BPL Ration card – ಹೊಸ ಬಿಪಿಎಲ್ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು 5 ಹೊಸ ನಿಯಮಗಳು ಕಡ್ಡಾಯ, ಇಲ್ಲಿದೆ ಕಂಪ್ಲೀಟ್ ಮಾಹಿತಿ

WhatsApp Image 2023 08 18 at 3.50.39 PM

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಹೊಸ ಬಿಪಿಎಲ್ ಪಡಿತರ ಚೀಟಿ(BPL Ration card)ಯನ್ನು ನೀಡಲು ಕ್ರಮಗಳನ್ನು ಕೈಗೊಳ್ಳುತ್ತಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಹೊಸ ಪಡಿತರ ಚೀಟಿಯನ್ನು ಪಡೆಯಲು ನಿರೀಕ್ಷಿಸುತ್ತಿರುವವರಿಗೆ ಇದು ಒಂದು ಸಿಹಿ ಸುದ್ದಿ ಎಂದು ಹೇಳಬಹುದು. ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಅವರು ಹೊಸ ಬಿಪಿಎಲ್ ಪಡಿತರ ಚೀಟಿಯನ್ನು ನೀಡಲು ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಈ ಹಿಂದೆ ತಿಳಿಸಿದ್ದರು. ಅಷ್ಟೇ ಅಲ್ಲದೆ ಹೆಸರು ಸೇರ್ಪಡೆಗೆ ಕೂಡ ಅವಕಾಶವನ್ನು ಮಾಡಿಕೊಡಬೇಕು ಎಂದು ವಿಧಾನಸಭೆಯಲ್ಲಿ ತಮ್ಮ ಮಾತುಗಳನ್ನು ಮಂಡಿಸಿದ್ದರು ಅದೇ ಪ್ರಕಾರವಾಗಿ ಇಂದಿನಿಂದ 20ನೇ ತಾರೀಕಿನವರೆಗೂ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿಗೆ ಅವಕಾಶವನ್ನು ಮಾಡಿಕೊಡಲಾಗಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ಈ ಲೇಖನವನ್ನು ಪೂರ್ಣವಾಗಿ ಓದಿ. ಇದೇ ರೀತಿಯ  ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

whatss

 

ಇತ್ತೀಚಿನ ದಿನಗಳಲ್ಲಿ ಎಲ್ಲಾ ಯೋಜನೆಗಳನ್ನು ಪಡೆಯಬೇಕಾದರೆ ಬಿಪಿಎಲ್ ಪಡಿತರ ಚೀಟಿಯ ಅವಶ್ಯಕತೆ ಇದೆ ಅಷ್ಟೇ ಅಲ್ಲದೆ ಆರೋಗ್ಯದ ವಿಷಯಕ್ಕೆ ಬಂದರೆ ಬಿಪಿಎಲ್ ಕಾರ್ಡ್ ಬಳಸಿಕೊಂಡು ತುಂಬಾ ಪ್ರಯೋಜನಗಳನ್ನು ಪಡೆಯಬಹುದಾಗಿದೆ . ಕರ್ನಾಟಕದಲ್ಲಿ ಇದುವರೆಗೂ 1.28 ಕೋಟಿ ಜನರು ಬಿಪಿಎಲ್ ಕಾರ್ಡನ್ನು ಹೊಂದಿದ್ದಾರೆ. ಇನ್ನು ಅನೇಕ ಜನರು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಬಿಪಿಎಲ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದಾರೆ.

ಈಗಾಗಲೇ ಸರ್ಕಾರದ ಆದೇಶದ ಅನ್ವಯ 35 ಲಕ್ಷಕ್ಕೂ ಹೆಚ್ಚು ರೇಷನ್ ಕಾರ್ಡ್ ಗಳು ಬಂದ್ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಸುಳ್ಳು ದಾಖಲೆಗಳ ಮಾಹಿತಿಯನ್ನು ಕೊಟ್ಟು ರೇಷನ್ ಕಾರ್ಡ್ ಮಾಡಿಸಿಕೊಂಡ ಜನರು ತುಂಬಾ ಇದ್ದಾರೆ ಹಾಗಾಗಿ ಈಗಾಗಲೇ ಸರ್ಕಾರದ ಕಡೆಯಿಂದ ಸರ್ವೆ ಮಾಡುವ ಮೂಲಕ ಅಧಿಕೃತ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಸರ್ಕಾರದ ಹೊಸ ನಿಯಮಗಳ ಪ್ರಕಾರ ಕೆಳಗಿನ ಐದು ಹೊಸ ರೂಲ್ಸ್ ಗಳನ್ನ ಕಡ್ಡಾಯವಾಗಿ ಪಾಲಿಸುವವರಿಗೆ ಹೊಸ ಬಿಪಿಎಲ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

