Home » ಸರ್ಕಾರಿ ಯೋಜನೆಗಳು » ಎಲ್ಲಾ ಅಭಿವೃದ್ಧಿ ನಿಗಮಗಳ ಅರ್ಜಿಗಳನ್ನು ಒಂದೇ ವೆಬ್ಸೈಟ್ನಲ್ಲಿ ಸಲ್ಲಿಸಿ

ಎಲ್ಲಾ ಅಭಿವೃದ್ಧಿ ನಿಗಮಗಳ ಅರ್ಜಿಗಳನ್ನು ಒಂದೇ ವೆಬ್ಸೈಟ್ನಲ್ಲಿ ಸಲ್ಲಿಸಿ

ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ ಅಭಿವೃದ್ಧಿ ನಿಗಮ ಯೋಜನೆಗೆ ಹೇಗೆ ಅಪ್ಲಿಕೇಶನ್ ಹಾಕುವುದು ಅಥವಾ ಸುವಿಧ ಯೋಜನೆಗೆ ಹೇಗೆ ಅಪ್ಲಿಕೇಶನ್ ಹಾಕುವುದು ಎಂದು ತಿಳಿಸಿಕೊಡಲಾಗುವುದು. ಕರ್ನಾಟಕ ಸರ್ಕಾರ ಇಲಾಖೆ ಯೋಜನೆಯನ್ನು ಕೈಗೊಂಡಿದೆ. ಈ ಸ್ಕೀಮ್ ಗೆ ಹೇಗೆ ಅಪ್ಲೈ ಮಾಡುವುದು, ಯಾವ ವೆಬ್ಸೈಟ್ ಮೂಲಕ ಅಪ್ಲೈ ಮಾಡಬೇಕು ಎಂಬುದನ್ನು ಸಂಕ್ಷಿಪ್ತವಾಗಿ ಈ ಲೇಖನದ ಮೂಲಕ ತಿಳಿಸಿ ಕೊಡುತ್ತೇವೆ.

ಮೊದಲನೆಯದಾಗಿ ಗೋರ್ಮೆಂಟ್ ಆಫ್ ಕರ್ನಾಟಕದ ಅಡಿಯಲ್ಲಿರುವ ವೆಬ್ಸೈಟ್ ಆದ ಸುವಿದ ಸ್ಕೀಮ್ಸ್ ಎಂಬ ವೆಬ್ ಸೈಟನ್ನು ಓಪನ್ ಮಾಡಿಕೊಳ್ಳಿ, ಅದರಲ್ಲಿ ಮೊದಲನೆಯದಾಗಿ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ವಿಭಾಗಗಳನ್ನು ನಾವು ಕಾಣಬಹುದು ಅವುಗಳೆಂದರೆ ದೇವರಾಜ್ ಬ್ಯಾಕ್ವರ್ಡ್ ಕ್ಲಾಸ್ ಡಿಪಾರ್ಟ್ಮೆಂಟ್ ಕಾರ್ಪೊರೇಷನ್, ಕರ್ನಾಟಕ ಅಲೆಮಾರಿ ಹಾಗೂ ಅರೆ ಅಲೆಮಾರಿ ಡೆವಲಪ್ಮೆಂಟ್ ವಿಭಾಗ, ಕರ್ನಾಟಕ ಮಡಿವಾಳ ಮಾಚಿದೇವ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್, ಕರ್ನಾಟಕ ಮರಾಠ ವಿಭಾಗ, ಕರ್ನಾಟಕ ಸವಿತ ಸಮಾಜ ನಿಗಮ, ಕರ್ನಾಟಕ ಉಪ್ಪರ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್, ಕರ್ನಾಟಕ ವಿಶ್ವಕರ್ಮ ಕಮ್ಯುನಿಟಿ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ನಿಗಮ ಹೀಗೆ ಎಂಟು ನಿಗಮಗಳನ್ನು ಹೊಂದಿರುತ್ತದೆ. ಈ ನಿಗಮಗಳ ಅಡಿಯಲ್ಲಿ ನೀವು ಹಲವಾರು ಯೋಜನೆಗಳನ್ನು ನೋಡಬಹುದು. ಲೋನಿಗೆ ಸಂಬಂಧಪಟ್ಟ ಸ್ಕಿಮ್ ಗಳು, ಎಜುಕೇಶನ್ ಲೋನ್ ಗೆ ಸಂಬಂಧಪಟ್ಟ ಸ್ಕಿಮ್ ಗಳು ಹಾಗೂ ಸೆಲ್ಫ್ ಎಂಪ್ಲಾಯ್ಮೆಂಟ್ ಗೆ ಸಂಬಂಧ ಪಟ್ಟ ಸ್ಕೀಮ್ ಗಳು ಹೀಗೆ ಹಲವಾರು ಸ್ಕೀಮ್ ಗಳನ್ನು ನೀವು ಈ ನಿಗಮದ ಅಡಿಯಲ್ಲಿ ಕಾಣಬಹುದು. ಹೀಗೆ ನೀವು ಸಂಬಂಧಪಟ್ಟ ಸ್ಕೀಮ್ ಗಳನ್ನು ಓಪನ್ ಮಾಡಿ ಫಾರಂ ಗಳನ್ನು ಭರ್ತಿ ಮಾಡಬಹುದು.

