Home » ಸರ್ಕಾರಿ ಯೋಜನೆಗಳು » ಸೋಲಾರ್ ಸಬ್ಸಿಡಿ ಸ್ಕೀಮ್ ಯೋಜನೆ: 10,000 ದಿಂದ 50,000 ದ ವರೆಗೂ ಸಂಪಾದನೆ

ಸೋಲಾರ್ ಸಬ್ಸಿಡಿ ಸ್ಕೀಮ್ ಯೋಜನೆ: 10,000 ದಿಂದ 50,000 ದ ವರೆಗೂ ಸಂಪಾದನೆ

Telegram Group

ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ನಿಮಗೆಲ್ಲರಿಗೂ ಸೋಲಾರ್ ಸಬ್ಸಿಡಿ ಸ್ಕೀಂ ಬಗ್ಗೆ ವಿವರವನ್ನು ತಿಳಿಸಿಕೊಡಲಾಗುತ್ತದೆ. ಹೌದು ಸರ್ಕಾರದ ಕಡೆಯಿಂದ ಒಂದು ಸ್ಕೀಮ್ಅನ್ನು ಪ್ರಾರಂಭ ಮಾಡಿದ್ದಾರೆ, ಅದೇನೆಂದರೆ ನಮ್ಮ ಮನೆಯ ಮೇಲ್ಚಾವಣಿಯ ಮೇಲೆ ನಾವು ಸೋಲಾರ್ ಪ್ಲೇಟ್ ಗಳನ್ನು ಅಳವಡಿಸಿಕೊಳ್ಳಬಹುದು ಇದಲ್ಲದೆ ಸೋಲಾರ್ ಪ್ಲೇಟ್ ಗಳ ಮೂಲಕ ನಾವು ಹಣವನ್ನು ಕೂಡ ಸಂಪಾದನೆ ಮಾಡಬಹುದಾಗಿದೆ. ಆದ್ದರಿಂದ ಸರ್ಕಾರವು ಸೋಲಾರ್ ಸಬ್ಸಿಡಿ ಸ್ಕೀಮ್ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲು ಅವಕಾಶವನ್ನು ನೀಡಲಾಗಿದೆ. ಈ ಯೋಜನೆಯ ಅಡಿಯಲ್ಲಿ ಜನರಿಗೆ ತುಂಬಾ ಅಮೂಲ್ಯವಾದ ಪ್ರಯೋಜನಗಳಿವೆ ಅದೇನಪ್ಪ ಎಂದರೆ, ಈ ಸೋಲಾರ್ ಪ್ಲೇಟ್ ಗಳನ್ನು ಮನೆಯ ಹಂಚಿನ ಮೇಲೆ ಅಥವಾ ಆಸ್ತಿಸಿ ಮೇಲೆ ನಾವು ಅಳವಡಿಸಿಕೊಂಡಲ್ಲಿ, ಸೋಲಾರ್ ಪ್ಲೇಟ್ ಗಳಿಂದ ಉತ್ಪಾದನೆ ಆಗುವಂತಹ ಕರೆಂಟನ್ನು ನಾವು HESCOMಗೆ ಮಾರಬೇಕು ಅಂದರೆ ಮನೆಯ ಮೇಲಿನ ಸೋಲಾರ್ ಪ್ಲೇಟ್ ಗಳಿಂದ ಉತ್ಪತ್ತಿಯಾಗುವ ವಿದ್ಯುತ್ತನ್ನು HESCOM ಅವರು ಖರೀದಿಸುತ್ತಾರೆ ನಂತರ ಎಷ್ಟು ಯೂನಿಟ್ ವಿದ್ಯುತ್ ಖರೀದಿಯಾಗಿದೆ ಎಂಬುವುದರ ಆಧಾರದ ಮೇಲೆ ನಮ್ಮ ಖಾತೆಗೆ ಡೈರೆಕ್ಟ್ ಆಗಿ ಹಣವನ್ನು ಜಮಾ ಮಾಡುತ್ತಾರೆ. ಇದರಿಂದಾಗಿ ನಾವು ಹಣವನ್ನು ಪ್ರತಿ ತಿಂಗಳು ಸಂಪಾದಿಸಬಹುದಾಗಿದೆ. ಹೀಗೆ ಸೋಲಾರ್ ಪ್ಲೇಟ್ ಗಳಿಂದ ಉತ್ಪತ್ತಿಯಾಗುವ ವಿದ್ಯುತ್ ಅನ್ನು ಮಾರಿ ನಾವು ಸರಿ ಸುಮಾರು10,000 ದಿಂದ 50,000 ದ ವರೆಗೂ ಸಂಪಾದನೆಯನ್ನು ಪ್ರತಿ ತಿಂಗಳು ಮಾಡಬಹುದಾಗಿದೆ. ಇದಲ್ಲದೆ ಹೀಗೆ ನಾವು 25 ವರ್ಷಗಳವರೆಗೂ ಕನಿಷ್ಠವಾಗಿ ಸಂಪಾದನೆಯನ್ನು ಮಾಡಬಹುದಾಗಿದೆ. ಹಾಗಾದರೆ ಈ ಲೇಖನದ ಮೂಲಕ ಸೋಲಾರ್ ಸ್ಕೀಮ್ ನ ಸಬ್ಸಿಡಿಯನ್ನು ಹೇಗೆ ಪಡೆದುಕೊಳ್ಳುವುದು ಮತ್ತು ಅದಕ್ಕೆ ಯಾವ ಯಾವ ಕಡ್ಡಾಯಗಳನ್ನು ಅನುಸರಿಸಬೇಕು ನಂತರ ಈ ಸ್ಕೀಮ್ ಗೆ ಆನ್ಲೈನ್ ಮುಖಾಂತರ ಅರ್ಜಿಯನ್ನು ಹೇಗೆ ಸಲ್ಲಿಸುವುದು ಎಂಬುದರ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.