5 ಹೊಸ ನಿಯಮಗಳು ಇಲ್ಲಿವೆ

  1. BPL ಕಾರ್ಡ್ ಪಡೆಯುವ ರೈತರ ಹತ್ತಿರ 3 ಹೆಕ್ಟರ್ ಗಿಂತ ಹೆಚ್ಚು ಭೂಮಿ ಇರಬಾರದು.
  2. ನಗರ ಪ್ರದೇಶಗಳಲ್ಲಿ ವಾಸ ಮಾಡುವವರು 1000 ಅಡಿಗಿಂತ ದೊಡ್ಡ ಮನೆ ಹೊಂದಿದ್ದರೆ ರೇಷನ್ ಕಾರ್ಡ್ ಸಿಗುವುದಿಲ್ಲ.
  3. ಆದಾಯ ತೆರಿಗೆ ಪಾವತಿ ಮಾಡುತ್ತಿರುವವರಿಗೆ ಬಿಪಿಎಲ್ ರೇಷನ್ ಕಾರ್ಡ್ ಸಿಗುವುದಿಲ್ಲ & 1.2 ಲಕ್ಷ ಅಥವಾ ಅದಕ್ಕಿಂತ ಕಡಿಮೆ ವಾರ್ಷಿಕ ಆದಾಯ ಇರುವವರಿಗೆ ಮಾತ್ರ ಬಿಪಿಎಲ್ ಕಾರ್ಡ್ ನೀಡಲಾಗುತ್ತದೆ.
  4. ಸರ್ಕಾರಿ ಕೆಲಸ ಮಾಡುತ್ತಿರುವವರಿಗೆ ರೇಷನ್ ಕಾರ್ಡ್ ಸೌಲಭ್ಯ ಸಿಗುವುದಿಲ್ಲ.
  5. ಸ್ವಂತ ವೈಟ್ ಬೋರ್ಡ್  ಕಾರ್ ಇರುವವರಿಗೆ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಹೊಸ ಬಿಪಿಎಲ್ ಪಡಿತರ ಚೀಟಿಯನ್ನು ನೀಡುವುದರಿಂದ ಹಾಗೂ ಹೆಸರು ಸೇರ್ಪಡೆಗೆ ಅವಕಾಶವನ್ನು ಕಲ್ಪಿಸಿ ಕೊಡುವುದರಿಂದ ಅನೇಕ ಜನರಿಗೆ ಉಪಯೋಗವಾಗಲಿದೆ. ಮುಂದಿನ ದಿನಗಳಲ್ಲಿ ಹೊಸ ಬಿಪಿಎಲ್ ಪಡಿತರ ಚೀಟಿಯನ್ನು ನೀಡುವ ಅವಕಾಶವನ್ನು ಸರ್ಕಾರವು ಕಲ್ಪಿಸಿಕೊಡಬೇಕೆನ್ನುವುದು ನಮ್ಮೆಲ್ಲರ ಆಶಯವಾಗಿದೆ.

ಇಂದಿನಿಂದ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ.

ಇಂದಿನಿಂದ 21ನೇ ತಾರೀಖಿನವರೆಗೂ ಮಧ್ಯಾಹ್ನ 12 ಗಂಟೆಯಿಂದ ಸಂಜೆ 4:00 ವರೆಗೂ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶವನ್ನು ಮಾಡಿಕೊಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಪಿಎಲ್‌ ಪಡಿತರ ಚೀಟಿ ಅರ್ಜಿ ಸಲ್ಲಿಸಲು ದಾಖಲಾತಿಗಳು:

  1. ಆಧಾರ್ ಕಾರ್ಡ್
  2. ಜಾತಿ ಮತ್ತು ಆದಾಯ
  3. ರೇಷನ್ ಕಾರ್ಡ್ ಸಂಖ್ಯೆ
  4. ಜನನ ಪ್ರಮಾಣ ಪತ್ರ ( 6 ವರ್ಷದ ಒಳಗೆ ಮಕ್ಕಳು ಇದ್ದರೆ ಮಾತ್ರ )

ವಿಡಿಯೋ ಕೃಪೆ : R K Kembavi ಯೌಟ್ಯೂಬ್ ಚಾನೆಲ್

Online ಅರ್ಜಿ ಸಲ್ಲಿಸುವ ವಿಧಾನ ( BPL ಕಾರ್ಡ್ ಅರ್ಜಿ ಸಲ್ಲಿಸಲು Secugen ಬಯೋಮೆಟ್ರಿಕ್ ನ ಅವಶ್ಯಕತೆ ಇದೆ)

