AnnaBhagya- ಬಿಪಿಎಲ್ ಕಾರ್ಡ್ ಇದ್ರೂ ಅನ್ನಭಾಗ್ಯ ಹಣ ಬಂದಿಲ್ವಾ?? ಇಲ್ಲಿದೆ ಕಾರಣ..! ಈ ಕೆಲಸ ಮಾಡಿ 3 ತಿಂಗಳ ಹಣ ಪಡೆಯಿರಿ

WhatsApp Image 2023 09 28 at 5.49.08 AM

ಕರ್ನಾಟಕ ಸರ್ಕಾರ (karnataka governament )ನೀಡುವ ಮಾಹಿತಿ ಪ್ರಕಾರ ಎರಡು ತಿಂಗಳ ಅನ್ನಭಾಗ್ಯ ಯೋಜನೆಯ(Annabaghya scheme ) ಹಣವು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಆಗುವ ಪ್ರಕ್ರಿಯೆ DBT ಮೂಲಕ ನಡೆಯುತ್ತಿದೆ. ಆದರೂ ಕೆಲವರ ಖಾತೆಗೆ ಹಣ ವರ್ಗಾವಣೆ ಆಗುತ್ತಿಲ್ಲ. ಇದಕ್ಕೆ ಕಾರಣ ಏನಿರಬಹುದು?, ಅಂತ ತಿಳಿದುಕೊಳ್ಳಬೇಕೇ ಹಾಗಿದಲ್ಲಿ ಲೇಖನವನ್ನು ಸಂಪೂರ್ಣವಾಗಿ ಓದಿ.

ಬಿಪಿಎಲ್ ಕಾರ್ಡ್(BPL Card) ಇದ್ದರೂ ಅನ್ನಭಾಗ್ಯ ಯೋಜನೆಯ ಹಣ ಬರುತ್ತಿಲ್ಲ :

ಕರ್ನಾಟಕ ರಾಜ್ಯದ ಅತಿ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆಯು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈ ಒಂದು ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯಲ್ಲಿ ಅನೇಕ ಜನರು10 ಕೆಜಿ ಅಕ್ಕಿ ಪಡೆಯಲಿದ್ದು ಅಕ್ಕಿಯ ಕೊರತೆಯಿಂದಾಗಿ ಐದು ಕೆಜಿ ಅಕ್ಕಿಗೆ ಬದಲಾಗಿ ಹಣ ನೀಡುವ ಭರವಸೆ ನೀಡಿದ್ದರು.

ಅನೇಕ ಜನರ ಖಾತೆಗೆ ಈಗಾಗಲೇ ಕಳೆದ ಎರಡು ತಿಂಗಳ ಹಣ ಬಂದಿದ್ದು, ಈ ತಿಂಗಳು ಹಣ ಬರುವ ನಿರೀಕ್ಷೆ ಇದೆ. ಆದರೆ ಕಳೆದ ಎರಡು ತಿಂಗಳ ಹಣ ಅನೇಕ ಫಲಾನುಭವಿಗಳ ಖಾತೆಗೆ ಬಂದಿಲ್ಲ ಆದ್ದರಿಂದ ಇದೀಗ ಒಂದು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೆ ಕಾರಣ ಮಾನ್ಯ ಮುಖ್ಯಮಂತ್ರಿಯವರು. ಪ್ರತಿ ಮನೆಯ ಬಿಪಿಎಲ್ ಬಳಕೆದಾರರಿಗೆ 10 ಕೆಜಿ ಅಕ್ಕಿ ನೀಡಿದ್ದಾರೆ. ಕಳೆದ ತಿಂಗಳುಗಳಿಂದ ಅಕ್ಕಿ ಇಲ್ಲದಿರುವ ಕಾರಣ ಹೆಚ್ಚುವರಿ ಅಕ್ಕಿಗೆ ಬದಲಾಗಿ ನೇರವಾಗಿ DBT ಮೂಲಕ ಎಲ್ಲಾ ಫಲಾನುಭವಿಗಳ ಬ್ಯಾಂಕ್ ಖಾತೆಗೆ 5 ಕೆಜಿ ಅಕ್ಕಿ ಹಣ ವರ್ಗಾವಣೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ.