ಈ ಲೇಖನದ ಮೂಲಕ ನಿಮಗೆ ಒಂದು ಉದಾಹರಣೆಗಾಗಿ ಸ್ವಯಂ ಉದ್ಯೋಗಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ವಿಶ್ವಕರ್ಮ ನಿಗಮದ ವತಿಯಿಂದ ಹೇಗೆ ಅರ್ಜಿಯನ್ನು ಭರ್ತಿ ಮಾಡುವುದು ಎಂದು ತಿಳಿಸಿಕೊಡುತ್ತೇನೆ. ಮೊದಲನೆಯದಾಗಿ ಸೆಲ್ಫ್ ಎಂಪ್ಲಾಯ್ಮೆಂಟ್ ಸ್ಕೀಮ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮಗೆ ಒಂದು ಫಾರ್ಮ್ ದೊರೆಯುತ್ತದೆ ಅದರಲ್ಲಿ ನಿಮ್ಮ ಆಧಾರ ಹೆಸರು, ಮೊಬೈಲ್ ನಂಬರ್ ಹಾಗೂ ಆಧಾರ್ ನಂಬರ್ ಅನ್ನು ನೀವು ನೋಂದಾವಣೆ ಮಾಡಬೇಕು ನಂತರ ನಿಮ್ಮ ಜೆಂಡರ್ ಹಾಗೂ ವಯಸ್ಸು ಮತ್ತು ಜಾತಿ ಮತ್ತು ಮೂಲ ಜಾತಿಯ ವಿವರವನ್ನು ನೋಂದಾವಣೆ ಮಾಡಬೇಕು ನಂತರ ಜಾತಿ ಸರ್ಟಿಫಿಕೇಟ್ ನಲ್ಲಿರುವ ಆರ್ಡಿ ನಂಬರ್ ಅನ್ನು ಕೂಡ ನೋಂದಾವಣೆ ಮಾಡಬೇಕು ಹಾಗೆಯೇ ಆದಾಯದ ಆಡಿ ನಂಬರನ್ನು ಕೂಡ ನೋಂದಾವಣೆ ಮಾಡಬೇಕು. ಮತ್ತು ನಿಮ್ಮ ರೇಷನ್ ಕಾರ್ಡಿನಲ್ಲಿ ಇರುವಂತಹ ಮನೆಯವರ ಹೆಸರುಗಳನ್ನು ನೊಂದಿಸಬೇಕು. ನಂತರ ನಿಮ್ಮ ಜಿಲ್ಲೆ ತಾಲೂಕು ಹಾಗೂ ಅಸೆಂಬ್ಲಿ ಕಾನ್ಸ್ಟಿಟ್ಯುಎನ್ಸಿ ವಿವರವನ್ನು ಭರ್ತಿ ಮಾಡಬೇಕು. ಮುಂದುವರೆದಲ್ಲಿ ನೀವು ಲೋನ್ ಗೆ ಅಪ್ಲೈ ಮಾಡುತ್ತಿರುವ ಮುಖ್ಯ ಉದ್ದೇಶವನ್ನು ಬರೆಯಬೇಕು ನಂತರ ಅಗ್ರಿ ಮತ್ತು ಕಂಟಿನ್ಯೂ ಎಂಬ ಚೆಕ್ ಬಾಕ್ಸ್ ನಲ್ಲಿ ಚೆಕ್ ಮಾಡಿ ಸಬ್ಮಿಟ್ ಮಾಡಬೇಕು. ಹೀಗೆ ಸಬ್ಮಿಟ್ ಮಾಡಿದ ನಂತರ ನಿಮಗೆ ಒಂದು ರೆಫರೆನ್ಸ್ ನಂಬರ್ ದೊರೆಯುತ್ತದೆ. ಹೀಗೆ ನೀವು ಆಯಾ ಸ್ಕೀಮ್ಗಳಿಗೆ ಸಂಬಂಧಪಟ್ಟ ಅರ್ಜಿಯನ್ನು ಯಾವುದೇ ತೊಂದರೆ ಇಲ್ಲದೆ ಸುಲಭವಾಗಿ ಸ್ವತಹ ನೀವೇ ಸಲ್ಲಿಸಬಹುದು.