ಹಂತ 1: ಇಲಾಖೆಯ ಅಧಿಕೃತ https://ahara.kar.nic.in/ ವೆಬ್‌ಸೈಟ್‌ ಭೇಟಿ ನೀಡಿ ಹೋಗಿ, ಇ-ಸೇವೆಗಳು’ (E Service) ಟ್ಯಾಬ್‌ ಮೇಲೆ ಕ್ಲಿಕ್ ಮಾಡಿ.

card010

 

01Card

app download

ಹಂತ 2: ಇ-ರೇಷನ್ ಕಾರ್ಡ್‌ನಿಂದ ಹೊಸ ಪಡಿತರ ಚೀಟಿಯನ್ನು (New Ration card) ಆಯ್ಕೆ ಮಾಡಿ, “ಹೊಸ ಪಡಿತರ ಚೀಟಿ ವಿನಂತಿ” (New ration card request) ಮೇಲೆ ಕ್ಲಿಕ್ ಮಾಡಿ, ನಂತರ ಹೊಸ ಪಡಿತರ ಚೀಟಿ ವಿನಂತಿಯ (New ration card request) ಮೇಲೆ ಕ್ಲಿಕ್ ಮಾಡಿ.

step1

ಹಂತ 3: ನಂತರ ಇಲ್ಲಿ ಎಚ್ಚರಿಕೆ ಇರಲಿ ಆದ್ಯತಾ ಕುಟುಂಬ ಹಾಗು ಆದ್ಯತೇತರ ಕುಟುಂಬ ಎಂಬ ಎರಡು ಆಯ್ಕೆಗಳಿದ್ದು,

(PHH) ಆದ್ಯತಾ ಕುಟುಂಬ : BPL

(NPHH) ಆದ್ಯತೇತರ ಕುಟುಂಬ: APL

ಇವುಗಳಲ್ಲಿ ಆದ್ಯತ ಕುಟುಂಬ ಆಯ್ಕೆ ಮಾಡಿದರೆ ಬಯೊಮೆಟ್ರಿಕ್ ಕಡ್ಡಾಯವಾಗಿರುತ್ತದೆ. ನಿಮ್ಮ ಬಳಿ ಬಯೊಮೆಟ್ರಿಕ್ ಡಿವೈಸ್ ಇಲ್ಲದಿದ್ದರೆ ಹತ್ತಿರದ CSC ಕೇಂದ್ರಕ್ಕೆ ತೆರಳಿ ಮಾಡಿಸಿಕೊಳ್ಳಿ. ಜತೆಗೆ ಇನ್ನಿತರ ಮಾಹಿತಿಯನ್ನು ಒದಗಿಸಿ. ಒಂದು ವೇಳೆ ನಿಮ್ಮ ಆಯ್ಕೆ ಆದ್ಯತೇತರ ಕುಟುಂಬ APL ಆದಲ್ಲಿ ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ.

step2

ಹಂತ 4:  ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ಟೈಪ್ ಮಾಡಿ, ಹೋಗಿ (GO) ಬಟನ್ ಅನ್ನು ಕ್ಲಿಕ್ ಮಾಡಿ. ನಂತರ OTP ಅಥವಾ ಫಿಂಗರ್‌ಪ್ರಿಂಟ್ (Fingerprint) ಪರಿಶೀಲನೆಯನ್ನು ಬಳಸಿಕೊಂಡು ಯಶಸ್ವಿ ದೃಢೀಕರಣ ಮಾಡಬೇಕು.

step3

ಹಂತ 5: ಅರ್ಜಿದಾರರು OTP ಅನ್ನು ಆಯ್ಕೆ ಮಾಡಿದರೆ, ನೋಂದಾಯಿತ ಮೊಬೈಲ್ ಫೋನ್‌ಗೆ SMS ಕಳುಹಿಸಲಾಗುತ್ತದೆ. OTP ಅನ್ನು ನಮೂದಿಸಿದ ನಂತರ ‘ಹೋಗಿ'(GO) ಕ್ಲಿಕ್ ಮಾಡಬೇಕು.

