಸಂಚಾರದಲ್ಲಿ ಬದಲಾವಣೆ(Change in movement of some trains)

ನೈರುತ್ಯದಿಂದ ಪ್ರಮುಖ ಪ್ರಕಟಣೆ ಬಂದಿದೆ. ಹೊಸ ಪೇಟೆ ನಿಲ್ದಾಣದಲ್ಲಿ ನಡೆಯುತ್ತಿರುವ ಕಾಮಗಾರಿ ಮತ್ತು ಇತರ ಕಾರಣಗಳಿಂದ ಕೆಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ ಮತ್ತು ಕೆಲವು ರೈಲುಗಳ ಮಾರ್ಗವನ್ನು ಬದಲಾಯಿಸಲಾಗಿದೆ.

ಯಾವ ರೈಲುಗಳ ಸಂಚಾರ ರದ್ದುಗೊಂಡಿದೆ ಮತ್ತು ಯಾವ ರೈಲುಗಳ ಮಾರ್ಗ ಬದಲಾವಣೆಯಾಗಿದೆ ಎಂಬುದರ ಕುರಿತು ಖಚಿತವಾದ ಮಾಹಿತಿಗಾಗಿ ಪ್ರಸ್ತುತ ವರದಿಯನ್ನು ತಪ್ಪದೇ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ ಕಾಮಗಾರಿ:  ರೈಲುಗಳ ಸಂಚಾರದಲ್ಲಿ ಬದಲಾವಣೆ!

ಹೊಸಪೇಟೆ ನಗರ ರೈಲ್ವೆ ನಿಲ್ದಾಣದಲ್ಲಿ ಸುರಕ್ಷತಾ ಕಾಮಗಾರಿಗಳಿಂದಾಗಿ ಕೆಲ ರೈಲುಗಳ ಸಂಚಾರದಲ್ಲಿ ಬದಲಾವಣೆ ಉಂಟಾಗಿದೆ. ಕೊಪ್ಪಳ ಮತ್ತು ಹೊಸಪೇಟೆ ನಿಲ್ದಾಣಗಳ ನಡುವೆ ರೈಲುಗಳ ಸಂಚಾರ ಭಾಗಶಃ ರದ್ದುಗೊಂಡಿದೆ ಮತ್ತು ಕೆಲವು ರೈಲುಗಳ ಮಾರ್ಗ ಬದಲಾಯಿಸಲಾಗಿದೆ.

ಈ ಬದಲಾವಣೆಗಳು ಪ್ರಯಾಣಿಕರಿಗೆ ತೊಂದರೆ ಉಂಟುಮಾಡಬಹುದು ಎಂದು ನೈರುತ್ಯ ರೈಲ್ವೆ(South Western Railway) ತಿಳಿಸಿದೆ. ಪ್ರಯಾಣಿಕರು ತಮ್ಮ ರೈಲಿನ ಸ್ಥಿತಿ ಮತ್ತು ಸಮಯದ ಬಗ್ಗೆ ನವೀಕೃತ ಮಾಹಿತಿಗಾಗಿ ರೈಲ್ವೆ ಅಧಿಕಾರಿಗಳನ್ನು ಸಂಪರ್ಕಿಸುವಂತೆ  ಅಥವಾ ಅಧಿಕೃತ ವೆಬ್ಸೈಟ್(website) ಭೇಟಿ ನೀಡುವಂತೆ ಅವರು ಒತ್ತಾಯಿಸಿದ್ದಾರೆ. ರೈಲ್ವೇ ಸಂಚಾರದಲ್ಲಿ ಬದಲಾದ ರೈಲು ವ್ಯವಸ್ತೆಗಳ ಮಾಹಿತಿ ಇಲ್ಲಿದೆ.

ಬದಲಾದ ರೈಲುಗಳ ಮಾಹಿತಿ :

ಮೇ 14 ರಂದು ರೈಲು ಸಂಖ್ಯೆ 11305 ಸೋಲಾಪುರ-ಹೊಸಪೇಟೆ ಡೈಲಿ ಎಕ್ಸ್‌ಪ್ರೆಸ್‌(Solapur-Hospet Daily Express) ರೈಲು ಕೊಪ್ಪಳ-ಹೊಸಪೇಟೆ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಹೊಸಪೇಟೆಯ ಬದಲು ಕೊಪ್ಪಳದಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸುತ್ತದೆ.

2ಮೇ 15 ರಂದು ರೈಲು ಸಂಖ್ಯೆ 11306 ಹೊಸಪೇಟೆ-ಸೋಲಾಪುರ ಡೈಲಿ ಎಕ್ಸ್‌ಪ್ರೆಸ್(Hospet-Solapur Daily Express) ರೈಲು ಈಗ ಹೊಸಪೇಟೆ ಬದಲು ಕೊಪ್ಪಳ ನಿಲ್ದಾಣದಿಂದ ಪ್ರಾರಂಭವಾಗಲಿದೆ ಎಂದು ಪ್ರಯಾಣಿಕರಿಗೆ ತಿಳಿಸಲಾಗಿದೆ. ಈ ರೈಲು ಹೊಸಪೇಟೆ-ಕೊಪ್ಪಳ ನಿಲ್ದಾಣಗಳ ನಡುವಿನ ಪ್ರಯಾಣ ರದ್ದುಪಡಿಸಲಾಗಿದೆ.

