ನಮಸ್ಕಾರ ಎಲ್ಲರಿಗೂ ನೀಡ್ಸ್ ಆಫ್ ಪಬ್ಲಿಕ್ ಗೆ ಮತ್ತೋಮ್ಮೆ ಸುಸ್ವಾಗತ. ಇವತ್ತಿನ ಸಂಚಿಕೆಯಲ್ಲಿ ಯ್ಯೂಟ್ಯೂಬರ್ ಹೇಗೆ ಆಗುವುದು ಎಂದು ತಿಳಿಸಿಕೊಡ್ತೀನಿ. ಇತ್ತೀಚಿನ ದಿನಗಳಲ್ಲಿ ಚಿಕ್ಕಮಕ್ಕಳು ಸಹಿತ ಯ್ಯೂಟ್ಯೂಬ ಅಲ್ಲಿ ವಿಡಿಯೋಗಳನ್ನು ಹಾಕಿ ಲಕ್ಷಗಟ್ಟಲೆ ಸಂಪಾದಿಸುತ್ತೀದ್ದಾರೆ ಎಂದು ತುಂಬಾ ಜನರ ಯೋಚನೆಯಾಗಿರುತ್ತದೆ. ಮತ್ತು ಕೆಲವೊಂದಿಷ್ಟು ಜನ ಚಾನೆಲ್ ರಚನೆ ಮಾಡಿಕೊಂಡು ಸ್ವಲ್ಪ ವಿಡಿಯೋಗಳನ್ನು ಹಾಕಿ ವೀಕ್ಷಣೆಗಳು ಬರ್ತಿಲ್ಲಾ,ದುಡ್ಡು ಬರ್ತಿಲ್ಲಾ ಎಂದು ಅಲ್ಲಿಗೆ ಅದನ್ನು ಬಿಟ್ಟು ಬಿಡುತ್ತೀರಿ. ಮತ್ತು ಅದರಿಂದಾ ಹೇಗೆ ದುಡ್ಡು ಬರುತ್ತದೆ ಎಂದು ತುಂಬಾ ಗೊಂದಲಗಳನ್ನು ಸೃಷ್ಟಿ ಮಾಡಿಕೊಳ್ಳುತ್ತೀರಿ. ನಿಮ್ಮ ಎಲ್ಲಾ ಗೊಂದಲಗಳನ್ನು ಇವತ್ತಿನ ಲೇಖನದಲ್ಲಿ ಪರಿಹಾರ ಮಾಡುತ್ತೇನೆ. ನೀವು ಯೂಟ್ಯೂಬ್ ಚಾನೆಲ್ ಅನ್ನು ರಚನೆ ಮಾಡಿದ್ದೀರಿ ಅಂದರೆ ನೀವು ಹಾಕಿರುವ ವಿಡಿಯೋಗಳಿಗೆ ವೀಕ್ಷಣೆ ಬರುತ್ತಿಲ್ಲಾ ಅಂದರೆ, ವೀಕ್ಷಣೆಗಳು ಬರಲು ಏನು ಮಾಡಬೇಕು ಮತ್ತು ನಿಮ್ಮ ಚಾನೆಲ್ ಪ್ರಖ್ಯಾತಿಯಾಗಲು ಏನು ಮಾಡಬೇಕೆಂದು ತಿಳಿಸಿಕೊಡ್ತೀನಿ. ಈ ಲೇಖನವನ್ನು ಪೂರ್ತಿಯಾಗಿ ಓದಿ,
ಸಮಸ್ಯೆ ಏನು ಗೋತ್ತಾ..? ಕೆಲವು ವಿದ್ಯಾರ್ಥಿಗಳು ಹತ್ತನೇ ತರಗತಿ, ಹನ್ನೆರಡನೇ ತರಗತಿ, ಡಿಗ್ರೀ ಓದುವವರು ಆಗಿರುತ್ತೀರಾ ಮತ್ತು ಲಾಕ್ ಡೌನ್ ಅಂತಾ ಮನೆಲಿರುತ್ತೀರಿ ಚಾನೆಲ್ ಮಾಡಿಕೊಳ್ಳುತ್ತೀರಿ ಕೆಲವು ವಿಡಿಯೋಗಳನ್ನು ಹಾಕುತ್ತಿರಿ , ಹಾಕಿದ್ಮೇಲೆ ಐದು ಸಾವಿರ, ಹತ್ತು ಸಾವಿರ ರೂಪಾಯಿ ದುಡ್ಡು ಬರಲು ಪರಂಭವಾಗುತ್ತದೆ. ಆಗ ಇಲ್ಲಿ ದುಡ್ಡು ಬರುತ್ತಿದೆಯೆಂದು ಓದೋದು ಎಲ್ಲಾ ಬಿಟ್ಟು ಚಾನೆಲ್ ಕಡೆನೆ ನಿಮ್ಮ ಗಮನ ಹೋಗುತ್ತದೆ. ನಾನು ಚಾನೆಲ್ ಮಾಡಿಕೊಳ್ಳುವುದು ತಪ್ಪು ಎಂದು ಹೇಳುತ್ತಿಲ್ಲಾ ನಿಮಗೆ ಕೆಟ್ಟ ಅಭಿಪ್ರಾಯ ಹೇಳುತ್ತಿಲ್ಲಾ, ಆದರೆ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಓದುವುದನ್ನು ಬಿಟ್ಟು ಮತ್ತು ತಮ್ಮ ಎಲ್ಲಾ ಕೆಲಸಗಳನ್ನು ಬಿಟ್ಟು ಬರೀ ಚಾನೆಲ್ ಮೇಲೆಯೇ ಗಮನ ನೀಡಬೇಡಿ. ನಿಮ್ಮದು ಶಿಕ್ಷಣ ಮುಗಿಯಿತು ಅಂದರೆ ಮತ್ತು ಒಂದು ಡಿಗ್ರೀ ಮುಗಿಯಿತು ಅಂದರೆ ಇದೇ ರೀತಿ ಬೇರೆ ಬೇರೆ ವಿಧಾನದಲ್ಲಿ ದುಡ್ಡನ್ನು ಗಳಿಸುತ್ತೀರಿ. ಶಿಕ್ಷಣ ಮುಖ್ಯವಾದದ್ದು. ಹಾಗೆಂದು ಚಾನೆಲ್ ಅನ್ನು ರಚನೆ ಮಾಡಿಕೊಳ್ಳಬೇಡಿ ಎಂದು ಹೇಳುತ್ತಿಲ್ಲಾ. ಆದರೆ ಇದಕ್ಕೆ ಕೊಡುವ ಸಮಯದ ಎರಡರಷ್ಟು ಸಮಯವನ್ನು ನಿಮ್ಮ ಓದಿನಕಡೆ ಕೊಡಿ. ಕೆಳಗಡೆ ಸ್ವಲ್ಪಾ ಸಲಹೆಗಳನ್ನು ನಿಡಿದ್ದೇನೆ ನೋಡಿ. ತುಂಬಾ ಜನ ಯೂಟ್ಯೂಬ್ ಚಾನೆಲ್ ಪ್ರಾರಂಭ ಮಾಡಿರುತ್ತೀರಿ, ಕೆಲವೊಂದಿಷ್ಟು ವಿಡಿಯೋಗಳನ್ನು ಹಾಕಿರುತ್ತೀರಿ ಒಂದು ತಿಂಗಳು ಆದರು ವೀಕ್ಷಣೆಗಳು ಬರುವುದಿಲ್ಲ ಆಗ ಅದನ್ನು ಅಲ್ಲಿಗೆ ಬಿಟ್ಟು ಬಿಡುತ್ತೀರಿ. ನಂತರ ಕೆಲವೊಂದಿಷ್ಟು ಯೂಟ್ಯೂಬ್ ಮಾಡಿರುವ ಮಾನ್ಯತೆ ಹೊಂದಿರುವವರನ್ನು ಪರಿಚಯ ಮಾಡಿಕೊಂಡು ಕೇಳುತ್ತೀರಿ,ಅವರು ಎಲ್ಲಾ ಕಡೆ ಶೇರ್ ಮಾಡಿ ಹಾಗೆ ಹೀಗೆ ಎಂದು ಹೇಳುತ್ತಾರೆ ಆಮೇಲೆ ನೀವು ಸುಮ್ಮನೆ ಆಗಿಬಿಡುತ್ತೀರಿ. ದಯವಿಟ್ಟು ಆ ತಪ್ಪನ್ನು ಯಾವತ್ತೂ ಮಾಡಬೇಡಿ.
