ನಮಸ್ಕಾರ ಎಲ್ಲರಿಗೂ ನೀಡ್ಸ್ ಆಫ್ ಪಬ್ಲಿಕ್ ಗೆ ಮತ್ತೋಮ್ಮೆ ಸುಸ್ವಾಗತ. ಇವತ್ತೀನ ಲೇಖನದಲ್ಲಿ ನಿಮ್ಮ ಹೆಣ್ಣು ಮಗುವಿನ ಭಾಗ್ಯಲಕ್ಷ್ಮಿ ಬಾಂಡ್ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ. ತುಂಬಾ ಜನರು ತಮ್ಮ ಹೆಣ್ಣು ಮಗುವಿಗಾಗಿ ಭಾಗ್ಯಲಕ್ಷ್ಮಿ ಬಾಂಡ್ ಅನ್ನು ಹೊಂದಿದ್ದೀರಾ. ಈಗ ನಾವು ಭಾಗ್ಯಲಕ್ಷ್ಮಿ ಬಾಂಡ್ ಅನ್ನು ಆನ್ಲೈನ್ ಮುಖಾಂತರ ಯಾವ ರೀತಿ ನೋಡಬೇಕು ಯಾವ ರೀತಿ ಆನ್ಲೈನ್ ಮುಖಾಂತರ ಪ್ರಿಂಟ್ ತೆಗೆದುಕೊಳ್ಳಬೇಕು ಮತ್ತು ಭಾಗ್ಯಲಕ್ಷ್ಮಿ ಬಾಂಡ್ ಯಾವ ದಿನಾಂಕದಂದು ಪ್ರಾರಂಭವಾಗಿದೆ ಎಂದು ಸಂಪೂರ್ಣವಾಗಿ ತಿಳಿದುಕೊಳ್ಳೋಣ. ಹೌದು ಭಾಗ್ಯಲಕ್ಷ್ಮಿ ಬಾಂಡ್ ಗೆ ಸಂಬಂಧಪಟ್ಟ ಎಲ್ಲಾ ಮಾಹಿತಿಯನ್ನು ನಾವು ಸುಲಭವಾಗಿ ನಮ್ಮ ಮೊಬೈಲ್ ಫೋನ್ ಮೂಲಕ ತಿಳಿದುಕೊಳ್ಳಬಹುದು.
ಭಾಗ್ಯಲಕ್ಷ್ಮಿ ಯೋಜನೆ
ಹೆಣ್ಣು ಮಗುವಿನ ಸ್ಥಾನವನ್ನು ಮೊದಲು ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಹೆಚ್ಚಿಸಲು ಮತ್ತು ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಹೆಣ್ಣು ಮಗುವಿನ ಜನನ ಉತ್ತೇಜಿಸಲು 2006-07ನೇ ಸಾಲಿನಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆ “ಭಾಗ್ಯಲಕ್ಷ್ಮಿ, ಎಂಬ ಹೊಸ ಯೋಜನೆಯನ್ನು ಜಾರಿಗೆ ತರಲಾಯಿತು. ಈ ಯೋಜನೆಯ ಅರ್ಥಿಕ ಸೌಲಭ್ಯವು ಹೆಣ್ಣು ಮಗುವಿಗೆ ಅವರ ತಾಯಿ/ ತಂದೆ/ ಪೋಷಕರ ಮೂಲಕ ಕೆಲವು ನಿಬಂಧಗಳನ್ನು ಪೂರೈಸಿದಲ್ಲಿ ನೀಡಲಾಗುವುದು.
