Biggboss Kannada – ಬಿಗ್ ಬಾಸ್ ಹೊಸ ಲವ್ ಸ್ಟೋರಿ, ಇದು ಸ್ನೇಹನಾ ಪ್ರೀತಿನಾ..?

bigboss love story sangeeta and karthik

ದೊಡ್ಡ ಮನೆಯಲ್ಲಿ(Bigg Boss House) ಪ್ರೀತಿ-ಪ್ರೇಮ ಎನ್ನುವ ಮಾತು ಪ್ರತಿಯೊಂದು ಸೀಸನ್(season) ಅಲ್ಲೂ ಇದ್ದೇ ಇರುತ್ತದೆ. ಪ್ರತಿ ಬಾರಿ ಕೂಡ ಬಿಗ್ ಬಾಸ್ ಸೀಸನ್ ಶುರುವಾದಾಗ ಈ ಬಾರಿ ಯಾರಿಗೆ-ಯಾರ ಮೇಲೆ ಲವ್​ ಆಗುತ್ತೆ ಎಂದು ಜನರು ಕೂಡ ಕಾಯ್ತಿರುತ್ತಾರೆ. ಎಲ್ಲಾ ಭಾಷೆಯ ಬಿಗ್ ಬಾಸ್ ನಲ್ಲೂ ಒಂದು ಪ್ರೀತಿ ಇದ್ದೇ ಇರುತ್ತದೆ. ಕೆಲವರು ಈ ಬಿಗ್ ಬಾಸ್ ಶೋ ಕೂಡ ಸ್ಕ್ರಿಪ್ಟ್ಡ್ ಎನ್ನುತ್ತಾರೆ. ಆದರೂ ಬಿಗ್ ಬಾಸ್ ಶೋ ನಲ್ಲಿ ಯಾರಿಗೆ ಯಾರ ಮೇಲೆ ಪ್ರೀತಿ ಆಗುತ್ತದೆ ಎನ್ನುವುದನ್ನು ನೋಡಲು ಜನ ಕಾತುರದಿಂದ ಕಾಯುತ್ತಿರುತ್ತಾರೆ. ಬಿಗ್ ಬಾಸ್ ಕನ್ನಡ ಸೀಸನ್ 10(Bigg Boss Session 10) ಶುರುವಾಗಿ 1 ವಾರ ಕಳೆದಿದ್ದು, ದೊಡ್ಮನೆಯಲ್ಲಿ 2ನೇ ವಾರದಲ್ಲೇ ಪ್ರೀತಿ-ಪ್ರೇಮದ ಸುದ್ದಿ ಸುಳಿವು ಸಿಕ್ಕಿದೆ. ಯಾರ ಯಾರ ನಡುವೆ ಪ್ರೀತಿ ಆಗಿದೆ ತಿಳಿದುಕೊಳ್ಳಬೇಕೇ ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಬಿಗ್ ಬಾಸ್ ಮನೆಯಲ್ಲಿ ಶುರುವಾಗಿದೆಯಾ ಲವ್ ಸ್ಟೋರಿ?:

ಬಿಗ್​ ಬಾಸ್​ ಶುರುವಿನಿಂದಲೂ ಕಾರ್ತಿಕ್ ಹಾಗೂ ಸಂಗೀತಾ ಕ್ಲೋಸ್ ಆಗಿದ್ದರು. ಕಾರ್ತಿಕ್ ಹಾಗೂ ಸಂಗೀತಾ ಒಟ್ಟಿಗೆ ಕಾಲ ಕಳೆಯುತ್ತಿರುತ್ತಾರೆ. ಹಾಗೆ ಅವರಿಬ್ಬರೂ ಕೂಡ ನಮ್ಮ ನಡುವೆ ಇರುವುದು ಸ್ನೇಹ ಅಷ್ಟೇ ಎಂದು ಸ್ಪಷ್ಟತೆ ಕೂಡ ಕೊಟ್ಟಿದ್ದರು.
ಇದೀಗ ಎಣ್ಣೆ ಮಸಾಜ್​ ಮೂಲಕ ಸುದ್ದಿ ಮತ್ತಷ್ಟು ಬಲಗೊಂಡಿದೆ. ತುಂಬಾ ಕ್ಲೋಸ್​ ಆಗಿರುವ ಕಾರ್ತಿಕ್​-ಸಂಗೀತಾ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಗುಸುಗುಸು ಬಿಗ್​ಬಾಸ್​ ಮನೆಯಲ್ಲಿ ಶುರುವಾಗಿದೆ.