ಮೊದಲನೆದಾಗಿ ನಮ್ಮ ಚಾನೆಲ್ ವಿಶೇಷತೆಯಿಂದಾ ಕೂಡಿರಬೇಕು. ಹೇಗೆ ಅಂದರೆ ಬೇರೆಯವರ ಚಾನೆಲ್ ನೋಡಿದರೆ ನಮ್ಮ ಚಾನೆಲ್ ಅದರಿಗಿಂತಾ ವಿಭಿನ್ನವಾಗಿರಬೇಕು. ಹಾಗೆ ಏನಾದರೂ ವೀಕ್ಷಕರಿಗೆ ಅನಿಸಿದರೇ ವೀಕ್ಷಣೆಗಳು ಹೆಚ್ಚು ಬರಲು ಪರಂಭವಾಗುತ್ತದೆ. ಕೆಲವೊಂದಿಷ್ಟು ಜನಾ ಏನು ತಪ್ಪು ಮಾಡುತ್ತೀರಿ ಎಂದರೆ ಟೆಕ್ ವಿಡಿಯೋಗಳನ್ನು ಮಾಡುತ್ತೀರಿ. ಟೆಕ್ ವಿಡಿಯೋ ಅಂದರೆ ಮೊಬೈಲ್ ನ ವಿಡಿಯೋಗಳನ್ನೇ ಮಾಡುತ್ತೀರಿ, ಮತ್ತು ಯಾರಾದರೂ ಮಾಡಿರುವ ಅನ್ ಬಾಕ್ಸಿಂಗ್ ವಿಡಿಯೋಗಳನ್ನು ನೋಡಿ ನೀವು ಸಹಿತ ಅದನ್ನೇ ಮಾಡಲು ಪರಂಭ ಮಾಡುತ್ತೀರಿ. ನೀವು ಏನಾದರೂ ಹೀಗೆ ಮಾಡಿದರೆ ಖಂಡಿತವಾಗಿಯೂ ವೀಕ್ಷಣೆಗಳು ಬರುವುದಿಲ್ಲಾ. ಟಾಪ್ ಹತ್ತರಲ್ಲಿರುವ ಚಾನೆಲಗಳ ವಿಡಿಯೋಗಳನ್ನು ಜನರು ನೊಡಲು ಜನರು ಬಯಸುತ್ತಾರೆ ಹೊರತು, ಹೊಸದಾಗಿ ಪ್ರಾರಂಭ ಮಾಡಿದ ಚಾನೆಲ್ ಕಡೆ ಅಷ್ಟಾಗಿ ಗಮನ ಕೊಡುವುದಿಲ್ಲ, ಹೊಸದಾಗಿ ಚಾನೆಲ್ ಪ್ರಾರಂಭ ಮಾಡಿದ ವಿಡಿಯೋಗಳನ್ನು ನೋಡುವುದಿಲ್ಲ. ಹಾಗಾಗಿ ನೀವು ನಿಮ್ಮದೇ ಆದ ವಿಭಿನ್ನವಾಗಿ ವಿಶೇಷವಾಗಿರುವ ವಿಡಿಯೋಗಳನ್ನು ಮಾಡಿ. ಉದಾಹರಣೆಗೆ ಪಾನ್ ಕಾರ್ಡ್ ಮಾಡುವುದು ಹೇಗೆ,ನಂತರ PF ಗೇ ಹೇಗೆ ಅರ್ಜಿ ಸಲ್ಲಿಸುವುದು. ಆಧಾರ್ ಕಾರ್ಡ್ ಹೇಗೆ ನವೀಕರಿಸುವುದು ಈ ತರಹದ ವಿಡಿಯೋಗಳನ್ನು ಮಾಡಿ. ಬಹಳಷ್ಟು ಜನರಿಗೆ ಇದು ಹೇಗೆ ಮಾಡುವುದು