Untitled 1 scaled

step4

ಹಂತ 6:ಯಶಸ್ವಿ ಪರಿಶೀಲನೆಯ ನಂತರ ಆಧಾರ್ ಡೇಟಾವನ್ನು (Adhar details) ತೋರಿಸಲಾಗುತ್ತದೆ. ನಂತರ “ಸೇರಿಸು” (Add) ಬಟನ್ ಕ್ಲಿಕ್ ಮಾಡುವ ಮೂಲಕ ಅಪ್ಲಿಕೇಶನ್ ಸಂಖ್ಯೆ ಕ್ರಿಯೇಟ್ ಆಗುತ್ತದೆ.

step4 1

ಹಂತ 7: ಇಲ್ಲಿ ಜಿಲ್ಲೆ, ತಾಲೂಕು, ಸ್ವೀಕೃತಿ ಸಂಖ್ಯೆಯನ್ನು ಆಯ್ಕೆ ಮಾಡಿ ಮತ್ತು ಕರ್ನಾಟಕ ಬಿಪಿಎಲ್ ಪಡಿತರ ಚೀಟಿ ಹೊಸ ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಲು ಮುಂದುವರಿಯಲು ” ಗೋ ” ಆಯ್ಕೆಯನ್ನು ಕ್ಲಿಕ್ ಮಾಡಿ.

step6

ಹಂತ 8: ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು ಪೂರ್ಣಗೊಳಿಸಿದ ನಂತರ ನಿಮ್ಮ ಅರ್ಜಿಯನ್ನು ಕಳುಹಿಸಲು “ಸಲ್ಲಿಸು”(Submit) ಮೇಲೆ ಕ್ಲಿಕ್ ಮಾಡಿ ಅರ್ಜಿ ಪೂರ್ಣಗೊಳಿಸಬೇಕು.

step 7

ಮಾದರಿಯ ಪ್ರತಿಯಲ್ಲಿನ ವಿವರಗಳು ಸರಿಯಾಗಿವೆ ಎಂದು ಬಳಕೆದಾರರು ಭಾವಿಸಿದರೆ, ನಂತರ RC ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ ಪಡಿತರ ಕಾರ್ಡ್ ಅನ್ನು ಪ್ರಿಂಟ್ ತೆಗೆದುಕೊಳ್ಳಬಹುದು.

STEP 8

ಅರ್ಜಿ ಸಲ್ಲಿಸುವ ವಿಧಾನ ಹಾಗೂ ತಿದ್ದುಪಡಿ ಮಾಡಿಸುವುದು ಎಲ್ಲಿ?:

ನೀವು ಮೇಲೆ ತಿಳಿಸಿರುವ ಎಲ್ಲಾ ದಾಖಲಾತಿಗಳೊಂದಿಗೆ ನಿಮ್ಮ ಹತ್ತಿರದ CSC ಸೆಂಟರ್ ಅಥವಾ ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರದಲ್ಲಿ ಅಥವಾ ಸೈಬರ್ ಸೆಂಟರ್ ಗಳಿಗೆ ಹೋಗಬಹುದು. ನಾವೇ ಸ್ವತಃ ಮೊಬೈಲ್ ಫೋನ್ ಮೂಲಕ ಅರ್ಜಿ ಸಲ್ಲಿಸಲು Secugen ಬಯೋಮೆಟ್ರಿಕ್ ನ ಅವಶ್ಯಕತೆ ಇದೆ. ಹಾಗಾಗಿ ಹತ್ತಿರದ ಸೈಬರ್ ಸೆಂಟರ್ ಸಿಎಸ್ಸಿ ಕೇಂದ್ರ ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ದಯವಿಟ್ಟು ಭೇಟಿ ನೀಡಿ ತಮ್ಮ ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.

ಕರ್ನಾಟಕ ಪಡಿತರ ಚೀಟಿಗಾಗಿ ಸಹಾಯವಾಣಿ ಸಂಖ್ಯೆ (ಟೋಲ್ ಫ್ರೀ).

ಜನರು ಈಗ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆ, ವಿಕಾಸ ಸೌಧ, ಬೆಂಗಳೂರು – 560001 ಅನ್ನು ಸಂಪರ್ಕಿಸಬಹುದು. ಸಂಪರ್ಕ ವಿವರಗಳನ್ನು ಕೆಳಗೆ ನೀಡಲಾಗಿದೆ: –
ಸಹಾಯವಾಣಿ ಸಂಖ್ಯೆ – 1967
ಟೋಲ್ ಫ್ರೀ ಸಂಪರ್ಕ ಸಂಖ್ಯೆ. – 1800-425-9339
ಅಧಿಕೃತ ವೆಬ್‌ಸೈಟ್ – ahara.kar.nic.in

ಇಂತಹ ಮುಖ್ಯವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೊಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!