Home » ಮುಖ್ಯ ಮಾಹಿತಿ » ಹೊಸ ಕಾರ್ ಖರೀದಿಸಲು ₹ 2.5 ಲಕ್ಷ ಸಬ್ಸಿಡಿ | Subsidy for purchase of Taxis Goods Auto Passenger Vehicles |

ಹೊಸ ಕಾರ್ ಖರೀದಿಸಲು ₹ 2.5 ಲಕ್ಷ ಸಬ್ಸಿಡಿ | Subsidy for purchase of Taxis Goods Auto Passenger Vehicles |

Picsart 23 05 17 17 01 52 124 scaled

WhatsApp Group Telegram Group

ಎಲ್ಲರಿಗೂ ನಮಸ್ಕಾರ, ಇಂದು ಈ ಲೇಖನದಲ್ಲಿ ಟ್ಯಾಕ್ಸಿ/ಗೂಡ್ಸ್ / ಪ್ಯಾಸೆಂಜರ್/ ಆಟೋರಿಕ್ಷಾ ಖರೀದಿಸಲು ಸಹಾಯಕ ಧನ(Subsidy for purchase of taxi/goods/passenger/autorickshaw, Subsidy Vehicles Purchase 250000)ವನ್ನು ಪಡೆದುಕೊಳ್ಳುವುದು ಹೇಗೆ ಎಂಬುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದು ಒಂದು ಸಹಾಯಧನದ ಸೌಲಭ್ಯ ಯೋಜನೆಯಾಗಿದೆ. ಈಗಾಗಲೇ ಇದರ ಕುರಿತಾದ ಆದಿಸೂಚನೆಯನ್ನು ಪ್ರಕಟಿಸಲಾಗಿದೆ. ಈ ಯೋಜನೆಗೆ ಸೇರಿದಂತೆ ಎಲ್ಲ ತರಹದ ಮಾಹಿತಿಗಳನ್ನು ಈ ಲೇಖನದ ಮೂಲಕ ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ  ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ. 

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಸಂಬಂಧ ಪಟ್ಟಂತೆ ಈ ವಿಶೇಷ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆಯ ಅಡಿಯಲ್ಲಿ ಕೆಲವೊಂದು ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ.

ಮಾರ್ಗಸೂಚಿಗಳು ಕೆಳಗಿನಂತಿವೆ :

  1.  ಈ ಯೋಜನೆಯನ್ನು ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ವತಿಯಿಂದ ರಾಷ್ಟ್ರೀಕೃತ / ಪರಿಶಿಷ್ಟ ಬ್ಯಾಂಕುಗಳ ಸಂಯೋಗದೊಂದಿಗೆ ಪ್ರಾರಂಭ ಮಾಡಲಾಗಿದೆ.
  2. ಪ್ಯಾಸೆಂಜರ್ ಆಟೋರಿಕ್ಷಾ / ಗೂಡ್ಸ್ ವಾಹನ / ಟ್ಯಾಕ್ಸಿ ಖರೀದಿಗಾಗಿ ಬ್ಯಾಂಕ್‌ಗಳಿಂದ ಸಾಲವನ್ನು  ಅನುಮೋದಿಸಿದ ಫಲಾನುಭವಿಗಳಿಗೆ 33% ರಷ್ಟು ಸಬ್ಸಿಡಿ ಅಥವಾ ಗರಿಷ್ಠ ರೂ.2.5 ಲಕ್ಷ ಸಾಲವನ್ನು ನೀಡಲಾಗುತ್ತದೆ.
    Untitled 1 scaled
  3.  ಮಹಿಳೆಯರಿಗೆ ಕೂಡ ಸಮಾಂತರ ಆದ್ಯತೆಯನ್ನು ನೀಡಲಾಗುತ್ತದೆ.
  4. ಈ ಯೋಜನೆಯ ಅಡಿಯಲ್ಲಿ ಖರೀದಿಸಿದ ವಾಹನವನ್ನು ಸಾಲದ ಅವಧಿ ಮುಕ್ತಾಯಗೊಳ್ಳುವವರೆಗೂ ಖರೀದಿಸಿದ ವಾಹನವನ್ನು ಇತರರಿಗೆ ಮಾರಾಟ ಮಾಡಬಾರದು.
  5. ಫಲಾನುಭವಿಯು KMDC ಜಿಲ್ಲಾ ಕಛೇರಿಗೆ ರಸ್ತೆ ತೆರಿಗೆ ಮತ್ತು ವಿಮೆಯ ಬಗ್ಗೆ ಪೋಷಕ ದಾಖಲೆಗಳೊಂದಿಗೆ ಮಾಹಿತಿಯನ್ನು ಒಪ್ಪಿಸಬೇಕು.
  6. KMDC ಮೂಲಕ ಸಬ್ಸಿಡಿ ಪಡೆದ ವಾಹನದ ಮೇಲೆ “KMDC ನಿಂದ ಸಬ್ಸಿಡಿ ಮಾಡಲಾಗಿದೆ” ಎಂದು ಪ್ರದರ್ಶಿಸಲಾಗುತ್ತದೆ.