ಎಂದು ಗೊತ್ತಿರುವುದಿಲ್ಲಾ. ಎಲ್ಲಾ ಕಡೆಗಳಲ್ಲಿ ಇವುಗಳನ್ನೇ ಹುಡುಕುತ್ತಿರುತ್ತಾರೆ. ನೀವು ಈ ರೀತಿಯ ವಿಡಿಯೋಗಳನ್ನು ಮಾಡಿದಿರಿ ಎಂದರೆ ನಿಮಗೆ ಹೆಚ್ಚಿನ ವೀಕ್ಷಣೆಗಳು ಬರುತ್ತವೆ ಮತ್ತು ಎಲ್ಲಾ ಕಡೆ ಶೇರ್ ಮಾಡುತ್ತಾರೆ ಅದರ ಜೊತೆಗೆ ಸಬ್ ಸ್ಕೈಬರ್ ಜಾಸ್ತಿ ಆಗುತ್ತಾರೆ. ಆಗ ನಿಮ್ಮ ಚಾನೆಲ್ ತುಂಬಾ ಬೆಳವಣಿಗೆ ಆಗಿ ಎಲ್ಲರ ಮಾನ್ಯತೆ ಪಡೆಯುತ್ತದೆ. ಉತ್ತಮವಾದ ಚಾನೆಲ್ ಎನ್ನುತ್ತಾರೆ. ದಯವಿಟ್ಟು ದೊಡ್ಡ ದೊಡ್ಡ ಚಾನೆಲ್ ಅಲ್ಲಿ ಮಾಡುವ ವಿಡಿಯೋಗಳನ್ನೇ ನೀವು ರಚಿಸಬೇಡಿ.
ನಂತರ ಕೆಲವು ವಿಡಿಯೋಗಳನ್ನು ಮಾಡುತ್ತೀರಿ ಒಂದೆರಡು ದಿನ ಮಾಡುತ್ತೀರಿ ವೀಕ್ಷಣೆಗಳು ಬರುವುದಿಲ್ಲಾ ನಂತರ ಈ ಒಂದು ತಿಂಗಳು ಬಿಡುತ್ತೀರಿ ಸುಮ್ಮನೆ ಆಗುತ್ತಿರಿ,ನಂತರ ಮತ್ತೆ ಪುನಃ ವಿಡಿಯೋ ಮಾಡುತ್ತೀರಿ. ದಯವಿಟ್ಟು ಈ ರೀತಿ ಮಾಡಬೇಡಿ. ನಿರಂತರವಾಗಿ ವಿಡಿಯೋಗಳನ್ನು ಮಾಡಿ. ಒಂದು ವಾರಕ್ಕೆ ಐದರಿಂದಾ ಆರು ವಿಡಿಯೋಗಳನ್ನು ಆದರೂ ಹಾಕಿ. ಆದರೆ ನಿಮ್ಮ ಪ್ರಯತ್ನ ನಿರಂತರವಾಗಿರಲಿ. ಒಂದಲ್ಲಾ ಒಂದು ವಿಡಿಯೋ ತುಂಬಾ ಜಾಲ ತಾಣದಲ್ಲಿ ಹರಡುತ್ತದೆ. ನಂತರ ನಿಮಗೆ ವೀಕ್ಷಣೆಗಳು ಬಂದೆ ಬರುತ್ತವೆ. ಹಾಗಾಗಿ ನಿಮ್ಮ ಕೆಲಸ ನಿರಂತರವಾಗಿರಲಿ. ನಂತರ ನಿಮಗೆ ತುಂಬಾ ತಾಳ್ಮೆ ಇರಬೇಕು. ಯೂಟ್ಯೂಬ್ ಚಾನೆಲ್ ಮಾಡಿದ್ದೀರಿ ಅಂದರೆ ತಾಳ್ಮೆನೆ ನಿಮಗೆ ಮುಖ್ಯ.