chanel

ಅನ್ನಭಾಗ್ಯದ ಹಣ ಬರದಿರಲು ಕಾರಣವೇನು?:

ಅನೇಕ ಜನರ ಖಾತೆಗೆ ಅವರ ದುರದೃಷ್ಟದ ಕಾರಣದಿಂದಲೂ ಅಥವಾ ಅನೇಕ ಕಾರಣಗಳಿಂದ ಅನ್ನಭಾಗ್ಯ ಯೋಜನೆಯ ಅಕ್ಕಿಯ ಐದು ಕೆಜಿ ಹಣ ಸಂಪೂರ್ಣವಾಗಿ ಅವರ ಖಾತೆಗೆ ಹೋಗಿಲ್ಲ. BPL card ಹೊಂದಿರುವವರಿಗೆ ಸರ್ಕಾರ ನೀಡುತ್ತಿರುವ 10 ಕೆಜಿ ಅಕ್ಕಿಯಲ್ಲಿ 5 ಕೆಜಿಗೆ ಬದಲಾಗಿ ಹಣ ಅನೇಕರ ಖಾತೆಗೆ ಹೋಗಿದೆ ಆದರೆ ಮತ್ತೆ ಕೆಲವರ ಖಾತೆಗೆ ಇನ್ನೂ ಸಹ ಜಮಾ ಆಗಿಲ್ಲ. ಆಗಿರುವ ತಪ್ಪೇನೆಂದು ಜನರು ತಿಳಿಯುವಲ್ಲಿ ರಾಜ್ಯ ಸರ್ಕಾರ ಪ್ರತಿ ಕೆಜಿಗೆ 34 ರೂಪಾಯಿಗಳಂತೆ ಎರಡನೇ ಕಂತಿನ ಎರಡನೇ ತಿಂಗಳ ಹಣವನ್ನು ಸಹ ವರ್ಗಾವಣೆ ಮಾಡಿಬಿಟ್ಟಿದ್ದಾರೆ.

ಇದೀಗ ಅಕ್ಕಿಯ ಬದಲಾಗಿ ಹಣವನ್ನು ವರ್ಗಾವಣೆ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು ಹಲವರ ಖಾತೆಗೆ ಹಣ ಬಂದಿಲ್ಲ ಇದಕ್ಕೆ ಮುಖ್ಯವಾದ ಕಾರಣ ಏನು ?

(E-KYC) ಇ-ಕೆವೈಸಿ ಆಗಿಲ್ಲ:

ಎಲ್ಲಾ ಸರಿಯಾಗಿದ್ದು ಸಹ ನಿಮ್ಮ ಖಾತೆಗೆ ಹಣ ಬರುತ್ತಿಲ್ಲ ಎಂದು ಸಾಕಷ್ಟು ಜನರು ಬೇಸರದಿಂದ ಇದ್ದು. ಆದ್ರೆ ಅನ್ನೋ ಭಾಗ್ಯ ಯೋಜನೆ ಅಡಿಯಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರಬೇಕು ಅಂದ್ರೆ ನೀವು ಬ್ಯಾಂಕ್ ಖಾತೆಗೆ ನಿಮ್ಮ ಆಧಾರ್ ಸಂಖ್ಯೆಯನ್ನು ಸೀಡಿಂಗ್ ಮಾಡಿಸಿರಬೇಕು.