ಹಾಗೆಯೇ ಸಮಾಜ ಕಲ್ಯಾಣ ನಿಗಮದವರು ಕೂಡ ಕೆಲವೊಂದು ಸ್ಕೀಮ್ ಗಳನ್ನು ನೀಡುತ್ತಿದ್ದಾರೆ. ಇದರ ಅಡಿಯಲ್ಲಿ ಯಾವ ಯಾವ ನಿಗಮಗಳು ಬರುವುದೆಂದು ನಾನು ಇವಾಗ ತಿಳಿಸಿಕೊಡುತ್ತೇನೆ. ಸೋಶಿಯಲ್ ವೆಲ್ಫೇರ್ ಡಿಪಾರ್ಟ್ಮೆಂಟ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಯಾವ ಯಾವ ನಿಗಮಗಳು ಇರುವುದಾಗಿ ತಿಳಿಯುತ್ತದೆ.

ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಸ್ಕೀಮ್ ಗಳು ಇಂತಿದೆ :

ಮೊದಲನೆಯದಾಗಿ ಡಾಕ್ಟರ್ ಬಿ ಆರ್ ಅಂಬೇಡ್ಕರ್ ನಿಗಮ, ಡಾಕ್ಟರ್ ಬಿ ಆರ್ ಅಂಬೇಡ್ಕರ್ ಡೆವಲಪ್ಮೆಂಟ್ ಕಾರ್ಪೊರೇಷನ್ ಷೆಡ್ಯೂಲ್ ಕ್ಯಾಸ್ಟ್ MMSCD ಸೆಲ್, ಕರ್ನಾಟಕ ಆದಿ ಜಾಂಬವ ಡೆವಲಪ್ಮೆಂಟ್ ಕಾರ್ಪೊರೇಷನ್, ಕರ್ನಾಟಕ ಭೋವಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಶೆಡ್ಯೂಲ್ ಟ್ರೈ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್, ಕರ್ನಾಟಕ ಸಫಾಯಿ ಕರ್ಮಚಾರಿ ನಿಗಮ, ಕರ್ನಾಟಕ ತಾಂಡ ನಿಗಮ ಹಾಗೂ ಡಾಕ್ಟರ್ ಬಾಬು ಜಗಜೀವನ್ ರಾಮ್ ಲೆದರ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಕಾರ್ಪೊರೇಷನ್ ಲಿಮಿಟೆಡ್. ಇದು ಇಷ್ಟು ಸೋಶಿಯಲ್ ವೆಲ್ಫೇರ್ ನಿಗಮದ ಅಡಿಯಲ್ಲಿ ಬರುವಂತಹ ಸ್ಕೀಮ್ ಗಳಾಗಿವೆ.

