ರಾಜ್ಯದ ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ನಿಮ್ಮ ಮಗುವಿಗೆ ಉಚಿತ ಸೀಟು ಬೇಕೇ?
– 2026-27ನೇ ಸಾಲಿನ RTE ಅರ್ಜಿ ಸಲ್ಲಿಕೆ ಇಂದಿನಿಂದ (April 21) ಆರಂಭ!
ಏನಿದು RTE?
ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಕಾಯ್ದೆ. ಇದರಲ್ಲಿ ಆಯ್ಕೆಯಾದರೆ 1 ರಿಂದ 8ನೇ ತರಗತಿವರೆಗೆ ಶಾಲೆಗೆ 1 ರೂಪಾಯಿ ಫೀಸ್ ಕಟ್ಟುವಂತಿಲ್ಲ!
ವಯಸ್ಸಿನ ಅರ್ಹತೆ ಎಷ್ಟು?
– LKG ಪ್ರವೇಶಕ್ಕೆ: 3.5 ರಿಂದ 4.5 ವರ್ಷದೊಳಗಿರಬೇಕು.– 1ನೇ ತರಗತಿಗೆ: 5.10 ರಿಂದ 6.5 ವರ್ಷದೊಳಗಿರಬೇಕು.
ಆದಾಯ ಮಿತಿ ಎಷ್ಟಿರಬೇಕು?
ಈ ಸೌಲಭ್ಯ ಪಡೆಯಲು ಕುಟುಂಬದ ವಾರ್ಷಿಕ ಆದಾಯ ಕಡ್ಡಾಯವಾಗಿ 3.5 ಲಕ್ಷ ರೂ. ಗಿಂತ ಕಡಿಮೆ ಇರಬೇಕು.
ಅಗತ್ಯ ದಾಖಲೆಗಳು
1. ಮಗುವಿನ ಆಧಾರ್ & ಜನನ ಪ್ರಮಾಣಪತ್ರ.2. ಪೋಷಕರ ಚಾಲ್ತಿಯಲ್ಲಿರುವ ಆದಾಯ ಮತ್ತು ಜಾತಿ ಪ್ರಮಾಣಪತ್ರ.3. ವಿಳಾಸದ ಪುರಾವೆ (ವೋಟರ್ ಐಡಿ/ಆಧಾರ್).
ಅರ್ಜಿ ಸಲ್ಲಿಸಿದ ಮೇಲೆ ಸೀಟು ಸಿಗುವುದು ಹೇಗೆ?
ಯಾವುದೇ ಮಧ್ಯವರ್ತಿಗಳ ಹಾವಳಿಯಿಲ್ಲ, ಡೊನೇಶನ್ ಟೆನ್ಷನ್ ಇಲ್ಲ! ಶಿಕ್ಷಣ ಇಲಾಖೆಯು ಸಂಪೂರ್ಣ ಪಾರದರ್ಶಕವಾಗಿ ಸಾಫ್ಟ್‌ವೇರ್ ಮೂಲಕ 'ಆನ್‌ಲೈನ್ ಲಾಟರಿ' (Online Lottery) ಎತ್ತಿ ಸೀಟುಗಳನ್ನು ಹಂಚಿಕೆ ಮಾಡುತ್ತದೆ. ಆಯ್ಕೆಯಾದ ಮಗುವಿನ ಪೋಷಕರಿಗೆ SMS ಬರುತ್ತದೆ.
ಅರ್ಜಿ ಸಲ್ಲಿಸುವುದು ಎಲ್ಲಿ?
ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್ schooleducation.kar.nic.in ಮೂಲಕ ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.
ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್, ಹಂತ-ಹಂತದ ಮಾಹಿತಿಗಾಗಿ ಕೆಳಗೆ