ಆದರೆ ಅದೆಷ್ಟು ಮಂದಿ ಈಗಲೂ ಸಹ ಆಧಾರ್ ಗೆ ಬ್ಯಾಂಕ್ ಖಾತೆ ಲಿಂಕ್ ಮಾಡೇ ಇಲ್ಲ ಈ ಕಾರಣದಿಂದ ಹಣ ಅವರಿಗೆ ಬಂದಿರುವುದಿಲ್ಲ ಈಗಲೇ ನೀವು ನಿಮ್ಮ ಬ್ಯಾಂಕ್ ಖಾತೆಗೆ ಭೇಟಿ ನೀಡುವ ಮೂಲಕ ಶಾಖೆಯಲ್ಲಿ ಆಧಾರ್ ಸೀಲಿಂಗ್ ಮಾಡಿಸಿ ಎಂದು ಹೇಳಿದರೆ ಬ್ಯಾಂಕಿನ ಸಿಬ್ಬಂದಿ ನಿಮಗೆ ಸಹಾಯ ಮಾಡುತ್ತಾರೆ ಮತ್ತು ಅವರು ಆಧಾರ್ ಸೀಡಿಂಗ್(Aadhar seeding) ಮಾಡಿ ಕೊಡುತ್ತಾರೆ.

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

ಬ್ಯಾಂಕ್ ಖಾತೆ ಇಲ್ಲ !

ಅದೆಷ್ಟೋ ಜನರು ಇನ್ನೂ ಸಹ ಬ್ಯಾಂಕ್ ಖಾತೆಯನ್ನು ಹೊಂದಿಲ್ಲ ಅದರಲ್ಲಿ ಮುಖ್ಯವಾಗಿ ಹಳ್ಳಿಯಲ್ಲಿರುವ ಜನರು ಬ್ಯಾಂಕ್ ಖಾತೆ ಇಲ್ಲದಿರುವ ಕಾರಣ ಅವರ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಯಾವ ಬ್ಯಾಂಕ್ ಗೆ ಹೋಗಬೇಕು ಎಂದು ಅಲ್ಲಿ ನಮೂದು ಆಗದೆ ಇರುವ ಕಾರಣ ಅವರ ಬ್ಯಾಂಕ್ ಖಾತೆಗೆ ಹಣ ಹೋಗಿಲ್ಲ ಅಂತಹವರಿಗೆ ಆಹಾರ ಇಲಾಖೆ ಸ್ವತಃ ಪೋಸ್ಟ್ ಆಫೀಸ್ನಲ್ಲಿ ಖಾತೆಯನ್ನು ತೆರೆಯಲು ಮಾಹಿತಿಯನ್ನು ನೀಡಿದ್ದು ಈ ಮೂಲಕ ಅಂತ ಅವರು ಪೋಸ್ಟ್ ಆಫೀಸ್ನಲ್ಲಿ ಖಾತೆ ತೆರೆದು ಪೋಸ್ಟ್ ಆಫೀಸ್ ಖಾತೆಗಳು ಹಣ ಹಾಕುವುದಕ್ಕೆ ಪ್ರಯತ್ನ ಮಾಡುತ್ತಿದೆ ಈಗಾಗಲೇ ಅನೇಕರಿಗೆ ಹೊಸ ಖಾತೆ ಮಾಡಿಸಿಕೊಟ್ಟಿದ್ದು ಅಂತಹವರು ಯೋಜನೆ ಲಾಭ ಪಡೆದಿದ್ದಾರೆ.

ಇದನ್ನೂ ಓದಿ – ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ಟಾಪ್ ವಿತರಣೆಗೆ ಅರ್ಜಿ ಆಹ್ವಾನ, ಇಂದೇ ಕೊನೆಯ ದಿನ ತಪ್ಪದೇ ಅರ್ಜಿ ಸಲ್ಲಿಸಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

Admin
Author

Admin

Lingaraj Ramapur BCA, MCA, MA ( Journalism )

4 thoughts on “AnnaBhagya- ಬಿಪಿಎಲ್ ಕಾರ್ಡ್ ಇದ್ರೂ ಅನ್ನಭಾಗ್ಯ ಹಣ ಬಂದಿಲ್ವಾ?? ಇಲ್ಲಿದೆ ಕಾರಣ..! ಈ ಕೆಲಸ ಮಾಡಿ 3 ತಿಂಗಳ ಹಣ ಪಡೆಯಿರಿ

Leave a Reply

Your email address will not be published. Required fields are marked *