ಇನ್ನು ಮೂರನೆಯದಾಗಿ ವಿಕಲಚೇತನರಿಗೆ ಮತ್ತು ಸೀನಿಯರ್ ಸಿಟಿಜನ್ಸ್ ಗಳಿಗೆ ಹೊಸದಾಗಿ ಡಿಪಾರ್ಟ್ಮೆಂಟ್ ಅನ್ನು ಓಪನ್ ಮಾಡಲಾಗಿದೆ. ಇದರ ಅಡಿಯಲ್ಲಿ ನಿರುದ್ಯೋಗಿಗಳು ಸ್ಕಾಲರ್ಶಿಪ್‌ಗೆ ಅರ್ಜಿಯನ್ನು ಸಲ್ಲಿಸಬಹುದು, ನಂತರ ಪ್ರೈಸ್ ಮನಿ ಮೆರಿಟ್ ಸ್ಕಾಲರ್ಶಿಪ್ ಅನ್ನು ಕೂಡ ಸ್ಟೂಡೆಂಟ್ಸ್ ಗಳು ಡಿಸಬಿಲಿಟಿ ಆದಲ್ಲಿ ಅರ್ಜಿಯನ್ನು ಸಲ್ಲಿಸಬಹುದು, ಡೆತ್ ರಿಲೀಫ್ ಫಂಡ್ಗೆ ಕೂಡ ಅರ್ಜಿಯನ್ನು ಸಲ್ಲಿಸಬಹುದು, ಹಾಗೆಯೇ ಡಿಸಬಿಲಿಟಿ ಇರುವವರು ಆಧಾರ್ ಸ್ಕೀಮ್ ಫಾರ್ ಡಿಸೆಬಲ್ ಪರ್ಸನ್ ಎನ್ನುವ ಸ್ಕೀಮ್ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದು ನಂತರ ಚೈಲ್ಡ್ ಕೇರ್ ಅಲೋವೆನ್ಸ್ ಹಾಗೂ ಮ್ಯಾರೇಜ್ ಇನ್ಸೆಂಟಿವ್ ಸ್ಕೀಮ್ ಕೂಡ ಇದರ ಅಡಿಯಲ್ಲಿ ಇದೆ. ಮೆಡಿಕಲ್ ರಿಲೀಫ್ ಅಂಡ್ ಸ್ಕೀಮ್ ಮತ್ತು ಪ್ರತಿಭಾ ಸ್ಕೀಮ್ ಗಳು ಕೂಡ ಇದರ ಅಡಿಯಲ್ಲಿ ಬರುತ್ತದೆ. ಹೀಗೆ ನೀವು ಸಂಬಂಧ ಪಟ್ಟ ಸ್ಕೀಮ್ ಗಳ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಯಾವುದೇ ತೊಂದರೆ ಇಲ್ಲದೆ ಸುಲಭ ರೀತಿಯಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಹೀಗೆ ನೀವು ಸುವಿಧ ಸ್ಕೀಮ್ ಅಡಿಯಲ್ಲಿ ಎಲ್ಲಾ ವರ್ಗದವರೂ ಕೂಡ ನಿಮಗೆ ಸಂಬಂಧಪಟ್ಟ ಸ್ಕಿಮ್ಗಳಿಗೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು. ಕರ್ನಾಟಕ ಸರ್ಕಾರದ ವತಿಯಿಂದ ಹಮ್ಮಿಕೊಂಡ ಈ ಯೋಜನೆಗಳು ಜನರ ಒಳಿತಿಗಾಗಿ ಮಾಡಲ್ಪಟ್ಟಿವೆ. ಹಾಗಾಗಿ ಈ ಲೇಖನವನ್ನು ನಿಮ್ಮ ಎಲ್ಲಾ ಓದುಗರ ಮಿತ್ರರಿಗೆ ಸೆಂಡ್ ಮಾಡಿ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ. ಧನ್ಯವಾದಗಳು.

About

Lingaraj Ramapur BCA,MCA, MA(Journalism)

Leave a Reply

Your email address will not be published. Required fields are marked *

error: Content is protected !!