ಇವತ್ತು ಚಾನೆಲ್ ಮಾಡಿದ್ದೇನೆ ನಾಳೆನೆ ಒಂದು ಲಕ್ಷ ಜನ ಸಬ್ ಸ್ಕ್ರಯಿಬ್ ಆಗಬೇಕು. ನಾಳೆಯಿಂದನೆ ದುಡ್ಡು ಬರಬೇಕು ಎಂದು ಕೊಳ್ಳಬಾರದು. ಇಲ್ಲಿ ತುಂಬಾ ತಾಳ್ಮೆಯಿಂದ ಇರಬೇಕು. ಒಂದೊಂದು ಸಾರೀ ಆರು ತಿಂಗಳಾದರೂ ನಿಮಗೆ ಮಾನಿಟೇಶನ್ ಸಿಗುವುದಿಲ್ಲಾ ಹಾಗಾಗಿ ನಿಮಗೆ ತುಂಬಾ ತಾಳ್ಮೆ ಇರಬೇಕು. ಒಟ್ಟಿನಲ್ಲಿ ಒಂದು ಚಾನೆಲ್ ಮಾನ್ಯತೆ ಪಡೆದು ಉನ್ನತ ಆಗಬೇಕು ಹೆಚ್ಚು ವೀಕ್ಷಣೆಗಳು ಬರಬೇಕು ಅಂದರೆ ಮುಖ್ಯವಾಗಿ ವಿಶೇಷತೆ,ವಿಭಿನ್ನತೆ,ನಿರಂತರ ಪ್ರಯತ್ನ, ತಾಳ್ಮೆ ಇರಬೇಕು. ನಿಮಗೆ ಪೂರ್ತಿ ವೇಳೆ ಎಲ್ಲಾ ಕೆಲಸಗಳನ್ನು ಬಿಟ್ಟು ಇದನ್ನೇ ಮಾಡಿ ಎಂದು ಹೇಳುವುದಿಲ್ಲಾ. ನೀವು ವಿದ್ಯಾರ್ಥಿಗಳು ಆಗಿದ್ದಲ್ಲಿ ದಯವಿಟ್ಟು ಓದಿನ ಕಡೆ ಹೆಚ್ಚಿಗೆ ಒಲವು ನೀಡಿ. ಬಿಡುವು ಸಿಕ್ಕಗಾ ಮಾತ್ರ ಇದರ ಕೆಲಸ ಮಾಡಿ ಸಾಕು ನಿಮ್ಮ ಚಾನೆಲ್ ಬೆಳವಣಿಗೆ ಹೊಂದುತ್ತದೆ. ಇನ್ನು ನಮ್ಮ ಚಾನೆಲ್ ಬಗ್ಗೆ ಹೇಳಬೇಕೆಂದರೆ ನಾನು 2017 ಅಲ್ಲಿ ರಚನೆ ಮಾಡಿ ಕೊಂಡೆವು. ಅಗಾ ತುಂಬಾ ಚಾನೆಲ್ ಏನು ಇರಲಿಲ್ಲಾ. ಅದರಲ್ಲೂ ಆಗ ಜಿಯೋ ಬಂದಿತ್ತು. ನಮಗೆ ಒಂದು ಉತ್ತಮವಾದ ದಾರಿ ಸಿಕ್ಕಿತು. ನಿರಂತರ ಪರಿಶ್ರಮ ಹಾಕಿದಿವಿ. ಸೋಲು-ಗೆಲವು,ಕಷ್ಟಾ- ಸುಖ ಎಲ್ಲವನ್ನು ನೋಡುತ್ತಾ ಸತತ ಪರಿಶ್ರಮ ಹಾಕಿ 3 ವರ್ಷದಲ್ಲಿ 1ಮಿಲಿಯನ್ (ಹತ್ತು ಲಕ್ಷ) ಸಬ್ ಸ್ಕ್ರಯಿಬರ್ ಆಯಿತು. ಆದರೆ ಇವಾಗಾ ತುಂಬಾ ಸ್ಪರ್ಧೆ ಇದೆ. ಅದರಲ್ಲೂ ಟೆಕ್ ವಿಡಿಯೋ ಮಾಡುವವರು ತುಂಬಾನೇ ಆಗಿದ್ದಾರೆ.