ಡೆಮು ಸ್ಪೆಷಲ್ ರೈಲು(Demu Special Train) ಸಂಚಾರದಲ್ಲಿ ಬದಲಾವಣೆ:

ಗುಂತಕಲ್ ಯಾರ್ಡ್‌ನಲ್ಲಿ ಸುರಕ್ಷತಾ ಕಾಮಗಾರಿ ನಡೆಯುತ್ತಿರುವುದರಿಂದ, ಮೇ 9 ರಿಂದ 23, 2024 ರವರೆಗೆ ಹಿಂದೂಪುರ ಮತ್ತು ಗುಂತಕಲ್ ನಡುವೆ ಸಂಚರಿಸುವ ಡೆಮು ಸ್ಪೆಷಲ್ ರೈಲು ( ರೈಲು ಸಂಖ್ಯೆ  07694) ಈ ಕೆಳಗಿನ ಮಾರ್ಗದ ಮೂಲಕ ಸಂಚರಿಸಲಿದೆ:

ಹಿಂದೂಪುರ
ಖಾದರ್ ಪೇಟೆ
ಇಮಾಮ್ಪುರಂ
ವೆಂಕಟಂಪಲ್ಲಿ
ಗುಲಪಾಳ್ಯಂ
ಹನುಮಾನ್ ಸರ್ಕಲ್
ಗುಂತಕಲ್

ದಕ್ಷಿಣ ಮಧ್ಯ ರೈಲ್ವೆ ಪ್ರಕಟಿಸಿರುವ ಪ್ರಕಾರ, ಪಾಮಿಡಿ ಮತ್ತು ತಿಮ್ಮನಚೆರ್ಲಾ ನಿಲ್ದಾಣಗಳ ನಡುವೆ ಚಲಿಸುವ ರೈಲುಗಳು ಈ ಮುಂದೆ ಯಾವುದೇ ನಿಲುಗಡೆಗಳನ್ನು ಮಾಡುವುದಿಲ್ಲ.
ಖಾದರ್ ಪೇಟೆ, ಇಮಾಮ್ಪುರಂ, ವೆಂಕಟಂಪಲ್ಲಿ, ಗುಲಪಾಳ್ಯಂ ಮತ್ತು ಹನುಮಾನ್ ಸರ್ಕಲ್ ಸೇರಿದಂತೆ ಕೆಲವು ನಿಲ್ದಾಣಗಳಲ್ಲಿ ತಾತ್ಕಾಲಿಕ ನಿಲುಗಡೆಗಳನ್ನು ಒದಗಿಸಲಾಗಿದೆ. ಈ ಮಾರ್ಗ ಬದಲಾವಣೆಯಿಂದಾಗಿ ರೈಲು ಸ್ವಲ್ಪ ವಿಳಂಬವಾಗುವ ಸಾಧ್ಯತೆಯಿದೆ.

ದಕ್ಷಿಣ ಮಧ್ಯ ರೈಲ್ವೆ(South Central Railway) : ಮುಸ್ತಾಬಾದ-ಗನ್ನವರಂ ನಡುವಿನ ಹಳಿ ನಿರ್ವಹಣಾ ಕಾಮಗಾರಿಯಿಂದ ರೈಲು ಮಾರ್ಗ ಬದಲಾವಣೆ

ವಿಜಯವಾಡ ವಿಭಾಗದ ಮುಸ್ತಾಬಾದ-ಗನ್ನವರಂ ನಿಲ್ದಾಣಗಳ ನಡುವೆ ಹಳಿ ನಿರ್ವಹಣಾ ಕಾಮಗಾರಿ ನಡೆಯುತ್ತಿರುವುದರಿಂದ ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ದಕ್ಷಿಣ ಮಧ್ಯ ರೈಲ್ವೆ ತಿಳಿಸಿದೆ.  ಯಾವ ರೈಲುಗಳ ಮಾರ್ಗ ಬದಲಾವಣೆಯಾಗಿದೆ ಮತ್ತು ಯಾವ ದಿನಾಂಕಗಳಲ್ಲಿ ಈ ಬದಲಾವಣೆ ಜಾರಿಯಲ್ಲಿರುತ್ತದೆ ಎಂಬುದರ ಕುರಿತು ಮಾಹಿತಿ ಕೆಳಗಿನಂತಿದೆ.

ಬೆಂಗಳೂರು-ಗುವಾಹಟಿ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು(Bangalore-Guwahati Weekly Special Express) (ರೈಲು ಸಂಖ್ಯೆ 06521 SMVT) ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಮೇ 14, 21 ಮತ್ತು 28 ರಂದು ಮೂರು ದಿನಾಂಕಗಳಲ್ಲಿ ಕಾರ್ಯನಿರ್ವಹಿಸಲಿದೆ . ವಿಜಯವಾಡ, ಗುಡಿವಾಡ, ಭೀಮಾವರಂ ಟೌನ್ ಮತ್ತು ನಿಡದವೋಲು ನಿಲ್ದಾಣಗಳ ಮೂಲಕ ರೈಲು ಸಂಚರಿಸಲಿದೆ.

ಗುವಾಹಟಿ-ಎಸ್ಎಂವಿಟಿ ಬೆಂಗಳೂರು ಟ್ರೈ ವೀಕ್ಲಿ ಎಕ್ಸ್ ಪ್ರೆಸ್ ರೈಲು(Guwahati-SMVT Bangalore Tri Weekly Express) (ರೈಲು ಸಂಖ್ಯೆ 12509) ಗುವಾಹಟಿಯಿಂದ ಮೇ 17 ಮತ್ತು 24 ರಂದು  ಸಂಚರಿಸಲಿದೆ. ಈ ರೈಲು ವಿಜಯವಾಡ, ಗುಡಿವಾಡ, ಭೀಮಾವರಂ ಟೌನ್ ಮತ್ತು ನಿಡದವೊಲು ನಿಲ್ದಾಣಗಳ ಮಾರ್ಗದಿಂದ ಸಂಚರಿಸಲಿದೆ.

ಈ ಮಾಹಿತಿಗಳನ್ನು ಓದಿ


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!