ಬಡತನ ರೇಖೆಗಿಂತ ಕೆಳಗೆ ಸುವ ಕುಟುಂಬಗಳಲ್ಲಿ 31.3.2006ರ ನಂತರ ಜನಿಸಿದ ಹೆಣ್ಣು ಮಕ್ಕಳು ಈ ಯೋಜನೆಯಡಿ ಫಲಾನುಭವಿಗಳಾಗಿ ನೋಂದಾಯಿಸಿಕೊಳ್ಳಲು ಅರ್ಹರಿರುತ್ತಾರೆ. ಮಗು ಜನಿಸಿದ ಒಂದು ವರ್ಷದೊಳಗೆ ಜನನ ಪ್ರಮಾಣ ಪತ್ರವನ್ನು ಒದಗಿಸಿ ನೋಂದಾಯಿಸಲು ಅವಕಾಶವಿದೆ. ಯೋಜನೆಯ ಸೌಲಭ್ಯಗಳು ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬದ ಇಬ್ಬರು ಹೆಣ್ಣುಮಕ್ಕಳಿಗೆ ಸೀಮಿತಗೊಳಿಸಲಾಗಿದೆ. ಫಲಾನುಭವಿಯ ಹೆಣ್ಣು ಮಗುವಿನ ತಂದೆ ಅಥವಾ ತಾಯಿ ತಂದೆ ಅಥವಾ ತಾಯಿ ಶಾಶ್ವತ ಕಟುಂಬ ಯೋಜನೆಯನ್ನು ಅಳವಡಿಸಿಕೊಂಡಿರುವ ತಕ್ಕದ್ದು ಮತ್ತು ಕುಟುಂಬದಲ್ಲಿ ಮಕ್ಕಳ ಸಂಖ್ಯೆ 2ಕ್ಕಿಂತ ಹೆಚ್ಚಿಗೆ ಇರಬಾರದು. ನೋಂದಣಿ ನಂತರ ಹಾಗೂ ಪೂರ್ಣ ಪರಿಶೀಲನೆ ನಂತರ ದಿನಾಂಕ 31.7 2008 ರ ವರೆಗೆ ಜನಿಸಿದ ಪ್ರತಿ ಫಲಾನುಭವಿಗೆರೂ.10,000/-ಗಳು ಆಯ್ಕೆಯಾದ ಪಾಲುದಾರ ಹಣಕಾಸು ಸಂಸ್ಥೆಯಲ್ಲಿ ನಿಶ್ಚಿತ ಠೇವಣಿಯನ್ನು ಇಡಲಾಗಿದೆ
ಮೊದಲನೇದಾಗಿ ಈಗ ಭಾಗ್ಯಲಕ್ಷ್ಮಿ ಬಾಂಡ್ ಆನ್ಲೈನ್ ಮುಖಾಂತರ ಯಾವ ರೀತಿ ಡೌನ್ಲೋಡ್ ಮಾಡಬೇಕು ಯಾವ ರೀತಿ ಮಾಹಿತಿ ಮೊಬೈಲ್ ನಲ್ಲಿ ನೋಡಬೇಕು ಎಂದು ತಿಳಿದುಕೊಳ್ಳೋಣ.
ಕರ್ನಾಟಕ ಸರ್ಕಾರದ ಭಾಗ್ಯಲಕ್ಷ್ಮಿ ಯೋಜನೆಯ ಅಧಿಕೃತ ಜಾಲತಾಣಕ್ಕೆ ನಾವು ಭೇಟಿ ನೀಡಬೇಕು
ಮುಖಪುಟದ ಮೇಲುಗಡೆ ಭಾಗದಲ್ಲಿ ಎಂಕ್ವೇರಿ ಅಂತ ಒಂದು ಆಪ್ಷನ್ ಕಾಣಿಸಿಕೊಳ್ಳುತ್ತದೆ. ಇದರ ಮೇಲೆ ಒಂದು ಸಾರಿ ಕ್ಲಿಕ್ ಮಾಡಿ ನಂತರ ಚೈಲ್ಡ್ ಐಡಿ ಮೇಲೆ ಕ್ಲಿಕ್ ಮಾಡಿ. ನಂತರ ಈ ಚೈಲ್ಡ್ ಸೈಡಿನಲ್ಲಿ ಯಾವ ಸಂಖ್ಯೆಯನ್ನು ಹಾಕಬೇಕು ಎಂದು ತುಂಬಾ ಜನರಿಗೆ ಗೊಂದಲವಿರುತ್ತದೆ. ನಿಮ್ಮ ಮಗುವಿನ ಭಾಗ್ಯಲಕ್ಷ್ಮಿ ಬಾಂಡ್ ನಲ್ಲಿ ಟೇವಣಿ ಸಂಖ್ಯೆ ಅಂತ ಒಂದು ಸಂಖ್ಯೆಯನ್ನು ಕೊಟ್ಟಿರುತ್ತಾರೆ. ಆ 12 ಅಂಕಿಯ ಸಂಖ್ಯೆಯನ್ನು ಇಲ್ಲಿ ನೀವು ನಮೂದಿಸಬೇಕು ಮತ್ತು ಕ್ಯಾಪ್ಚಾ ನಮೂದಿಸಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.
ನಂತರದಲ್ಲಿ ನಿಮ್ಮ ಮಗುವಿನ ಭಾಗ್ಯಲಕ್ಷ್ಮಿ ಬಾಂಡ್ ಬಗ್ಗೆ ಸಂಪೂರ್ಣವಾದ ಮಾಹಿತಿ ನಿಮಗೆ ಇಲ್ಲಿ ಸಿಗುತ್ತೆ.