whatss

ಎರಡನೇ ವಾರದ ಮೊದಲ ದಿನವೇ ಕೆಲವರಿಗೆ ಟಾಸ್ಕ್‌ ಸಿಕ್ಕಿತ್ತು. ಎಲಿಮಿನೇಷನ್‌ ಆದವರನ್ನು ಉಳಿಸಿಕೊಳ್ಳುವ ಚಾನ್ಸ್‌ ನೀಡಲಾಗಿತ್ತು. ಆ ಪೈಕಿ ಸಂಗೀತಾ ಅವರನ್ನು ಎಲಿಮಿನೇಷನ್​ನಿಂದ ಬಚಾವ್​ ಮಾಡಲು ಕಾರ್ತಿಕ್‌ ಬಯಸಿದ್ದರು. ಆದರೆ ಆ ಟಾಸ್ಕ್‌ ನಲ್ಲಿ ವಿನಯ್ ಅವರು ಗೆದ್ದು ಮೈಕಲ್ ಅವರನ್ನು ಎಲಿಮಿನೇಷನ್ ನಿಂದ ಪಾರು ಮಾಡುತ್ತಾರೆ. ಹಾಗೆ ಇದರಲ್ಲಿ ಕಾರ್ತಿಕ್ ಸೋಲುತ್ತಾರೆ. ಆದರೆ ಕಾರ್ತಿಕ್ ಟಾಸ್ಕ್ ಅಲ್ಲಿ ಸೋತರೂ ಕೂಡ ಸಂಗೀತಾ ಅವರ ಪ್ರೀತಿಯನ್ನು ಸಂಪಾದನೆ ಮಾಡಿಕೊಂಡಿದ್ದಾರೆ.

ಕಾರ್ತಿಕ್​ ಬೆನ್ನಿಗೆ ಎಣ್ಣೆ ಹಚ್ಚಿದ ಸಂಗೀತಾ:

ಎಲಿಮಿನೇಷನ್‌ ಆದವರು ಪೈಕಿ ಒಬ್ಬರನ್ನು ಸೇವ್ ಮಾಡಲು ಬಿಗ್ ಬಾಸ್​ ನೀಡಿದ ಟಾಸ್ಕ್​ ವೇಳೆ ಕಾರ್ತಿಕ್​ ಬೆನ್ನಿಗೆ ಗಾಯವಾಗಿದೆ. ಇದನ್ನು ಸಂಗೀತಾ ಅವರಿಗೆ ನೋಡಲು ಆಗಲಿಲ್ಲ. ಗಾಯಕ್ಕೆ ಎಣ್ಣೆ ಹಚ್ಚಿ ಮಸಾಜ್ ಕೂಡ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಂಗೀತ ಹಾಗೂ ಕಾರ್ತಿಕ್ ನಡುವೆ ಪ್ರೀತಿ ಹುಟ್ಟಿರಬಹುದು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಇದಾದ ಬಳಿಕ, ಕಾರ್ತೀಕ್​ ಅವರು ಸಂಗೀತಾರನ್ನು ತಬ್ಬಿಕೊಂಡು ಸಮಾಧಾನ ಮಾಡುತ್ತಿರುವ ದೃಶ್ಯ ನೋಡಿಗರನ್ನು ಗೊಂದಲಕ್ಕೆ ಸಿಲುಕುವಂತೆ ಮಾಡಿದೆ.

ಬಿಗ್ ಬಾಸ್’ ಮನೆಯಲ್ಲಿ ಕೇವಲ 16 ಮಂದಿ ಮಾತ್ರ ಉಳಿದಿದ್ದಾರೆ. ಮೊದಲ ವಾರದ ನಾಮಿನೇಷನ್​ನಿಂದ ಸ್ನೇಕ್ ಶ್ಯಾಮ್ ಅವರು ಔಟ್ ಆಗಿ ಮನೆಗೆ ತೆರಳಿದ್ದರು. ಮುಂದಿನ ದಿನಗಳಲ್ಲಿ ಮನೆಯಲ್ಲಿ ಸ್ಪರ್ಧೆ ಕೂಡ ಹೆಚ್ಚಲಿದೆ. ಈ ಹೊತ್ತಿನಲ್ಲೇ ಸಂಗೀತಾ ಹಾಗೂ ಕಾರ್ತಿಕ್ ಮಧ್ಯೆ ಬಂಧ ಬೆಳೆಯುತ್ತಿದೆ. ಇದು ಸ್ನೇಹನಾ ಪ್ರೀತಿನಾ ಎಂದು ಕಾದು ನೋಡಬೇಕು.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಇದನ್ನೂ ಓದಿ – ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆಗೆ ಅರ್ಜಿ ಆಹ್ವಾನ, ಇಂದೇ ಕೊನೆಯ ದಿನ ತಪ್ಪದೇ ಅರ್ಜಿ ಸಲ್ಲಿಸಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

One thought on “Biggboss Kannada – ಬಿಗ್ ಬಾಸ್ ಹೊಸ ಲವ್ ಸ್ಟೋರಿ, ಇದು ಸ್ನೇಹನಾ ಪ್ರೀತಿನಾ..?

Leave a Reply

Your email address will not be published. Required fields are marked *

error: Content is protected !!