Home » ಮುಖ್ಯ ಮಾಹಿತಿ » 38 ಕೋಟಿ ಅಸಂಘಟತ ವಲಯದ ಕಾರ್ಮಿಕರನ್ನು ನೊಂದಾಯಿಸುವ E-Shram Card

38 ಕೋಟಿ ಅಸಂಘಟತ ವಲಯದ ಕಾರ್ಮಿಕರನ್ನು ನೊಂದಾಯಿಸುವ E-Shram Card

38 ಕೋಟಿ ಅಸಂಘಟತ ವಲಯದ ಕಾರ್ಮಿಕರನ್ನು ನೊಂದಾಯಿಸುವ E-Shram ಅಸಂಘಟತ ವಲಯದ ಕಾರ್ಮಿಕರ ಸಮಗ್ರ ರಾಷ್ಟ್ರೀಯ ಡೇಟಾಬೇಸ್ (NDUW)

ನೊಂದಣಿಯ ಪ್ರಯೋಜನೆಗಳು:

ಅಸಂಘಟತ ವಲಯದ ಕಾರ್ಮಿಕರು ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಯೋಜನೆಗಳನ್ನು ಪಡೆಯುತ್ತಾರೆ. ಈ ಡೇಟಾಬೇಸ್ ಸರ್ಕಾರಕ್ಕೆ ಅಸಂಘಟತ ಕಾರ್ಮಿಕರಿಗಾಗಿ ವಿಶೇಷ ನೀತಿಗಳು ಮತ್ತು ಯೋಜನೆಗಳು ಮಾಡಲು ಸಹಾಯ ಮಾಡುತ್ತದೆ.
ಇ – ಶ್ರಮ್ ನಲ್ಲಿ ನೊಂದಾಯಿಸಿಕೊಂಡರೆ ಕಾರ್ಮಿಕರು 1 ವರ್ಷಕ್ಕೆ PMSBY ಲಾಭವನ್ನು ಪಡೆಯುತ್ತಾರೆ( ಆಕಸ್ಮಿಕ ಸಾವು ಮತ್ತು ಪೂರ್ಣ ಅಂಗವೈಕಲ್ಯಕ್ಕೆ ರೂ 2 ಲಕ್ಷ ಮತ್ತು ಭಾಗಶ: ಅಂಗವೈಕಲ್ಯಕ್ಕೆ ರೂ. 1ಲಕ್ಷ) ಇಂದು ವಲಸೆ ಕಾರ್ಮಿಕರನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ ಮತ್ತು ಅವರಿಗೆ ಉದ್ಯೋಗವಕಾಶಗಳನ್ನು ಒದಗಿಸುತ್ತದೆ.

ಕೆಳಗಿನ ಮಾನದಂಡಗಳನ್ನು ಪೂರೈಸುವ ಪ್ರತಿಯೊಬ್ಬ ಕೆಲಸಗಾರರು NDUW ಅಡಿಯಲ್ಲಿ ನೊಂದಣಿಗೆ ಅರ್ಹರಾಗಿರುತ್ತಾರೆ. ನೊಂದಣಿಗೆ ಅರ್ಹರು

  • ವಯಸ್ಸು 16-59 ವರ್ಷಗಳು ಆಗಿರಬೇಕು.
  • ಆದಾಯ ತೆರಿಗೆ ಪಾವತಿಸುವವರಾಗಿರ ಬಾರದು.
  • EPFO ಮತ್ತುಎಸಿಕ್ ಸದಸ್ಯರಾಗಿರಬಾರದು

ನೋಂದಣಿಗೆ ಬೇಕಾಗಿರುವ ದಾಖಲೆಗಳು: 

  •  ಆಧಾರ್ ಕಾರ್ಡ್
  • ಸಕ್ರಿಯ ಬ್ಯಾಂಕ್ ಖಾತೆಯ ಪಾಸ್ ಬುಕ್
  • ಸಕ್ರಿಯ ಮೊಬೈಲ್ ಸಂಖ್ಯೆ. ಸೂಚನೆ ಆಧಾರ್ ಕಾರ್ಡ್ ಇ-ಕೆವೈಸಿ ಕಡ್ಡಾಯ

ನೊಂದಣಿಗೆ ಅರ್ಹರು: 

  1. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು
  2.  ಕೃಷಿ ಕಾಮಿಕರು
  3.  ಸಣ್ಣ ಮತ್ತು ಅತೀ ಸಣ್ಣ ರೈತರು
  4. ಮೀನುಗಾರರು
  5. ಪಶು ಸಂಗೋಪನಗಾರರು
  6.  ನೇಕಾರರು
  7. ಬಡಗಿ ಕೆಲಸಗಾರರು
  8. ಆಶಾ ಕಾರ್ಯಕರ್ತರು
  9. ಫೋಟೋಗ್ರಾಫರು*
  10. ಕ್ಷೌರಿಕರು
  11. ತರಕಾರಿ ಮತ್ತು ಹಣ್ಣು ಮಾರಾಟಗಾರರು
  12. ಮನೆಕೆಲಸಗಾರರು
  13. ಪತ್ರಿಕೆ ಮಾರಾಟಗಾರರು
  14.  ಚಾಲಕರು
  15.  ಕೂಲಿ ಕಾರ್ಮಿಕರು(ನೆರೆಗಾ)
  16.  ಬೀದಿ ವ್ಯಾಪಾರಿಗಳು
  17. ಅಂಗಡಿ ವ್ಯಾಪಾರಸ್ಥರು
  18. ಚರ್ಮ ಕೈಗಾರಿಕಾ ಕಾರ್ಮಿಕರು
  19.  ಆನ್ ಲೈನ್ ಸೇವಾ ಕಾರ್ಮಿಕರು
  20.  ಟೈಲರ್ ಗಳು
  21.  ಹೋಟೆಲ್ ಕಾರ್ಮಿಕರು
  22. ಬೇಕರಿ ವ್ಯಾಪಾರಸ್ಥರು
  23. ವಲಸೆ ಕಾರ್ಮಿಕರು
  24. ಮೆಕ್ಯಾನಿಕ್ ಕಾರ್ಮಿಕರು

About

Lingaraj Ramapur BCA,MCA, MA(Journalism)

One thought on “38 ಕೋಟಿ ಅಸಂಘಟತ ವಲಯದ ಕಾರ್ಮಿಕರನ್ನು ನೊಂದಾಯಿಸುವ E-Shram Card

Leave a Reply

Your email address will not be published. Required fields are marked *

error: Content is protected !!