Home » ಟೆಕ್ ನ್ಯೂಸ್ » Amazon Great Indian Festival Sale: ಅಗ್ಗದ ಆನ್‌ಲೈನ್ ಶಾಪಿಂಗ್‌ ! ಉತ್ಪನ್ನಗಳ ಮೇಲೆ ಸಿಗುತ್ತಿದೆ ಭಾರೀ ಆಫರ್

Amazon Great Indian Festival Sale: ಅಗ್ಗದ ಆನ್‌ಲೈನ್ ಶಾಪಿಂಗ್‌ ! ಉತ್ಪನ್ನಗಳ ಮೇಲೆ ಸಿಗುತ್ತಿದೆ ಭಾರೀ ಆಫರ್

Amazon Festival Sale in India : ಭಾರತದಲ್ಲಿ ಹಬ್ಬದ ಸೀಸನ್ ಪ್ರಾರಂಭವಾಗಿದೆ. ಜನರ ಶಾಪಿಂಗ್ ಕೂಡಾ ಹೆಚ್ಚಾಗುತ್ತಿದೆ. ಈ ಖರೀದಿಯನ್ನು ಇನ್ನಷ್ಟು ವಿಶೇಷವಾಗಿಸಲು, ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಅನ್ನು ಪ್ರಾರಂಭಿಸಲಿದೆ. ಈ ಮಾರಾಟವು ಭಾರತದಲ್ಲಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಈ ಸೇಲ್ ನಲ್ಲಿ ಎಲ್ಲಾ ಉತ್ಪನ್ನಗಳ ಖರೀದಿಯ ಮೇಲೆ ಗ್ರಾಹಕರಿಗೆ ಭಾರೀ ರಿಯಾಯಿತಿ ಮತ್ತು ಕ್ಯಾಶ್ ಬ್ಯಾಕ್ ಸಿಗಲಿದೆ. ಈ ಸೇಲ್ ನಲ್ಲಿ ಖರೀದಿ ಮಾಡುವ ಮೂಲಕ ಭರ್ಜರಿ ರಿಯಾಯಿತಿ ಕ್ಯಾಶ್‌ಬ್ಯಾಕ್, ವಿನಿಮಯ ಕೊಡುಗೆಗಳು, ಕಡಿಮೆ-ವೆಚ್ಚದ EMIಆಫರ್‌ಗಳ ಲಾಭವನ್ನು ಪಡೆಯಬಹುದು.

ಅಮೆಜಾನ್ ಫೆಸ್ಟಿವಲ್ ಸೇಲ್‌ನಲ್ಲಿ ಕಂಪನಿಯು ಲ್ಯಾಪ್‌ಟಾಪ್‌ಗಳಿಂದ ಹಿಡಿದು ಸ್ಮಾರ್ಟ್‌ವಾಚ್‌ಗಳು, ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ಗೃಹೋಪಯೋಗಿ ವಸ್ತುಗಳ ಮೇಲೆ ಉತ್ತಮ ರಿಯಾಯಿತಿಗಳನ್ನು ನೀಡುವ ತಯಾರಿ ನಡೆಸುತ್ತಿದೆ. ಮಾರಾಟದ ಸಮಯದಲ್ಲಿ, ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ನೀಡಲಾಗುವ ಸ್ಮಾರ್ಟ್ ಗ್ಯಾಜೆಟ್‌ಗಳಲ್ಲಿ ವಿಶೇಷ ಕೊಡುಗೆಗಳನ್ನು ಕಾಣಬಹುದು. ಮಾರಾಟದಲ್ಲಿ, 5G ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ಹಲವು ಹೊಸ ಉತ್ಪನ್ನಗಳ ಮೇಲೆ ವಿಶೇಷ ಕೊಡುಗೆಗಳು ಲಭ್ಯವಿರಲಿದೆ.

SBI ಕಾರ್ಡ್ ಹೊಂದಿರುವವರು ವಿಶೇಷ ಕೊಡುಗೆ :
Amazon ಮತ್ತು SBI ನೊಂದಿಗೆ ಪಾಲುದಾರಿಕೆ ಇರುವುದರಿಂದ SBI ಕಾರ್ಡ್ ಹೊಂದಿರುವವರು ಮಾರಾಟದ ಸಮಯದಲ್ಲಿ ಖರೀದಿಗಳ ಮೇಲೆ 10 ಪ್ರತಿಶತದಷ್ಟು ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಇದಿಷ್ಟೇ ಅಲ್ಲ, ಎಸ್‌ಬಿಐ ಕಾರ್ಡ್ ಗ್ರಾಹಕರಿಗೆ ಮತ್ತೊಂದು ವಿಶೇಷ ಕೊಡುಗೆಯನ್ನು ನೀಡಲಿದೆ. ಎಸ್‌ಬಿಐ ಕಾರ್ಡ್‌ನೊಂದಿಗೆ ಖರೀದಿಸಿದರೆ, ಮೊದಲ ಬಾರಿಗೆ 10 ಪ್ರತಿಶತ ಕ್ಯಾಶ್‌ಬ್ಯಾಕ್ ಲಭ್ಯವಿರುತ್ತದೆ. ಪ್ರೈಮ್ ಸದಸ್ಯತ್ವ ಹೊಂದಿರುವ ಗ್ರಾಹಕರು ಖರೀದಿಗಳ ಮೇಲೆ ಭಾರೀ ರಿಯಾಯಿತಿಗಳನ್ನು ಪಡೆಯುತ್ತಾರೆ.

About

Lingaraj Ramapur BCA,MCA, MA(Journalism)

Leave a Reply

Your email address will not be published. Required fields are marked *

error: Content is protected !!