ಟೆಕ್ ನ್ಯೂಸ್ಟೆಕ್ ಅಪ್ಡೆಟ್ಸ್

6 ವರ್ಷಗಳನ್ನು ಪೂರೈಸಿದ ಜಿಯೋ – ಸಾಟಿಯಿಲ್ಲದ 6 ವರ್ಷಗಳು: ಪ್ರಯೋಜನಗಳ ವಿವರ

ಡೇಟಾ ಬಳಕೆ 100 ಪಟ್ಟು ಹೆಚ್ಚು, 5G ಬಿಡುಗಡೆಯ ನಂತರ 2 ಪಟ್ಟು ಹೆಚ್ಚಾಗುವ ನಿರೀಕ್ಷೆ ಬ್ರಾಡ್‌ಬ್ಯಾಂಡ್ ಚಂದಾದಾರರು 4x ಮತ್ತು ಇಂಟರ್ನೆಟ್ ವೇಗ 5x ಗಿಂತ ಹೆಚ್ಚಾಗಿದೆ ಡೇಟಾ ಬೆಲೆಗಳು 95% ರಷ್ಟು ಕಡಿಮೆಯಾಗಿವೆ ನವದೆಹಲಿ: ಟೆಲಿಕಾಂ ಕ್ಷೇತ್ರದ ದೈತ್ಯ ರಿಲಯನ್ಸ್ ಜಿಯೋ ತನ್ನ 6 ನೇ ವಾರ್ಷಿಕೋತ್ಸವವನ್ನು 5 ಸೆಪ್ಟೆಂಬರ್ 2022 ರಂದು ಆಚರಿಸುತ್ತಿದೆ. ಈ 6 ವರ್ಷಗಳಲ್ಲಿ, ಟೆಲಿಕಾಂ ಉದ್ಯಮವು ತಿಂಗಳಿಗೆ ಸರಾಸರಿ ತಲಾ ಡೇಟಾ ಬಳಕೆಯಲ್ಲಿ 100 ಪಟ್ಟು ಹೆಚ್ಚು ಹೆಚ್ಚಳವನ್ನು ದಾಖಲಿಸಿದೆ. ಟ್ರಾಯ್‌ ಪ್ರಕಾರ, ಜಿಯೋ ಪ್ರಾರಂಭವಾಗುವ ಮೊದಲು, ಪ್ರತಿ ಭಾರತೀಯ ಗ್ರಾಹಕರು ಒಂದು ತಿಂಗಳಲ್ಲಿ ಕೇವಲ 154 ಎಂಬಿ ಡೇಟಾವನ್ನು ಬಳಸುತ್ತಿದ್ದರು. ಈಗ ಡೇಟಾ ಬಳಕೆಯ ಅಂಕಿ ಅಂಶವು ಪ್ರತಿ ಚಂದಾದಾರರಿಗೆ ತಿಂಗಳಿಗೆ 15.8 ಜಿಬಿಯಷ್ಟು ಬೆರಗುಗೊಳಿಸುವ ಮಟ್ಟಕ್ಕೆ 100 ಪಟ್ಟು ಹೆಚ್ಚಾಗಿದೆ. ಮತ್ತೊಂದೆಡೆ, ಜಿಯೋ ಬಳಕೆದಾರರು ಪ್ರತಿ ತಿಂಗಳು ಸುಮಾರು 20 ಜಿಬಿ ಡೇಟಾವನ್ನು ಬಳಸುತ್ತಾರೆ, ಇದು ಉದ್ಯಮದ ಅಂಕಿಅಂಶಗಳಿಗಿಂತ ಹೆಚ್ಚಿನದಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಖೇಶ್ ಅಂಬಾನಿಯವರು ದೀ

Read More
ಟೆಕ್ ಅಪ್ಡೆಟ್ಸ್ಟೆಕ್ ನ್ಯೂಸ್

ವಾಟ್ಸಾಪ್‌ನಲ್ಲೇ ಸಿಗಲಿದೆ ಜಿಯೋ ಮಾರ್ಟ್‌

ಮೆಟಾ ಮತ್ತು ಜಿಯೋ ಪ್ಲಾಟ್‌ಫಾರಂ ಸಹಭಾಗಿತ್ವದಲ್ಲಿ ಸೌಲಭ್ಯ ವಾಟ್ಸಾಪ್‌ನಲ್ಲಿ ಇದೇ ಮೊದಲ ಬಾರಿಗೆ ಶಾಪಿಂಗ್ ಮುಂಬೈ, ಅಗಸ್ಟ್‌ 29: ಇದೇ ಮೊದಲ ಬಾರಿಗೆ ವಾಟ್ಸಾಪ್‌ನಲ್ಲಿ ಶಾಪಿಂಗ್‌ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಲಾಗುತ್ತಿದ್ದು ಜಿಯೋ ಮಾರ್ಟ್‌ ಇನ್ನು ವಾಟ್ಸಾಪ್‌ನಲ್ಲೇ ಸಿಗಲಿದೆ.ವಾಟ್ಸಾಪ್‌ನಲ್ಲೇ ಜಿಯೋ ಮಾರ್ಟ್‌ನ ಎಲ್ಲ ದಿನಸಿ ಕ್ಯಾಟಲಾಗ್‌ ಕಾಣಿಸುತ್ತದೆ. ಅದರಲ್ಲೇ ಐಟಂಗಳನ್ನು ಕಾರ್ಟ್‌ಗೆ ಸೇರಿಸಬಹುದು ಮತ್ತು ಹಣ ಪಾವತಿಯನ್ನೂ ಮಾಡಬಹುದು. ಈ ಬಗ್ಗೆ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಪ್ರಕಟಿಸಿದ ಮೆಟಾ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್‌ ಝುಕರ್‌ಬರ್ಗ್‌ "ಭಾರತದಲ್ಲಿ ಜಿಯೋ ಮಾರ್ಟ್‌ ಜೊತೆಗೆ ನಮ್ಮ ಸಹಭಾಗಿತ್ವವನ್ನು ಘೋಷಿಸುವುದಕ್ಕೆ ನಮಗೆ ಹೆಮ್ಮೆಯಾಗುತ್ತಿದೆ. ವಾಟ್ಸಾಪ್‌ನಲ್ಲಿ ಇದೇ ಮೊದಲ ಬಾರಿಗೆ ಸಮಗ್ರ ಶಾಪಿಂಗ್‌ ಅನುಭವವನ್ನು ನಾವು ಒದಗಿಸುತ್ತಿದ್ದೇವೆ. ಜಿಯೋಮಾರ್ಟ್‌ನಿಂದ ದಿನಸಿಯನ್ನು ವಾಟ್ಸಾಪ್‌ನಲ್ಲೇ ಖರೀದಿ ಮಾಡಬಹುದು. ಬ್ಯುಸಿನೆಸ್ ಮೆಸೇಜಿಂಗ್‌ ಸೌಲಭ್ಯದಲ್ಲಿ ಮಹತ್ವದ ಬದಲಾವಣೆಗಳಾಗುತ್ತಿವೆ ಮತ್ತು ಈ ರೀತಿಯ ಚಾಟ್ ಅಧರಿತ ಅನುಭವಗಳು ಜನರನ್ನು ತಲುಪಿ...

Read More
ಟೆಕ್ ಅಪ್ಡೆಟ್ಸ್ಟೆಕ್ ನ್ಯೂಸ್

700MHz ಸ್ಪೆಕ್ಟ್ರಮ್ ಬಳಕೆ: 5Gಯಿಂದ ಆದಾಯ ಪಡೆಯುವ ನಿಟ್ಟಿನಲ್ಲಿ ಭಾರ್ತಿ ಏರ್ಟೆಲ್ ವಿರುದ್ಧ ಜಿಯೋ ಮೇಲುಗೈ

ನವದೆಹಲಿ, ಆಗಸ್ಟ್ ಭಾರತದಾದ್ಯಂತ 700MHz ಸ್ಪೆಕ್ಟ್ರಮ್ ಬಳಕೆಯ ಹಕ್ಕನ್ನು ಪಡೆಯುವ ಮೂಲಕ ಜಿಯೋ ಸ್ವತಂತ್ರ 5G ವಿನ್ಯಾಸವನ್ನು ರಚಿಸಲು ಯೋಜಿಸುತ್ತಿದ್ದು, ಇದು ಉತ್ತಮ ಗುಣಮಟ್ಟ ಹಾಗೂ ಅತಿಕಡಿಮೆವಿಳಂಬದ 5G ಅನುಭವ ಮತ್ತು ಸಾಂಸ್ಥಿಕ ಗ್ರಾಹಕರಿಗಾಗಿ ವಿಭಿನ್ನ ಮತ್ತು ವ್ಯಾಪಕ ಶ್ರೇಣಿಯಂತಹ ದೀರ್ಘಾವಧಿಯ ಪ್ರಯೋಜನಗಳನ್ನು ಹೊಂದಿದೆಯೆಂದು ಜೆಎಂ ಫೈನಾನ್ಶಿಯಲ್ ತನ್ನ ವರದಿಯಲ್ಲಿ ತಿಳಿಸಿದೆ.ಹಾಗಾಗಿ, ಇದು ಮಧ್ಯಮದಿಂದ ದೀರ್ಘಾವಧಿಯಲ್ಲಿ ಹೆಚ್ಚಿನ ARPU ಗ್ರಾಹಕರನ್ನು ತನ್ನ ಪ್ರತಿಸ್ಪರ್ಧಿಗಳಿಂದ ತನ್ನೆಡೆಗೆ ಸೆಳೆಯಲು ಜಿಯೋಗೆ ನೆರವಾಗಬಹುದು ಎನ್ನಲಾಗಿದೆ. ಇದಲ್ಲದೆ, ಭಾರ್ತಿಯು ಸ್ವತಂತ್ರವಲ್ಲದ (ನಾನ್ ಸ್ಟಾಂಡ್ ಅಲೋನ್, NSA) ವಿನ್ಯಾಸದ ಆಧಾರದ ಮೇಲೆ 5G ಸೇವೆಗಳನ್ನು ಪ್ರಾರಂಭಿಸಲು ಯೋಜಿಸಿದ್ದು, ಅದು ಮೂಲಭೂತವಾಗಿ 4Gಯ ಮೂಲಸೌಕರ್ಯವನ್ನೇ ಬಳಸಿ ಅದರ ಮೇಲೆ 5G ಪದರವೊಂದನ್ನಷ್ಟೇ ಸೇರಿಸಲಿದೆ. ಇದು ದುಬಾರಿ 700 MHz ಸ್ಪೆಕ್ಟ್ರಮ್ ವೆಚ್ಚವನ್ನು ಉಳಿಸುವುದರಿಂದ ಭಾರ್ತಿಯು ಹೂಡಬೇಕಾದ ಬಂಡವಾಳವನ್ನು ಹಾಗೂ SA ವಿನ್ಯಾಸಕ್ಕೆ ಸಂಬಂಧಿಸಿದ ಯಂತ್ರಾಂಶ ಉನ್ನತೀಕರಣದ ಮೇಲಿನ ಹೂಡಿಕೆಯನ್ನು ಕಡ

Read More