ಸೌರ ಗೃಹ ಯೋಜನೆಯ ಅಡಿಯಲ್ಲಿ ಮನೆಯ ಮೇಲ್ಚಾವಣಿಯ ಮೇಲೆ ಸೋಲಾರ್ ಪ್ಯಾನಲ್ ಗಳನ್ನು ಅಳವಡಿಸಲು ಸರ್ಕಾರವು ಶೇಕಡ 20ರಷ್ಟು ಸಬ್ಸಿಡಿಯನ್ನು ಕೊಡುತ್ತಿದ್ದಾರೆ. ಈ ಯೋಜನೆಯ ಅಡಿಯಲ್ಲಿ ತಮ್ಮ ತಮ್ಮ ಮನೆಗಳಿಗೆ ಉಚಿತವಾಗಿ ನಾವು ವಿದ್ಯುತ್ತನ್ನು ಬಳಸಿಕೊಳ್ಳಬಹುದು ಮಾರಾಟ ಮಾಡಿ ನಾವು ಹಣವನ್ನು ಸಂಪಾದಿಸಬಹುದಾಗಿದೆ. ನಿಮಗೆಲ್ಲಾ ತಿಳಿದಿರುವಂತೆ ದಿನೇ ದಿನಕ್ಕೆ ವಿದ್ಯುತ್ ದರ ಹೆಚ್ಚು ಆಗುತ್ತಿದೆ, ಹಾಗಾಗಿ ಈ ಸೋಲಾರ್ ಪ್ಯಾನೆಲ್ ಗಳನ್ನು ಮನೆಯ ಮೇಲೆ ಅಳವಡಿಸಿಕೊಳ್ಳುವ ಯೋಜನೆ, ಇದಕ್ಕೆ ಒಂದು ಉತ್ತಮ ಪರಿಹಾರವಾಗಿದೆ. ಹೀಗೆ ಪ್ರತಿ ಮನೆಯ ಮೇಲೆ ಒಂದು ಕಿಲೋ ವ್ಯಾಟ್ ನಿಂದ 500 ಕಿಲೋ ವ್ಯಾಟ್ ವರೆಗೂ ಪೋಲಾರ್ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ. ಒಂದು ಕಿಲೋ ವ್ಯಾಟ್ ಗೆ 50 ರಿಂದ 60,000 ರೂಪಾಯಿಯವರೆಗೆ ಇರುತ್ತದೆ. ಇದಕ್ಕೆ 20 ರಿಂದ 22 ಸಾವಿರ ರೂಪಾಯಿ ಅಂದರೆ ಶೇಕಡ 40ರಷ್ಟು ಸಬ್ಸಿಡಿ ಸಿಗಲಿದೆ. ಇದಲ್ಲದೆ 3 ಕಿಲೋ ವ್ಯಾಟ್ ಹಾಗೂ 7km ವ್ಯಾಟ್ ಗಳಿಗೂ ಕೂಡ ಸಬ್ಸಿಡಿ ದೊರೆಯುತ್ತದೆ. ಆದರೆ 7 ಕಿಲೋ ವ್ಯಾಟ್ ಗಳಿಗೆ ಶೇಕಡ 20ರಷ್ಟು ಸಬ್ಸಿಡಿ ಸಿಗಲಿದೆ. ಮೊದಲಿಗೆ ನಾವು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಿದ ನಂತರ ಸರ್ಕಾರದ ಕಡೆಯಿಂದ ಅಧಿಕಾರಿಗಳು ಬಂದು ತಮ್ಮ ಮನೆಯನ್ನು ನೋಡಿ ಸ್ಥಳವನ್ನು ವಿಚಾರಣೆ ಮಾಡಿದ ನಂತರ ಸೋಲಾರ್ ಪ್ಲೇಟ್ ನ ಅಳವಡಿಕೆಗೆ ಪರ್ಮಿಷನ್ ಅನ್ನು ನೀಡುತ್ತಾರೆ .

ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವ ವಿವರ :
ಮೊದಲಿಗೆ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಅಫೀಶಿಯಲ್ ವೆಬ್ಸೈಟ್ ಅನ್ನು ಓಪನ್ ಮಾಡಿಕೊಳ್ಳಬೇಕು. ನಂತರ ಮತ್ತಷ್ಟು ಓದಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ಹೀಗೆ ಮತ್ತಷ್ಟು ಓದಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದ ನಂತರ ನಮಗೆ ಎರಡು ಲಿಂಕ್ಗಳು ದೊರೆಯುತ್ತದೆ. ಮೊದಲನೆಯ ಲಿಂಕ್ ಸೌರ ಮೇಲ್ಚಾವಣಿಗಾಗಿ ಹೆಸ್ಕಾಂ ಪೋರ್ಟಲ್, ಎರಡನೆಯ ಲಿಂಕ್ ಸೌರ ಮೇಲ್ಚಾವಣಿ ಹಂತ ಎರಡರ ರಾಷ್ಟ್ರೀಯ ಪೋರ್ಟಲ್. ಹೀಗೆ ನಾವು ಎರಡು ಲಿಂಕ್ ಗಳನ್ನು ಓಪನ್ ಮಾಡಿಕೊಳ್ಳಬೇಕು. ಓಪನ್ ಮಾಡಿದ ನಂತರ ಮೊದಲನೇ ಲಿಂಕಿನಲ್ಲಿ ನಮಗೆ ಸೋಲಾರ್ ರೂಫ್ ಟಾಪ್ ಗಳಿಗೆ ಅಪ್ಲೈ ಮಾಡುವ ಸ್ಟೆಪ್ಸ್ ಗಳ ವಿವರ ದೊರೆಯುತ್ತದೆ. ಆ ವಿವರಗಳನ್ನು ನೀವು ಸರಿಯಾಗಿ ಓದಿಕೊಳ್ಳಬೇಕು. ಇದಲ್ಲದೆ ಸೋಲಾರ್ ರೂಫ್ಟಾಪ್ ಗಳ ಮೇಲೆ ಅಳವಡಿಸಿದ ಫೋಟೋಗಳನ್ನು ಕೂಡ ಇಲ್ಲಿ ತೋರಿಸಲಾಗಿದೆ. ಈ ಸೋಲಾರ್ ಕಿಂಗ್ ಒಂದು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಕಡೆಯಿಂದ ಆಯೋಜಿಸಲಾಗಿದೆ. ಇನ್ನು ಮುಂದುವರೆದು ಎರಡನೇ ಲಿಂಕನ್ನು ಓಪನ್ ಮಾಡಿದಾಗ ನಮಗೆ ಹುಬ್ಬಳ್ಳಿ ವಿದ್ಯುತ್ ನಿಯಮಿತದ ವಿಂಡೋ ಓಪನ್ ಆಗುತ್ತದೆ. ಅದರಲ್ಲಿ ಮೊದಲನೆಯ ಆಪ್ಷನ್ ಆದ ಅಪ್ಲೈ ಆನ್ಲೈನ್ ರೆಸಿಡೆನ್ಷಿಯಲ್ ಕನ್ಸ್ಯುಮರ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ ನಿಮಗೆ ಒಂದು ವಿಂಡೋ ಓಪನ್ ಆಗುವುದು, ಅದರಲ್ಲಿ ನಿಮಗೆ ಗೈಡ್ ಲೈನ್ಸ್ ಗಳು ದೊರೆಯುತ್ತದೆ. ಈ ವಿಂಡೋದಲ್ಲಿ ನಿಮಗೆ ಎಲ್ಲಾ ವಿವರಗಳು ಹಾಗೂ ಕಂಡೀಶನ್ಗಳು ದೊರೆಯುತ್ತದೆ. ಒಂದು ಕಿಲೋಮೀಟರ್ ಗೆ ಎಷ್ಟು ಬೆಂಚ್ಮಾರ್ಕ್ ಕಾಸ್ಟ್ ಆಗುವುದು ಎಂಬ ವಿವರಗಳು ಕೂಡ ಇಲ್ಲಿ ನಮಗೆ ದೊರೆಯುತ್ತದೆ. ಈ ಎಲ್ಲ ವಿವರಗಳನ್ನು ನೀವು ಸರಿಯಾಗಿ ಓದಿಕೊಂಡ ನಂತರ ಓಕೆ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮಗೆ ಕನ್ಸ್ಯುಮರ್ ಐಡಿಯನ್ನು ಅಪ್ಲೈ ಮಾಡುವ ಆಪ್ಷನ್ ದೊರೆಯುತ್ತದೆ. ಅದೇನೆಂದರೆ ನಿಮ್ಮ ಮನೆಯಲ್ಲಿರುವ ಹೆಸ್ಕಾಂ ಮೀಟರಿನ ನಂಬರ್ ಆಗಿರುತ್ತದೆ ಅದನ್ನು ನೀವು ನೋಂದಾವಣೆ ಮಾಡಬೇಕು. ನಂತರ ಫೆಚ್ ಡಿಟೈಲ್ಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಮುಂದುವರೆದು ನಿಮಗೆ ಇಂಟರ್ ರುಸ್ತುಬ್ಸ್ ಎಂಬ ಆಪ್ಷನ್ ದೊರೆಯುತ್ತದೆ ಅದರಲ್ಲಿ ಇಷ್ಟು ಬೇಗ ಬೈದ್ರು ಅವರಿಗೆ ವಿದ್ಯುತ್ ಉತ್ಪಾದನೆ ಯಾಗುತ್ತದೆ ಎಂಬುವುದರ ಸಂಪೂರ್ಣ ಮಾಹಿತಿ ಅಲ್ಲಿ ದೊರೆಯುತ್ತದೆ ನಂತರ ನಿಮಗೆ ವೆರಿಫೈ ರಿಜಿಸ್ಟರ್ ಅಂಡ್ ಪೆ ಎಂಬ ಆಪ್ಷನ್ ದೊರೆಯುತ್ತದೆ ಅದರಲ್ಲಿ ನೀವು ಎಲ್ಲಾ ವಿವರಗಳನ್ನು ವೇರಿಫೈ ಮಾಡಿದ ನಂತರ ಎಷ್ಟು ಮೊತ್ತವನ್ನು ಪೆ ಮಾಡಬೇಕು ಎಂಬುದರ ಮಾಹಿತಿ ದೊರೆಯುತ್ತದೆ. ಹೀಗೆ ನೀವು ಸೋಲಾರ್ ಪ್ಯಾನೆಲ್ ಗಳನ್ನು ನಿಮ್ಮ ಮನೆಯ ಮೇಲೆ ಅಳವಡಿಸಿಕೊಳ್ಳಲು ಸಬ್ಸಿಡಿಗೆ ಆನ್ಲೈನ್ ಮೂಲಕ ಅಪ್ಲೈ ಮಾಡಬಹುದಾಗಿದೆ.