ಈ ಯೋಜನೆಯ ಲಾಭವನ್ನು ಪಡೆಯಲು ಬೇಕಾಗಿರುವ ಅರ್ಹತೆಗಳು:

  1.  ಅರ್ಜಿದಾರರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು.
  2.  ಅರ್ಜಿದಾರರು ರಾಜ್ಯದ ಖಾಯಂ ನಿವಾಸಿ ಆಗಿರಬೇಕು.
  3.  ಅರ್ಜಿದಾರರ ವಯೋಮಿತಿ ಕನಿಷ್ಠ 18 ವರ್ಷ ಮತ್ತು 55 ವರ್ಷ ಮೀರಿರಬಾರದು
  4.  ಅರ್ಜಿದಾರರ ವಾರ್ಷಿಕ ಕುಟುಂಬ ಆದಾಯವು 4.50 ಲಕ್ಷ ರೂ ಒಳಗೆ ಇರಬೇಕು.
  5. ಅರ್ಜಿದಾರರ ಕುಟುಂಬದ ಸದಸ್ಯರು ರಾಜ್ಯ/ಕೇಂದ್ರ/ಸರ್ಕಾರಿ ಸಾರ್ವಜನಿಕ ವಲಯದ ಯಾವುದೇ ಘಟಕದಲ್ಲಿ ಉದ್ಯೋಗಿಯಾಗಿರಬಾರದು.
  6.  ಅರ್ಜಿದಾರರು ಡ್ರೈವಿಂಗ್ ಲೈಸೆನ್ಸ್ ಹೊಂದಿದವರ ಆಗಿರಬೇಕು.
  7. ಅರ್ಜಿದಾರರು KMDC ಯಲ್ಲಿ ಸಾಲ ಡೀಫಾಲ್ಟರ್ ಆಗಿರಬಾರದು.
ಉಚಿತ ವಿದ್ಯಾರ್ಥಿವೇತನ Click Here
ಉಚಿತ ಸರ್ಕಾರಿ ಯೋಜನೆ Click Here
ಸರ್ಕಾರಿ ಉದ್ಯೋಗ Click Here

ಈ ಯೋಜನೆಯ ಲಾಭ ಪಡೆಯಲು ಬೇಕಾಗಿರುವ ದಾಖಲೆಗಳು :

  1. ಆನ್ಲೈನ್ ಅರ್ಜಿ
  2. ಪಾಸ್ಪೋರ್ಟ್ ಗಾತ್ರದ 2 ಫೋಟೋ
  3.  ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  4.  ಆಧಾರ್ ಕಾರ್ಡ್
  5.  ಡ್ರೈವಿಂಗ್ ಲೈಸೆನ್ಸ್
  6. ಫಲಾನುಭವಿ ಮತ್ತು ಅವನ/ಅವಳ ಕುಟುಂಬದ ಸದಸ್ಯರು ವಾಹನ ಖರೀದಿಸಲು ರಾಜ್ಯ ಸರ್ಕಾರದ ಯಾವುದೇ ಯೋಜನೆಯಡಿಯಲ್ಲಿ ಸಾಲ ಸೌಲಭ್ಯವನ್ನು ಪಡೆಯದಿರುವ ಬಗ್ಗೆ ಫಲಾನುಭವಿಯಿಂದ ಅಫಿಡವಿಟ್.
  7. ಸಾಲದ ಅವಧಿಯಲ್ಲಿ ಈ ಯೋಜನೆಯಡಿಯಲ್ಲಿ ಪಡೆದ ವಾಹನವನ್ನು ವರ್ಗಾವಣೆ ಮಾಡದಿರುವ  ಬಗ್ಗೆ ಅಫಿಡವಿಟ್.
  8. ಬ್ಯಾಂಕ್ ಪಾಸ್ ಬುಕ್ ನ ಪ್ರತಿ.
  9. ಸ್ವಯಂ ಘೋಷಣೆ ನಮೂನೆ

ಕರ್ನಾಟಕ ಸರಕಾರದಿಂದ ಅನುಷ್ಠಾನಗೊಳಿಸದ ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಿ.
ಹಾಗೆಯೇ ಇಂತಹ ಉತ್ತಮವಾದ ಸಾರ್ವಜನಿಕ ಯೋಜನೆಯ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ  ಸ್ನೇಹಿತ ಮಿತ್ರರಿಗೂ ಹಾಗೂ ಬಂಧುಗಳಿಗೂ ಶೇರ್ ಮಾಡಿ, ಧನ್ಯವಾದಗಳು.

telee

ಇದನ್ನೂ ಓದಿ: ₹7999ಕ್ಕೆ ಹೊಸ ಮೊಬೈಲ್ 😎 ಜಗತ್ತಿನ ಅತಿ ಕಡಿಮೆ ಬೆಲೆಯ ಸ್ಮಾರ್ಟ್ ಫೋನ್ – LAVA Yuva 2 Pro

ಪ್ರಮುಖ ಲಿಂಕುಗಳು 
ನೀಡ್ಸ್ ಪಬ್ಲಿಕ್ ಅಪ್ಲಿಕೇಶನ್
Download App
ಟೆಲಿಗ್ರಾಂ ಚಾನೆಲ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ 
ವಾಟ್ಸಪ್ ಗ್ರೂಪ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

About

Lingaraj Ramapur BCA, MCA, MA ( Journalism )

Leave a Reply

Your email address will not be published. Required fields are marked *