ಬಹಳ ಜನರಿಗೆ ವ್ಯಾಪಾರ ಪ್ರಾರಂಭ ಮಾಡಬೇಕೆಂದರೆ ಹಣ ಇರುವುದಿಲ್ಲ ಮತ್ತು ಇನ್ನೂ ಕೆಲವು ಜನರಿಗೆ ವ್ಯಾಪಾರ ಯಾವ ರೀತಿ ಪ್ರಾರಂಭ ಮಾಡಬೇಕು ಅಂತ ತರಬೇತಿ ಇರುವುದಿಲ್ಲ ಹಾಗೂ ಇನ್ನು ಕೆಲವರು ವ್ಯಾಪಾರ ಮಾಡುತ್ತಿರುತ್ತಾರೆ ಆದರೆ ವ್ಯಾಪಾರ ಅಭಿವೃದ್ಧಿ ಮಾಡಲು ಹಣದ ತೊಂದರೆ ಇರುತ್ತೆ ಎಲ್ಲಾ ಸಮಸ್ಯೆಗಳಿಗೆ ಕರ್ನಾಟಕ ಸರ್ಕಾರದ ಶ್ರಮಶಕ್ತಿ ಯೋಜನೆಯ ಸಾಲ ಯೋಜನೆ ಅನುಕೂಲ ದಾಯಕವಾಗಿದೆ. ಈ ಸಾಲ ಯೋಜನೆ ಅಡಿಯಲ್ಲಿ rs.50000 ಸಹಾಯಧನವನ್ನು ಕರ್ನಾಟಕ ಸರ್ಕಾರದಿಂದ ಕೊಡಲಾಗುತ್ತಿದೆ.
ಯೋಜನೆ ಅಡಿಯಲ್ಲಿ ಸಾಲವನ್ನು ಪಡೆಯಲು ನಾವು ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಅರ್ಹತೆಗಳು ಏನು ಇರಬೇಕು ಎನ್ನುವುದನ್ನು ಈಗ ನೋಡೋಣ.
ಯೋಜನೆ ಅಡಿಯಲ್ಲಿ ಅಲ್ಪಸಂಖ್ಯಾತ ವರ್ಗದ ಕುಲಕಸುಬು ದಾರರಿಗೆ ತರಬೇತಿ ನೀಡಿ ಅವರು ತಮ್ಮ ಕಲಾತ್ಮಕ ಮತ್ತು ತಾಂತ್ರಿಕ ಕೌಶಲ್ಯವನ್ನು ವೃದ್ಧಿಸಿಕೊಂಡು ಅದೇ ಕಸಬನ ಮುಂದುವರೆಸಲು ಅಥವಾ ಸಣ್ಣ ವ್ಯಾಪಾರವನ್ನು ಪ್ರಾರಂಭಿಸಲು ಅಭಿವೃದ್ಧಿಗೊಳಿಸುವ ಸಲುವಾಗಿ ನಿಗಮದಿಂದ ಶೇಕಡಾ 4ರ ಬಡ್ಡಿ ದರದಲ್ಲಿ 50 ಸಾವಿರದವರೆಗೆ ಕಲ್ಪಿಸಲಾಗುತ್ತದೆ. ಇದರಲ್ಲಿ ಶೇಕಡಾ 50ರಷ್ಟು ಸಾಲವನ್ನು 36 ತಿಂಗಳಿನಲ್ಲಿ ಫಲಾನುಭವಿಯು ಮರುಪಾವತಿ ಮಾಡಿದಲ್ಲಿ ಉಳಿದ ಶೇಕಡಾ 50ರಷ್ಟು ಹಣವನ್ನು ಬ್ಯಾಂಕ್ ಎಂಡ್ ಸಹಾಯ ಧನವನ್ನಾಗಿ ಪರಿಗಣಿಸಲಾಗುತ್ತದೆ. ಫಲಾನುಭವಿಯು ತಾನು ಪಡೆದ ಸಾಲವನ್ನು 36 ತಿಂಗಳೊಳಗಾಗಿ ಮರುಪಾವತಿ ಮಾಡಲು ವಿಫಲರಾದಲ್ಲಿ ಶೇಕಡ 50ರಷ್ಟು ಬ್ಯಾಂಕ್ ಎಂಡ್ ಸಹಾಯಧನವನ್ನು ಸಹ ಸಾಲವೆಂದು ಪರಿಗಣಿಸಲಾಗುತ್ತದೆ.
ಅರ್ಜಿಯನ್ನು ಸಲ್ಲಿಸಲು ಈ ಕೆಳಗಿನ ಅರ್ಹತೆಗಳು ಇರಬೇಕು
ಅರ್ಜಿದಾರರು ಸರ್ಕಾರಿ ಆದೇಶದಲ್ಲಿ ವಿವರಿಸಿದಂತೆ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿರಬೇಕು ಮತ್ತು ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು. ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರಬೇಕು. ಎಲ್ಲಾ ಮೂಲಗಳಿಂದ ಕುಟುಂಬದ ವಾರ್ಷಿಕ ಆದಾಯ ರೂಪಾಯಿ 3ಲಕ್ಷ 50 ಸಾವಿರಕ್ಕಿಂತ ಕಡಿಮೆ ಇರಬೇಕು. ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಕೇಂದ್ರ ಅಥವಾ ರಾಜ್ಯ ಸರ್ಕಾರಿ ನೌಕರರ ಆಗಿರಬಾರದು. ಕಳೆದ ಐದು ವರ್ಷಗಳಲ್ಲಿ ಅರ್ಜಿದಾರ ಅಥವಾ ಅವನ ಅಥವಾ ಅವಳ ಕುಟುಂಬದ ಸದಸ್ಯರು ಸರ್ಕಾರದ ಅಥವಾ ನಿಗಮದ ಯಾವುದೇ ಇತರ ಯೋಜನೆ ಅಡಿಯಲ್ಲಿ ( ಅರಿವು ಯೋಜನೆ ಹೊರತುಪಡಿಸಿ )ಸಾಲ ಸೌಲಭ್ಯಗಳನ್ನು
ಪಡೆದಿರಬಾರದು
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು :
* ಯೋಜನಾ ವರದಿ
* ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ ಪ್ರಮಾಣ ಪತ್ರ
* ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಆದಾಯ ಪ್ರಮಾಣ ಪತ್ರ
* ಫಲಾನುಭವಿಯ ಆಧಾರ್ ಕಾರ್ಡ್
ಈ ಮೇಲಿನ ಎಲ್ಲಾ ದಾಖಲಾತಿಗಳೊಂದಿಗೆ ಆರ್ಯ ಅಭ್ಯರ್ಥಿಗಳು ಶ್ರಮಶಕ್ತಿ ಯೋಜನೆ ಅಡಿಯಲ್ಲಿ ನೇರವಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಕರ್ನಾಟಕ ಸರ್ಕಾರದಿಂದ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ಜುಲೈ 2022.