ನಂತರ ಸಾಮಗ್ರಿಗಳು ಏನೇನು ಬೇಕು?
ಬಹಳಷ್ಟು ಜನ ಅಂದುಕೊಂಡಿರುತ್ತೀರಿ ನಮಗೆ DSLR ಕ್ಯಾಮೆರಾ ಇರಬೇಕು,ಸ್ಟುಡಿಯೋ ಇರಬೇಕು, ಸೆಟಪ್ ಇರಬೇಕು ಮತ್ತು ಗೆಮಿಂಗ್ PC ಇರಬೇಕು ಎಂದು ಕೊಂಡಿರುತ್ತೀರಿ, ನಾವು ಚಾನೆಲ್ ಮಾಡಿದಾಗ ನಮ್ಮ ಹತ್ತಿರ ಒಂದು ಚನ್ನಾಗಿರುವ ಮೊಬೈಲ್ ಕೂಡಾ ಇರಲಿಲ್ಲ. ಲ್ಯಾಪ್ಟಾಪ್ ಅಲ್ಲಿ ಸ್ಕ್ರೀನ್ ರೆಕಾರ್ಡ್ ಮಾಡಿ ಹಾಕುತ್ತಿದ್ದೆ.ಹಾಗಾಗಿ ಅದೇ ಬೇಕು ಇದೆ ಬೇಕು ಎಂದೆನಿಲ್ಲಾ. ಬರೀ ಚನ್ನಾಗಿರುವ ಒಂದು ಮೊಬೈಲ್ ಇದ್ದರೆ ಸಾಕು. ಮುಂದೆ ನಿಮ್ಮ ಚಾನೆಲ್ ಬೆಳೆಯುತ್ತಾ ಹೋದಂತೆ ಹೆಚ್ಚಿಗೆ ದುಡ್ಡು ಬರಲು ಪ್ರಾರಂಭವಾದಾಗ ಎಲ್ಲಾ ಸಾಮಗ್ರಿಗಳನ್ನು ತೆಗೆದುಕೊಳ್ಳಿ. ನಿಮ್ಮ ಒಂದು ಪರಿಶ್ರಮ ಇರಲಿ ಸಾಕು ನಿಜವಾಗಿಯೂ ಬೆಳವಣಿಗೆ ಆಗುತ್ತಿರಿ. ವಿಡಿಯೋ ಮಾಡಿದ ಮೇಲೆ ನೀವು ನಿಮ್ಮ ಸ್ನೇಹಿತರ ಗುಂಪುಗಳಲ್ಲಿ. ಫೆಸ್ಬೂಕ್ ಗುಂಪುಗಳಲ್ಲಿ ಹೀಗೆ ಹಲವಾರು ಗುಂಪುಗಳಲ್ಲಿ ಶೇರ್ ಮಾಡಿ. ಮತ್ತು ಅದರ ಜೊತೆಗೆ ಅವರಿಗೂ ಸಹಿತ ಶೇರ್ ಮಾಡಲು ಕೇಳಿಕೊಳ್ಳಿ.