ಸೋಲಾರ್ ರೂಫ್ ಟಾಪ್ ಗಳನ್ನು ಅಳವಡಿಸಿಕೊಳ್ಳುವುದರಿಂದ ಅನೇಕ ಪ್ರಯೋಜನಗಳು ಹಾಗೂ ಅನುಕೂಲಗಳು ಉಂಟಾಗುತ್ತವೆ. ಇದರಿಂದ ವಿದ್ಯುತ್ ಬಿಲ್ ಉಳಿತಾಯವಾಗುವುದಲ್ಲದೆ ಕನಿಷ್ಠ 25 ವರ್ಷದವರೆಗೆ ನೀವು ಇದರಿಂದ ಹಣವನ್ನು ಸಂಪಾದಿಸಬಹುದಾಗಿದೆ ಮತ್ತು ಸೌರಶಕ್ತಿಯು ಹಸಿರು ಶಕ್ತಿಯಾಗಿದ್ದು ಮಾಲಿನ್ಯ ಉಂಟಾಗುವುದಿಲ್ಲ ಮತ್ತು ಇದು ಪರಿಸರ ಸ್ನೇಹಿಯಾಗಿದೆ ಆದ್ದರಿಂದ ಇಂತಹ ಸೋಲಾರ್ ರೂಪಗಳನ್ನು ಅಳವಡಿಸಿಕೊಳ್ಳುವ ಮಾಹಿತಿ ಮತ್ತು ಇದಕ್ಕೆ ಸಬ್ಸಿಡಿಯನ್ನು ಪಡೆದುಕೊಳ್ಳುವಂತಹ ಮಾಹಿತಿ ಒಂದಿರುವ ಈ ಲೇಖನವನ್ನು ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಶೇರ್ ಮಾಡಿ. ಧನ್ಯವಾದಗಳು.

About

Lingaraj Ramapur BCA,MCA, MA(Journalism)

Leave a Reply

Your email address will not be published. Required fields are marked *

error: Content is protected !!